50ಕ್ಕೂ ಹೆಚ್ಚು ವಿಶ್ವನಾಯಕರಿಂದ ಮೋದಿಗೆ ಅಭಿನಂದನೆಗಳ ಮಹಾಪೂರ!

Public TV
6 Min Read
African Union g20 1

ನವದೆಹಲಿ:‌ ಲೋಕಸಭಾ ಚುನಾವಣೆಯಲ್ಲಿ (Parliamentary elections) ಸತತ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ನಿರ್ಗಮಿತ ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎ ಬಹುಮತದೊಂದಿಗೆ 3ನೇ ಅವಧಿಗೆ ಅಧಿಕಾರದ ಗದ್ದುಗೆ ಏರುವ ವಿಶ್ವಾಸದಲ್ಲಿದ್ದಾರೆ. ಈ ನಡುವೆ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಮೋದಿ ಅವರಿಗೆ 50ಕ್ಕೂ ಹೆಚ್ಚು ವಿಶ್ವನಾಯಕರಿಂದ (World Leaders) ಅಭಿನಂದನಾ ಮಹಾಪೂರವೇ ಹರಿದುಬಂದಿದೆ.

ಶ್ರೀಲಂಕಾ, ಮಾಲ್ಡೀವ್ಸ್‌, ಇರಾನ್‌, ಸೆಶೆಲ್ಸ್‌, ನೈಜೀರಿಯಾ, ಕೀನ್ಯಾ ಮತ್ತು ಕೊಮೊರೊಸ್‌ ಅಧ್ಯಕ್ಷರು, ನೇಪಾಳ, ಬಾಂಗ್ಲಾದೇಶ, ಭೂತಾನ್‌, ಮ್ಯಾನ್ಮಾರ್‌, ಮಾರಿಷಸ್‌ನ ಪ್ರಧಾನಿಗಳು, ಕೆರಿಬಿಯನ್ ರಾಷ್ಟ್ರಗಳಾದ ಜಮೈಕಾ, ಬಾರ್ಬಡೋಸ್ ಮತ್ತು ದಕ್ಷಿಣ ಅಮೆರಿಕದ ಗಯಾನಾ ನಾಯಕರು ನರೇಂದ್ರ ಮೋದಿ (Narendra Modi) ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದರೊಂದಿಗೆ ಇಟಲಿ, ಜಪಾನ್ ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷರು, ಜಿ20 ರಾಷ್ಟ್ರಗಳ ನಾಯಕರು, ಆಗ್ನೇಯ ಏಷ್ಯಾದಿಂದ, ಸಿಂಗಾಪುರ ಮತ್ತು ಮಲೇಷ್ಯಾದ ಪ್ರಧಾನ ಮಂತ್ರಿಗಳು ಮೋದಿಗೆ ಶುಭಸಂದೇಶಗಳನ್ನ ಕಳುಹಿಸಿದ್ದಾರೆ.

RAJGHAT G20 LEADERS 1

543 ಸದಸ್ಯ ಬಲದ ಲೋಕಸಭೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಪಡೆದು 2019ರ ಚುನಾವಣೆಗಿಂತಲೂ 63 ಸ್ಥಾನಗಳಲ್ಲಿ ಕುಸಿತ ಕಂಡಿದ್ದರೆ, ಕಾಂಗ್ರೆಸ್‌ ಕಳೆದ ಬಾರಿಗಿಂತಲೂ 47 ಹೆಚ್ಚಿನ ಸ್ಥಾನಗಳನ್ನ ಗೆದ್ದುಕೊಂಡಿದ್ದು, 99 ಸ್ಥಾನಗಳಲ್ಲಿ ವಿಜಯ ಸಾಧಿಸಿದೆ. ಒಟ್ಟಾರೆಯಾಗಿ ಎನ್‌ಡಿಎ ಕೂಟ 291, ಇಂಡಿಯಾ ಒಕ್ಕೂಟ 234 ಹಾಗೂ ಇತರ ಪಕ್ಷಗಳು 18 ಸ್ಥಾನಗಳನ್ನ ಗೆದ್ದಿವೆ.  

ಜೂ.8ರಂದು ಮೋದಿ ಪ್ರಮಾಣವಚನ:
ಬುಧವಾರ (ಜೂ.5) ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನರೇಂದ್ರ ಮೋದಿ ಅವರು, ಜೂನ್ 8ರ ಶನಿವಾರ ಸಂಜೆ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿ ರಾಜೀನಾಮೆ

ಈ ಮೂಲಕ ನರೇಂದ್ರ ಮೋದಿಯವರು 3 ನೇ ಬಾರಿಗೆ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಇಂದು (ಬುಧವಾರ) ಸಂಜೆ ರಾಷ್ಟ್ರಪತಿಗಳಿಗೆ ಎನ್‌ಡಿಎ ಮೈತ್ರಿಕೂಟದ ಬೆಂಬಲ ಪತ್ರ ನೀಡುವ ಸಾಧ್ಯತೆ ಇದೆ. ಪ್ರಧಾನಿ ಮೋದಿ ಕೊನೆಯದಾಗಿ ಇಂದು ಕೇಂದ್ರ ಸಚಿವ ಸಂಪುಟ ಸಭೆ ನಡೆಸಿದರು. ಇಂದಿಗೆ 17 ನೇ ಲೋಕಸಭೆ (17th Lok Sabha) ವಿಸರ್ಜನೆಗೆ ಶಿಫಾರಸು ಮಾಡಲಾಗಿದೆ. ಇದನ್ನೂ ಓದಿ: ನಿತೀಶ್‌, ಯಾದವ್‌ ಒಂದೇ ವಿಮಾನದಲ್ಲಿ ಪ್ರಯಾಣ- ಊಹಾಪೋಹ ಅಲ್ಲಗೆಳೆದ ಜೆಡಿಯು

ಜೂನ್‌ 7 ರ ಶುಕ್ರವಾರ ಮಧ್ಯಾಹ್ನ 2.30 ಕ್ಕೆ ಸಂಸತ್ ಭವನದಲ್ಲಿ ಎನ್‌ಡಿಎ ಸಂಸದರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ವಿವಿಧ ಪಕ್ಷಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ. ಮರುದಿನ ಅಂದರೆ ಜೂನ್ 8 ರಂದು ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಪ್ರಮಾಣ ವಚನ ಕಾರ್ಯಕ್ರಮ ಸಂಜೆ 7 ರಿಂದ 8 ಗಂಟೆಯವರೆಗೆ ನಡೆಯಬಹುದು ಎಂಬುದಾಗಿ ಮೂಲಗಳಿಂದ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಮಹಾರಾಷ್ಟ್ರ ಸೋಲಿಗೆ ನಾನೇ ಹೊಣೆ – ಡಿಸಿಎಂ ಹುದ್ದೆಗೆ ದೇವೇಂದ್ರ ಫಡ್ನವಿಸ್‌ ರಾಜೀನಾಮೆ

Share This Article