3 ದಿನ ದಸರಾ ರಜೆ ಹಿನ್ನೆಲೆ ಮೆಜೆಸ್ಟಿಕ್‌ನಿಂದ 2000ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ

Public TV
1 Min Read
KSRTC

-ಬೆಂಗಳೂರಿನಿಂದ ಮೈಸೂರಿಗೆ ಪ್ರತ್ಯೇಕವಾಗಿ 660 ವಿಶೇಷ ಬಸ್‌ಗಳು

ಬೆಂಗಳೂರು: ಮೂರು ದಿನಗಳ ಕಾಲ ದಸರಾ (Dasara) ರಜೆ ಹಿನ್ನೆಲೆ ಮೆಜೆಸ್ಟಿಕ್‌ನಿಂದ (Majestic) 2000ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ (KSRTC) ಬಸ್ಸುಗಳು ಕಾರ್ಯನಿರ್ವಹಿಸಲಿವೆ.

ಅ.11 ರಂದು ಆಯುಧ ಪೂಜೆ, ಅ.12 ರಂದು ವಿಜಯದಶಮಿ ಹಾಗೂ ಎರಡನೇ ಶನಿವಾರ, ಅ.13 ರಂದು ಭಾನುವಾರ. ಹೀಗಾಗಿ ಮೂರು ದಿನಗಳ ಕಾಲ ರಜೆಯಿರುವ ಹಿನ್ನೆಲೆ ಜನರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಜನಜಂಗುಳಿಯಿಂದ ಕೂಡಿದೆ.ಇದನ್ನೂ ಓದಿ: ಧಾರವಾಡ| 24 ಗಂಟೆಯಾದ್ರೂ ಬೈಪಾಸ್ ರಸ್ತೆಯಲ್ಲಿ ಕಡಿಮೆಯಾಗದ ನೀರಿನ ಹರಿವು- ಪ್ರಯಾಣಿಕರ ಪರದಾಟ

ಮೂರು ದಿನಗಳ ಕಾಲ ರಜೆಯಿರುವ ಹಿನ್ನೆಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ವತಿಯಿಂದ 2000ಕ್ಕೂ ಹೆಚ್ಚು ಬಸ್‌ಗಳು ಕಾರ್ಯನಿರ್ವಹಿಸಲಿದ್ದು, ಅ.9 ರಿಂದ 12ರವರಗೆ ಬೆಂಗಳೂರಿನಿಂದ ರಾಜ್ಯ ಹಾಗೂ ಅಂತರರಾಜ್ಯದ ವಿವಿಧ ಸ್ಥಳಗಳಿಗೆ 2000ಕ್ಕೂ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಹಾಗೂ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಅ.13 ಹಾಗೂ 14 ರಂದು ಬಸ್‌ಗಳು ಕಾರ್ಯನಿರ್ವಹಿಸಲಿವೆ.

ಮೈಸೂರು ದಸರಾ ಜಂಬೂಸವಾರಿ ಹಿನ್ನೆಲೆ ಬೆಂಗಳೂರಿನಿಂದ ಮೈಸೂರಿಗೆ ಪ್ರತ್ಯೇಕವಾಗಿ 660 ದಸರಾ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಫ್ಲೈ ಬಸ್ ಕಾರ್ಯಾನಿರ್ವಹಿಸಲಿವೆ.ಇದನ್ನೂ ಓದಿ: ದಲಿತ ನಾಯಕನನ್ನ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಮಾಡಲಿ- ಕಾಂಗ್ರೆಸ್‌ಗೆ ಜೆಡಿಎಸ್ ಸವಾಲ್

 

Share This Article