8 ವರ್ಷಗಳಿಂದ ವಿತರಿಸದೇ ಇದ್ದ 1 ಲಕ್ಷಕ್ಕೂ ಹೆಚ್ಚು ಸ್ಯಾನಿಟರಿ ಪ್ಯಾಡ್‌ಗಳಿಗೆ ಬೆಂಕಿ

Public TV
1 Min Read
kalaburagi Sanitary Pad

ಕಲಬುರಗಿ: 8 ವರ್ಷಗಳಿಂದ ವಿತರಿಸದೇ ಇದ್ದ 1 ಲಕ್ಷಕ್ಕೂ ಹೆಚ್ಚು ಸ್ಯಾನಿಟರಿ ಪ್ಯಾಡ್‌ಗಳಿಗೆ ಅಧಿಕಾರಿಗಳು ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಫರಹತಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ದೇವರು ವರ ಕೊಟ್ಟರು ಪೂಜಾರಿ ವರ ಕೊಡಲಿಲ್ಲ ಎನ್ನುವ ಗಾದೆ ಮಾತು ಅಕ್ಷರಶಃ ನಿಜವಾಗ್ತಿದೆ. ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರಿಗೆ ಸಮಸ್ಯೆ ಆಗಬಾರದು ಎಂದು ಸರ್ಕಾರ ಆರೋಗ್ಯ ಇಲಾಖೆ ಮೂಲಕ ಉಚಿತ ಸ್ಯಾನಿಟರಿ ಪ್ಯಾಡ್ ನೀಡುತ್ತದೆ. ಆದರೆ ಕಲಬುರಗಿಯ ಫರಹತಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 1 ಲಕ್ಷಕ್ಕೂ ಅಧಿಕ ಶುಚಿ ಪ್ಯಾಡ್‌ಗಳನ್ನು ಸುಟ್ಟು ಹಾಕಲಾಗಿದೆ.ಇದನ್ನೂ ಓದಿ: ಕೆಲವರಿಗೆ ಸಿಎಂ ಆಗ್ಬೇಕು ಅಂತಿರುತ್ತೆ, ಅಂಥವರೇ ಬದಲಾವಣೆಯ ಊಹಾಪೋಹಗಳನ್ನು ಹಬ್ಬಿಸ್ತಿದ್ದಾರೆ: ಯತೀಂದ್ರ

ಫರಹತಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ 15 ಹಳ್ಳಿಯ ಜನರಿಗೆ ಶುಚಿ ಪ್ಯಾಡ್ ಹಂಚಬೇಕಾಗಿತ್ತು. 2017ರಲ್ಲಿಯೇ ಎಲ್ಲಾ ಶುಚಿ ಪ್ಯಾಡ್‌ಗಳು ತಯಾರಾಗಿದ್ದು, 2021ರವರೆಗೆ ವ್ಯಾಲಿಡಿಟಿ ಇದ್ದು, 8 ವರ್ಷಗಳಿಂದ ಮಹಿಳೆಯರಿಗೆ ವಿತರಿಸದೇ ಹಾಗೇ ಬಿಟ್ಟಿದ್ದಾರೆ.

ಆರೋಗ್ಯ ಕೇಂದ್ರ ಉನ್ನತೀಕರಣಗೊಂಡ ಹಿನ್ನೆಲೆ ಹಳೆಯ ಕಟ್ಟಡವನ್ನು ತೆರವು ಮಾಡಿ, ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು. ಹಳೆಯ ಕಟ್ಟಡ ತೆರವಿನ ವೇಳೆ ಕಟ್ಟಡದ ತುಂಬೆಲ್ಲಾ ವಿತರಣೆಯಾಗದ 100ಕ್ಕೂ ಹೆಚ್ಚು ಬಾಕ್ಸ್ಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ಯಾಡ್‌ಗಳು ಪತ್ತೆಯಾಗಿವೆ. ಇದನ್ನು ಕಂಡ ಪಿಎಚ್‌ಸಿಯ ಕೆಲ ಸಿಬ್ಬಂದಿಗಳು ಕೂಡಲೇ ಪ್ಯಾಡ್‌ಗಳಿಗೆ ಬೆಂಕಿ ಹಚ್ಚಿ, ತಮ್ಮ ತಪ್ಪು ಮುಚ್ಚಿಕೊಳ್ಳಲು ಮುಂದಾಗಿದ್ದಾರೆ. ಶನಿವಾರ ಬೆಳಿಗ್ಗೆ ಎಲ್ಲ ಪ್ಯಾಡ್‌ಗಳಿಗೆ ಬೆಂಕಿ ಹಚ್ಚಿದ್ದು, ಇದೇ ವೇಳೆ ಸ್ಥಳೀಯರು ಹೋಗಿ ಪರಿಶೀಲನೆ ನಡೆಸಿದಾಗ, ವಿಷಯ ಬಯಲಿಗೆ ಬಂದಿದೆ. ಸ್ಥಳೀಯರು ಕಿಡಿಕಾರಿದಾಗ ಪಿಎಚ್‌ಸಿ ಸಿಬ್ಬಂದಿ ಕಾಲ್ಕಿತ್ತಿದ್ದಾರೆ.ಇದನ್ನೂ ಓದಿ:ಸಿದ್ದರಾಮಯ್ಯಗೆ ಶ್ರೀ ಕೃಷ್ಣ ಮಠದಿಂದ ಆಹ್ವಾನ – 2 ದಶಕಗಳ ಬಳಿಕ ಮಠಕ್ಕೆ ಭೇಟಿ ಕೊಡ್ತಾರಾ ಸಿಎಂ?

Share This Article