– 4.25 ರೂ ಮೌಲ್ಯದ ವಿದೇಶ ಕರೆನ್ಸಿ ವಶ
ಹೈದರಾಬಾದ್: ಅಕ್ರಮವಾಗಿ 11.1 ಕೆಜಿ ಚಿನ್ನ, ಯುಎಇ ಮತ್ತು ಸಿಂಗಾಪುರ ದೇಶಗಳ ಕರೆನ್ಸಿ ಸಾಗಿಸುತ್ತಿದ್ದ ಮಹಿಳೆಯನ್ನು ಬಂಧಿಸಿದ ಘಟನೆ ಹೈದರಾಬಾದ್‍ನ ರಾಜೀವ್ ಗಾಂಧಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಬಂಧಿತ ಮಹಿಳೆ ದುಬೈ ಮೂಲದವಳು ಎಂದು ತಿಳಿದುಬಂದಿದೆ. ಆರೋಪಿ ಮಹಿಳೆಯು ಕಳೆದ ಮೂರು ತಿಂಗಳಿನಿಂದ ಹೈದರಾಬಾದ್‍ನಲ್ಲಿ ನೆಲೆಸಿದ್ದಳು.
Hyderabad: Directorate of Revenue Intelligence (DRI), today, seized 11.1 kg gold worth Rs 3,63,52,500 from a woman passenger at Rajiv Gandhi International Airport and Rs 1.5 crore worth of foreign currency from the hotel the woman was staying in. pic.twitter.com/kxGQUGXSXb
— ANI (@ANI) May 28, 2019
ಹೈದರಾಬಾದ್‍ನ ವಿಮಾನ ನಿಲ್ದಾಣದ ಎಕ್ಸಿಟ್ ಗೇಟ್‍ನಲ್ಲಿ ಇಂದು ಬೆಳಗ್ಗೆ ಬ್ಯಾಗ್‍ಗಳನ್ನು ಪರಿಶೀಲನೆ ಮಾಡಲಾಗುತಿತ್ತು. ಈ ವೇಳೆ ದುಬೈನಿಂದ ಆಗಮಿಸಿದ ಮಹಿಳೆಯ ಬ್ಯಾಗ್‍ನಲ್ಲಿ ಬಟ್ಟೆ, ಸಾಕ್ಸ್ ಒಳಗೆ ಇಟ್ಟಿದ್ದ 3,63,52,500 ಕೋಟಿ ರೂ. ಮೌಲ್ಯದ 11.1 ಕೆ.ಜಿ ಚಿನ್ನ ಪತ್ತೆಯಾಗಿದೆ. ಅಷ್ಟೇ ಅಲ್ಲದೆ 4,25,312 ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಮಹಿಳೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಮಹಿಳೆ ಫೈ ಸ್ಟಾರ್ ಹೋಟೆಲ್‍ನ ರೂಮ್ ಒಂದರಲ್ಲಿ ಕಳೆದ ಮೂರು ತಿಂಗಳಿಂದ ವಾಸವಾಗಿದ್ದ ಮಾಹಿತಿ ಸಿಕ್ಕಿತ್ತು. ತಕ್ಷಣವೇ ರೂಮ್ ಪರಿಶೀಲನೆ ಮಾಡಿದ ಅಧಿಕಾರಿಗಳಿಗೆ 1.5 ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿ ಸಿಕ್ಕಿದೆ.