ಚೆನ್ನೈ: ತರಬೇತಿಗೆ ತೆರಳಿದ್ದ 20ಕ್ಕೂ ಅಧಿಕ ವಿದ್ಯಾರ್ಥಿಗಳು ಕಾಡ್ಗಿಚ್ಚಿನಲ್ಲಿ ಸಿಲುಕಿಕೊಂಡಿದ್ದು, ಅದರಲ್ಲಿ 15 ಮಂದಿಯನ್ನು ರಕ್ಷಿಸಲಾಗಿದೆ.
ಈ ಘಟನೆ ದಕ್ಷಿಣ ತಮಿಳುನಾಡಿನ ಥೇಣಿ ಜಿಲ್ಲೆಯ ಕುರಂಗಣಿ ಅರಣ್ಯ ಪ್ರದೇಶದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಘಟನೆಯಲ್ಲಿ 15 ಮಂದಿ ವಿದ್ಯಾರ್ಥಿಗಳನ್ನು ಈಗಾಗಲೇ ರಕ್ಷಿಸಲಾಗಿದ್ದು, ವಿದ್ಯಾರ್ಥಿಗಳ ಪತ್ತೆಗೆ ಅಗ್ನಿಶಾಮಕದಳ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ತಮಿಳುನಾಡು ಮುಖ್ಯಮಂತ್ರಿ ಪಳನೀಸ್ವಾಮೀ ಅವರು ರಕ್ಷಣಾ ಕಾರ್ಯಕ್ಕೆ ಸಹಾಯ ಮಾಡುವಂತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಈಗಾಗಲೇ ಮನವಿಮಾಡಿಕೊಂಡಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿಯ ಜೊತೆ ಕೂಡ ನಿರಂತರ ಸಂಪರ್ಕ ಹೊಂದಿದ್ದು, ಮಾಹಿತಿಯನ್ನು ಪಡೆಯುತ್ತಿದ್ದಾರೆ. ಸುಮಾರು 10-15 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ ಅಂತ ಜಿಲ್ಲಾಧಿಕಾರಿ ತಿಳಿಸಿರುವುದಾಗಿ ವರದಿಯಾಗಿದೆ.
Advertisement
ಈ ಕುರಿತು ಸರಣಿ ಟ್ವೀಟ್ ಮಾಡುತ್ತಿರುವ ರಕ್ಷಣಾ ಸಚಿವೆ, ರಕ್ಷಣಾ ಕಾರ್ಯಕ್ಕಾಗಿ 2 ಹೆಲಿಕಾಪ್ಟರ್ ಗಳನ್ನು ಕಳುಹಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ವೈದ್ಯರ ತಂಡಗಳನ್ನು ನಿಯೋಜಿಸಲಾಗಿದ್ದು, ಅವರು ಕೂಡ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
Advertisement
ಕೊಯಂಬುತ್ತೂರು ಹಾಗೂ ಈರೋಡ್ ವಿದ್ಯಾರ್ಥಿಗಳು ತರಬೇತಿಗಾಗಿ ಅರಣ್ಯ ಪ್ರದೇಶಕ್ಕೆ ತೆರಳಿದ್ದರು. ಮಧ್ಯಾಹ್ನದ ಬಳಿಕ ಏಕಾಏಕಿ ಅರಣ್ಯಕ್ಕೆ ಬೆಂಕಿ ಬಿದ್ದಿದೆ. ಪರಿಣಾಮ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ.
#KuranganiForestFire Update: 16 commandos of Garud Commando Force and 4 choppers from the Indian Air Force, with one of them at stand by, at the search and rescue operation since this morning. Operation underway. 15 people have been rescued so far. #TamilNadu
— ANI (@ANI) March 12, 2018
#UPDATE: IAF helicopters arrive at Theni for the search and rescue operation of those stuck in the #KuranganiForestFire in Tamil Nadu. 15 people have been rescued so far. pic.twitter.com/WTBrBKxoLg
— ANI (@ANI) March 12, 2018
Total 37 people in two separate groups reached Kolukkumalai for trekking on Saturday. They camped in an estate & were returning when the fire broke out in forest. I haven't got information on casualty. 15 people have received burn injuries:Pallavi Baldev,District Collector #Theni pic.twitter.com/Q6UsjYV8uZ
— ANI (@ANI) March 11, 2018
Responding to request from Tamil Nadu CM Edappadi K Palaniswami on forest -fire related issue- 20 students are caught in Kurangani, Theni. Instructed Indian Air Force to help in rescue & evacuation. Southern Command is in touch with Collector of Theni: Defence Minister (file pic) pic.twitter.com/dzTThuMzES
— ANI (@ANI) March 11, 2018
Visuals of forest-fire in Kurangani, Theni. #TamilNadu pic.twitter.com/KwkxgfFMfc
— ANI (@ANI) March 11, 2018
Just now I have spoken to District Collector. He communicated that 10-15 students have been rescued. They are coming down from the hill. Operation continues.: Defence Minister Nirmala Sitharaman's tweet on forest-fire in Tamil Nadu (file pic) pic.twitter.com/4ZlpOOFALe
— ANI (@ANI) March 11, 2018