ಲಕ್ನೋ: ಉತ್ತರ ಪ್ರದೇಶ (Uttara Pradesh) ಸರ್ಕಾರದ 13 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಆಗಸ್ಟ್ ತಿಂಗಳ ವೇತನ (August Salary) ಪಾವತಿಯಾಗುವುದು ಅನುಮಾನ.
ಭ್ರಷ್ಟಾಚಾರದ (Corruption) ವಿರುದ್ಧ ಸಮರ ಸಾರಿರುವ ಉತ್ತರ ಪ್ರದೇಶ ಸರ್ಕಾರ ಎಲ್ಲಾ ಸರ್ಕಾರಿ ಉದ್ಯೋಗಿಗಳು ತಮ್ಮ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಮಾನವ ಸಂಪದಾ ಪೋರ್ಟಲ್‌ನಲ್ಲಿ ಸಲ್ಲಿಸಬೇಕೆಂದು ಸೂಚಿಸಿದೆ.
ಉದ್ಯೋಗಿಗಳು ಆಗಸ್ಟ್ 31 ರೊಳಗೆ ತಮ್ಮ ಆಸ್ತಿಯ ವಿವರವನ್ನು ಘೋಷಿಸಬೇಕು. ಒಂದು ವೇಳೆ ಘೋಷಿಸದೇ ತಿಂಗಳ ಸಂಬಳವನ್ನು ಪಾವತಿಸಲಾಗುವುದಿಲ್ಲ ಜೊತೆಗೆ ಬಡ್ತಿಯ ಮೇಲೂ ಇದು ಗಂಭೀರ ಪರಿಣಾಮ ಬೀರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಅನಿಲ್ ಅಂಬಾನಿಗೆ ಸೆಬಿ ಶಾಕ್ – ಸೆಕ್ಯೂರಿಟೀಸ್ ಮಾರುಕಟ್ಟೆಯಿಂದ 5 ವರ್ಷ ಬ್ಯಾನ್, 25 ಕೋಟಿ ದಂಡ
ಸರ್ಕಾರ ಈಗ ಹಿಂದೆ ಕಳೆದ ವರ್ಷದ ಡಿಸೆಂಬರ್ 31ಕ್ಕೆ ಗಡುವು ನೀಡಿತ್ತು. ನಂತರ ಹಲವು ಬಾರಿ ವಿಸ್ತರಣೆ ಮಾಡಿ ಈಗ ಆ.31 ರಂದು ಕೊನೆಯದಾಗಿ ಡೆಡ್‌ಲೈನ್ ವಿಸ್ತರಿಸಿದೆ. ರಾಜ್ಯದಲ್ಲಿನ 17,88,429 ಸರ್ಕಾರಿ ನೌಕರರ ಪೈಕಿ 26% ಉದ್ಯೋಗಿಗಳು ಮಾತ್ರ ವೆಬ್‌ಸೈಟ್‌ನಲ್ಲಿ ವಿವರ ಸಲ್ಲಿಸಿದ್ದು ಇನ್ನೂ 13 ಲಕ್ಷಕ್ಕೂ ಹೆಚ್ಚು ನೌಕರರು ತಮ್ಮ ಆಸ್ತಿಯನ್ನು ಬಹಿರಂಗಪಡಿಸಬೇಕಿದೆ.
ವರದಿಗಳ ಪ್ರಕಾರ ಹೊಸ ಗಡುವಿನ ಮೊದಲು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸುವವರಿಗೆ ಮಾತ್ರ ಈ ತಿಂಗಳ ವೇತನವನ್ನು ಪಾವತಿಸಲಾಗುತ್ತದೆ. ಈ ನಿಯಮವು ಎಲ್ಲಾ ವರ್ಗದ ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ಅನ್ವಯಿಸುತ್ತದೆ . ಇದನ್ನೂ ಓದಿ: ಮೋದಿ ಉತ್ತರಾಧಿಕಾರಿ ಯಾರು? ಅಮಿತ್ ಶಾ, ಗಡ್ಕರಿ, ಯೋಗಿ.. ಯಾರಿಗೆ ಹೆಚ್ಚು ಜನರ ಒಲವು?
ಈ ಕ್ರಮವು ಸರ್ಕಾರದೊಳಗೆ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ನಾವು ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣು ನೀತಿಯನ್ನು ಹೊಂದಿದ್ದೇವೆ ಎಂದು ಯುಪಿ ಸರ್ಕಾರದ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ (Danish Azad Ansari) ಹೇಳಿದ್ದಾರೆ.