ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಕ್ರಮ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ತನಿಖೆ ತೀವ್ರಗೊಳಿಸಿದ್ದು, ಶುಕ್ರವಾರದಂದು ನೀರವ್ ಮೋದಿ ಪತ್ನಿಗೆ ವಿಚಾರಣೆಗಾಗಿ ನೋಟಿಸ್ ನೀಡಿದೆ.
Advertisement
11,300 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಭರಣ ವಿನ್ಯಾಸಕ ನೀರವ್ ಮೋದಿಗೆ ಸೇರಿದ 44 ಕೋಟಿ ರೂ. ಠೇವಣಿ ಹಾಗೂ ಶೇರ್‍ಗಳನ್ನ ಇಡಿ ಜಪ್ತಿ ಮಾಡಿದೆ. ಇಡಿ ಜಪ್ತಿ ಮಾಡಿರುವ ಬ್ಯಾಂಕ್ ಖಾತೆಯಲ್ಲಿ 30 ಕೋಟಿ ರೂ. ಹಣವಿದ್ದು, ಶೇರ್‍ಗಳ ಮೊತ್ತ 13.86 ಕೋಟಿ ರೂ.ನದ್ದಾಗಿದೆ. ಜೊತೆಗೆ ನೀರವ್ ಮೋದಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ 60 ಪ್ಲಾಸ್ಟಿಕ್ ಕಂಟೇನರ್‍ಗಳಲ್ಲಿದ್ದ 10 ಸಾವಿರಕ್ಕೂ ಹೆಚ್ಚು ಇಂಪೋರ್ಟೆಡ್ ವಾಚ್‍ಗಳನ್ನ ಜಪ್ತಿ ಮಾಡಲಾಗಿದೆ.
Advertisement
Advertisement
ನೀರವ್ ಮೋದಿ ಡಿಸೈನರ್ ಆಭರಣಗಳ ವ್ಯವಾಹರ ಮಾಡ್ತಿದ್ದರಿಂದ ಡಿಸೈನರ್ ವಾಚ್‍ಗಳ ಸಂಗ್ರಹಕ್ಕಾಗಿ ಈ ವಾಚ್‍ಗಳನ್ನ ಆಮದು ಮಾಡಿಕೊಂಡಿರಬಹುದು ಎನ್ನಲಾಗಿದೆ. ಅಲ್ಲದೆ ಈ ವಾಚ್‍ಗಳನ್ನ ಉಡುಗೊರೆ ನೀಡುವ ಉದ್ದೇಶದಿಂದ ಆಮದು ಮಾಡಿಕೊಂಡಿರುವ ಸಾಧ್ಯತೆಯೂ ಇರುವುದರಿಂದ, ವಾಚ್‍ಗಳ ಆಮದು ಉದ್ದೇಶವೇನೆಂಬುದು ಮುಂದೆ ಸ್ಪಷ್ಟವಾಗಬೇಕಿದೆ.
Advertisement
ಕಳೆದ ವಾರ ಇಡಿ ನೀರವ್ ಮೋದಿಗೆ ಸಂಬಂಧಿಸಿದ 176 ಸ್ಟೀಲ್ ಅಲ್ಮೆರಾ ಹಾಗೂ 158 ಬಾಕ್ಸ್ ಗಳನ್ನ ಜಪ್ತಿ ಮಾಡಿದೆ. ಗುರುವಾರದಂದು ಇಡಿ ನೀರವ್ ಮೋದಿ ಹಾಗೂ ಗ್ರೂಪ್‍ಗೆ ಸೇರಿದ 100 ಕೋಟಿ ರೂ. ಮೌಲ್ಯದ ಠೇವಣಿ, ಶೇರ್‍ಗಳು ಹಾಗೂ ಐಷಾರಾಮಿ ಕಾರ್‍ಗಳನ್ನ ಜಪ್ತಿ ಮಾಡಿತ್ತು.
ನೀರವ್ ಮೋದಿಯ 7.80 ಕೋಟಿ ರೂ. ಮೌಲ್ಯದ ಹಾಗೂ ನೀರವ್ ಮೋದಿ ಸಂಬಂಧಿ, ಗೀತಾಂಜಲಿ ಗ್ರೂಪ್‍ನ ಮೆಹುಲ್ ಚೋಕ್ಸಿಗೆ ಸೇರಿದ 86.72 ಕೋಟಿ ರೂ. ಮೌಲ್ಯದ ಮ್ಯೂಚುವಲ್ ಫಂಡ್ಸ್ ಹಾಗೂ ಶೇರ್‍ಗಳನ್ನ ಇಡಿ ಜಪ್ತಿ ಮಾಡಿದೆ.
ಮುಂಬೈ ಶಾಖೆಯಲ್ಲಿ 11,300 ಕೋಟಿ ರೂ. ಅಕ್ರಮ ವಹಿವಾಟು ನಡೆದಿರುವುದು ತನಿಖೆ ವೇಳೆ ಪತ್ತೆಯಾಗಿದೆ. ತಮಗೆ ಬೇಕಾದ ಗ್ರಾಹಕರ ಜೊತೆ ವ್ಯವಹಾರ ನಡೆಸಿ ಈ ಅಕ್ರಮ ಎಸಗಲಾಗಿದೆ ಎಂದು ಪಿಎನ್‍ಬಿ ಮುಂಬೈ ಶೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ್ದ ಲೆಕ್ಕಪತ್ರದಲ್ಲಿ ತಿಳಿಸಿದೆ.
ಪಿಎನ್‍ಬಿ ಗ್ರಾಹಕರಿಗೆ ಬೃಹತ್ ಪ್ರಮಾಣದಲ್ಲಿ ಸಾಲ ನೀಡುವ ದೇಶದ ಎರಡನೇ ಅತೀ ದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಆಗಿದೆ. ಅಷ್ಟೇ ಅಲ್ಲದೇ ತನ್ನ ಆಸ್ತಿಯಿಂದಾಗಿ ದೇಶದ ನಾಲ್ಕನೇ ಅತೀ ದೊಡ್ಡ ಬ್ಯಾಂಕ್ ಎನಿಸಿಕೊಂಡಿದೆ.
ಪಿಎನ್‍ಬಿ 2016-17ರ ಅವಧಿಯಲ್ಲಿ ವಸೂಲಾಗದ 9,205 ಕೋಟಿ ರೂ. ಸಾಲದ ಮೊತ್ತವನ್ನು ವಜಾ ಮಾಡಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಳಿಕ ಅತಿ ಹೆಚ್ಚು ಸಾಲದ ಮೊತ್ತವನ್ನು ವಜಾಗೊಳಿಸಿದ ಎರಡನೇ ಬ್ಯಾಂಕ್ ಪಿಎನ್‍ಬಿ ಆಗಿದೆ. ಎಸ್‍ಬಿಐ ವಸೂಲಾಗದ 20,339 ಕೋಟಿ ರೂ. ಸಾಲದ ಮೊತ್ತವನ್ನು ವಜಾಗೊಳಿಸಿತ್ತು.