ಲಕ್ನೋ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ (Pahalgam Terror Attack) ಬಳಿಕ ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧದ ಕ್ರಮಗಳನ್ನು ಹೆಚ್ಚಿಸಿದೆ. ಹಲವು ಬಲವಾದ ಕ್ರಮಗಳ ಭಾಗವಾಗಿ ಪಾಕಿಸ್ತಾನಿ ಪ್ರಜೆಗಳಿಗೆ ದೇಶ ತೊರೆಯುವಂತೆ ಎಚ್ಚರಿಕೆ ನೀಡಿದೆ. ಹಾಗಾಗಿ ಪಾಕ್ ಪ್ರಜೆಗಳು ವಾಘಾ ಗಡಿಯ (Wagah Border) ಮೂಲಕ ದೇಶ ತೊರೆಯಲು ಪ್ರಾರಂಭಿಸಿದ್ದಾರೆ.
ಈ ನಡುವೆ ರಾಜ್ಯ ಸರ್ಕಾಗಳು ಪಾಕ್ ಪ್ರಜೆಗಳನ್ನು (Pakistani Nationals) ಪತ್ತೆಹಚ್ಚಿ ಗಡೀಪಾರುವ ಕೆಲಸ ಮಾಡುತ್ತಿವೆ. ಈ ಕಾರ್ಯಾಚರಣೆ ಉತ್ತರ ಪ್ರದೇಶವೊಂದರಲ್ಲೇ ಸುಮಾರು 1000 ದಿಂದ 1,200 ಪಾಕ್ ಪ್ರಜೆಗಳು ಪತ್ತೆಯಾಗಿದ್ದಾರೆಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಪಹಲ್ಗಾಮ್‌ನಲ್ಲೊಬ್ಬ ಸೂಪರ್ ಹಿರೋ.. ಬಿಜೆಪಿ ಕುಟುಂಬ ಕಾಪಾಡಿದ ಕಾಶ್ಮೀರಿ ಮುಸ್ಲಿಂ!
ಉತ್ತರ ಪ್ರದೇಶ ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ರಾಜ್ಯದಲ್ಲಿ 1,000 ರಿಂದ 1,200 ಪಾಕಿಸ್ತಾನಿ ಪ್ರಜೆಗಳು ವಾಸಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಅಧಿಕೃತ ಗಡೀಪಾರು ಆದೇಶ ಇನ್ನೂ ಬಂದಿಲ್ಲವಾದರೂ, ನಿರ್ದೇಶನ ಹೊರಡಿಸಿದ ತಕ್ಷಣ ವಾಪಸಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ರಾಜ್ಯದಲ್ಲಿರುವ ಪಾಕಿಸ್ತಾನಿಯರನ್ನ ಗುರುತಿಸುವ ಪ್ರಕ್ರಿಯೆ ಶುರುವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಂದೂಗಳ ನರಮೇಧ ನಡೆಸಿದ ಉಗ್ರರಿಗೆ ತಕ್ಕ ಶಿಕ್ಷೆ – ಇಬ್ಬರು ಭಯೋತ್ಪಾದಕರ ಮನೆಗಳು ಬ್ಲಾಸ್ಟ್!
ಅಮಿತ್ ಶಾ ಬಿಗ್ ವಾರ್ನಿಂಗ್:
ಉಗ್ರರ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ, ಯಾವೊಬ್ಬ ಪಾಕಿಸ್ತಾನಿ ಪ್ರಜೆಯೂ ಕೇಂದ್ರ ಸರ್ಕಾರ ನೀಡಿರುವ ಗಡುವನ್ನು ಮೀರಿ ದೇಶದಲ್ಲಿ ಉಳಿಯದಂತೆ ನೋಡಿಕೊಳ್ಳಬೇಕೆಂದು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದ್ದಾರೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ಈ ಬಗ್ಗೆ ಅಮಿತ್ ಶಾ ಮಾತನಾಡಿದ್ದಾರೆ. ಎಲ್ಲಾ ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಪತ್ತೆಹಚ್ಚಿ ದೇಶದಿಂದ ವಾಪಸ್ ಕಳುಹಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಗ್ರರ ದಾಳಿ ನಡೆದ ಪಹಲ್ಗಾಮ್‌ನಲ್ಲಿ ನಿಮ್ಮ ʻPublic TVʼ; ಬೈಸರನ್ ವ್ಯಾಲಿಯಿಂದ ಕನ್ನಡದ ಏಕೈಕ ಚಾನಲ್ ಪ್ರತ್ಯಕ್ಷ ವರದಿ..!