ಜೆರುಸಲೇಂ: ಮೆಕ್ಕಾದಲ್ಲಿ (Mecca) ಮಿತಿ ಮೀರಿದ ತಾಪಮಾನದಿಂದ ಹಜ್ ಯಾತ್ರೆ ಸಂದರ್ಭದಲ್ಲಿ ಮೃತಪಟ್ಟ 1,300ಕ್ಕೂ ಹೆಚ್ಚು ಜನರ ಪೈಕಿ 83% ಜನರು (Hajj Pilgrims) ಅಧಿಕೃತವಾಗಿ ನೋಂದಣಿ ಮಾಡಿಕೊಂಡಿರಲಿಲ್ಲ ಎಂದು ಸೌದಿ ಅರೇಬಿಯಾ (Saudi Arabia) ಹೇಳಿದೆ.
ದುರದೃಷ್ಟಕರ ಈ ಬಾರಿ ಮೃತರ ಸಂಖ್ಯೆ 1,301ಕ್ಕೆ ಏರಿಕೆಯಾಗಿದೆ. ಈ ಪೈಕಿ 83% ಜನರು ಅನಧಿಕೃತವಾಗಿ ಹಜ್ ಯಾತ್ರೆಗೆ ಬಂದಿದ್ದರು. ಅವರಿಗೆ ಸೂರು ಹಾಗೂ ಮೂಲ ಸೌಕರ್ಯ ಸಿಗದ ಕಾರಣ ಬಿಸಿಲಿನಲ್ಲಿ ಬಣಗುವಂತಾಗಿದೆ, ಇದರಿಂದ ಮೃತಪಟ್ಟಿರುವುದಾಗಿ ಸೌದಿ ಅಧಿಕೃತ ಹೇಳಿಕೆ ಪ್ರಕಟಿಸಿದೆ. ಇದನ್ನೂ ಓದಿ: 24 ವರ್ಷಗಳ ನಂತರ ಉ.ಕೊರಿಯಾಗೆ ರಷ್ಯಾ ಅಧ್ಯಕ್ಷ ಭೇಟಿ – ನ್ಯಾಟೊ ಒಕ್ಕೂಟ ರಾಷ್ಟ್ರಗಳಲ್ಲಿ ನಡುಕ!
Advertisement
Advertisement
ಮರಣ ಸಂಖ್ಯೆ ಹೆಚ್ಚಿದ್ದು ಏಕೆ?
ಪ್ರತಿ ವರ್ಷದಂತೆ ಈ ವರ್ಷವೂ ಅಮೆರಿಕ (USA), ಇಂಡೋನೇಷ್ಯಾ, ಭಾರತ ಸೇರಿದಂತೆ 10ಕ್ಕೂ ಹೆಚ್ಚು ರಾಷ್ಟ್ರಗಳಿಂದ ಸುಮಾರು 16 ಲಕ್ಷ ಯಾತ್ರಿಕರು ಬಂದಿದ್ದರು. ಈ ವೇಳೆ ಮಿತಿಮೀರಿದ ತಾಪಮಾನ ಏರಿಕೆಯಿಂದ 1,301 ಮಂದಿ ಯಾತ್ರಿಕರು ಮೃತಪಟ್ಟಿದ್ದಾರೆ. ಸುಮಾರು 3000 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತರ ಪೈಕಿ ಶೇ.83 ಮಂದಿ ಅಧಿಕೃತವಾಗಿ ನೋಂದಣಿ ಮಾಡಿಕೊಂಡಿರಲಿಲ್ಲ. ಅಧಿಕೃತವಾಗಿ ನೋಂದಣಿ ಮಾಡಿಕೊಂಡಿದ್ದವರಿಗಷ್ಟೇ ಕೊಠಡಿ ಹಾಗೂ ಮೂಲ ಸೌಕರ್ಯಗಳ ವ್ಯವಸ್ಥೆ ಸಿಗಲಿದೆ ಎಂದ ಹೇಳಲಾಗಿದೆ. ಈ ನಡುವೆ ಅರಬ್ ರಾಜತಾಂತ್ರಿಕರು ಈಜಿಪ್ಟ್‌ನಿಂದ ಬಂದವರಲ್ಲಿ ಕಳೆದವಾರ 658 ಸಾವನ್ನಪ್ಪಿದ್ದಾರೆ. ಅವರಲ್ಲಿ 630 ನೋಂದಾಯಿಸದ ಯಾತ್ರಿಕರು ಎಂದು ಹೇಳಿದ್ದಾರೆ.
Advertisement
Advertisement
ಸೌದಿ ಅರೇಬಿಯಾದ ರಾಷ್ಟ್ರೀಯ ಹವಾಮಾನ ಕೇಂದ್ರದ ಪ್ರಕಾರ ಈ ವರ್ಷ ಮೆಕ್ಕಾದಲ್ಲಿ ತಾಪಮಾನವು 51.8 ಡಿಗ್ರಿ ಸೆಲ್ಸಿಯಸ್ (125 ಡಿಗ್ರಿ ಫ್ಯಾರನ್‌ಹೀಟ್)ಗೆ ಏರಿಕೆಯಾಗಿತ್ತು. ಇದನ್ನೂ ಓದಿ: ಕುರಾನ್‌ಗೆ ಅಪಮಾನ – ಠಾಣೆಗೆ ನುಗ್ಗಿ ಆರೋಪಿಯನ್ನ ಗುಂಡಿಕ್ಕಿ ಕೊಂದ ಉದ್ರಿಕ್ತ ಗುಂಪು!
ಹಜ್ ಯಾತ್ರೆ ಕೈಗೊಳ್ಳುವುದು ಏಕೆ?
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಪವಿತ್ರ ಹಜ್ ಯಾತ್ರೆ ನಡೆಯುತ್ತದೆ. ಜೀವನದಲ್ಲಿ ಒಂದು ಬಾರಿಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕು ಎಂದು ಇಸ್ಲಾಂ ಹೇಳುತ್ತದೆ. ಹಜ್‌ನ ಧಾರ್ಮಿಕ ವಿಧಿ-ವಿಧಾನಗಳು ಈ ಹಬ್ಬದೊಂದಿಗೆ ಮುಕ್ತಾಯಗೊಳ್ಳುತ್ತದೆ. ಬಕ್ರೀದ್ ಮುನ್ನಾದಿನ ಅಥವಾ ‘ದುಲ್ ಹಜ್’ ತಿಂಗಳ ಒಂಬತ್ತರಂದು ಹಜ್ ಯಾತ್ರಿಕರು ಮಕ್ಕಾ ನಗರದ ಅರಫಾತ್ ಎಂಬ ಬೆಟ್ಟದ ಬಳಿ ಸೇರುತ್ತಾರೆ. ಈ ಯಾತ್ರಿಕರಿಗೆ ಬೆಂಬಲ ನೀಡಲು ವಿಶ್ವದಾದ್ಯಂತ ಮುಸ್ಲಿಮರು ಈ ದಿನ ಉಪವಾಸವಿರುತ್ತಾರೆ.