ಲಕ್ನೋ: ಲಕ್ನೋದ ಠಾಕೂರ್‌ಗಂಜ್‌ನ ಮುಸಾಹಿಬ್‌ಗಂಜ್‌ನಲ್ಲಿರುವ ತಮ್ಮ ಮನೆಯ ಹೊರಗೆ ಆಟವಾಡುತ್ತಿದ್ದ ಇಬ್ಬರು ಮಕ್ಕಳ ಮೇಲೆ 20ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ದಾಳಿಯಲ್ಲಿ 8 ವರ್ಷದ ಹುಡುಗ ಮೃತಪಟ್ಟಿದ್ದು, ಮೃತನ ಸಹೋದರಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ತೀವ್ರವಾಗಿ ಗಾಯಗೊಂಡಿದ್ದ ಅಣ್ಣ-ತಂಗಿಯನ್ನು ಕೆಜಿಎಂಯುನ ಟ್ರಾಮಾ ಸೆಂಟರ್‌ಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಆದರೆ ಬಾಲಕ ಮೊಹಮ್ಮದ್ ಹೈದರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಅವರ 5 ವರ್ಷದ ಸಹೋದರಿ ಜನ್ನತ್ ಸ್ಥಿತಿ ಗಂಭೀರವಾಗಿದ್ದು, ICUಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಕಬಡ್ಡಿ ಆಟಗಾರ ಧರ್ಮಿಂದರ್ ಸಿಂಗ್ ಮನೆಗೆ ಭೇಟಿ ಕೊಟ್ಟ ನವಜೋತ್ ಸಿಂಗ್ ಸಿಧು
ಮೃತ ಬಾಲಕನ ಪೋಷಕರು ಲಕ್ನೋದ ಮುನ್ಸಿಪಲ್ ಕಾರ್ಪೊರೇಷನ್ ವಿರುದ್ಧ ಧ್ವನಿ ಎತ್ತಿದ್ದಾರೆ. ಬೀದಿ ನಾಯಿಗಳನ್ನು ಹಿಡಿಯಲು ಆದೇಶ ನೀಡಬೇಕೆಂದು ಅವರು ಅಧಿಕಾರಿಗಳಿಗೆ ಈ ಹಿಂದೆಯೇ ಮನವಿ ಮಾಡಿದ್ದರು. ಪದೇ – ಪದೇ ಸ್ಥಳಿಯರಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರು ನೀಡಿ ಮನವರಿಕೆ ಮಾಡಿಕೊಡಲಾಗಿತ್ತು. ಆದರೂ, ಲಕ್ನೋ ಮಹಾನಗರ ಪಾಲಿಕೆ (LMC) ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಸರ್ಕಾರೇತರ ಸಂಸ್ಥೆಗಳು (NGO) ನಾಯಿಗಳನ್ನು ಹಿಡಿಯಲು ವಿರೋಧ ವ್ಯಕ್ತಪಡಿಸಿರುವುದರಿಂದ ನಾಯಿಗಳನ್ನು ಹಿಡಿಯಲು ಸಾಧ್ಯವಿಲ್ಲ ಎಂದು ಎಲ್‌ಎಂಸಿ ನಿರಾಕರಿಸಿತ್ತು. ಸಂತ್ರಸ್ತೆಯ ತಂದೆ ಮುನ್ಸಿಪಲ್ ಕಾರ್ಪೊರೇಷನ್ ವಲಯ 6ರ ಅಧಿಕಾರಿಗಳು ಮತ್ತು ಇತರರ ವಿರುದ್ಧ ಠಾಕೂರ್‌ಗಂಜ್ ಪೊಲೀಸರಿಗೆ ದೂರು ನೀಡಿದ್ದಾರೆ.