ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೊರರಾಜ್ಯದವರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಭಾನುವಾರ ರಾತ್ರಿ ಸುರಿಯುತ್ತಿದ್ದ ಮಳೆಯಲ್ಲೇ ಕನ್ನಡಿಗರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಗಾರ್ಡನ್ ಸಿಟಿಯ ಜಿಕೆವಿಕೆ(ಗಾಂಧಿ ಕೃಷಿ ವಿಜ್ಞಾನ ಕೇಂದ್ರ)ಯಲ್ಲಿ ನಡೆಯುತ್ತಿದ್ದ ಕೃಷಿಮೇಳದಲ್ಲಿ ಈ ಘಟನೆ ನಡೆದಿದೆ. ರಾತ್ರಿ 9.30ರ ವೇಳೆಗೆ ಹೊರರಾಜ್ಯದ ಯುವಕರು ಕನ್ನಡಿಗರ ಮೇಲೆ ಹಲ್ಲೆ ಮಾಡಿ ಹಣ, ಚಿನ್ನ ಕಸಿದು ಪರಾರಿಯಾಗಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಪರಭಾಷಿಕರು ನಾಲ್ವರು ಕನ್ನಡಿಗರ ಮೇಲೆ ರಾಡ್, ದೊಣ್ಣೆ, ಕಲ್ಲಿನಿಂದ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾರೆ.
ಕೃಷಿಮೇಳದಲ್ಲಿ ಅಂಗಡಿ ಹಾಕಿಕೊಂಡಿದ್ದ ಕರ್ನಾಟಕದ ಯುವಕರು ಮಳೆ ಬಂದಾಗ ಅಂಗಡಿ ಬಂದ್ ಮಾಡಿ, ಆ ದಿನದ ವ್ಯಾಪಾರದ ಹಣ ಲೆಕ್ಕ ಹಾಕುತ್ತಿದ್ದರು. ಈ ವೇಳೆ ಅಂಗಡಿ ಬಳಿ ಬಂದ ಪರಭಾಷಿಕರು ಬೇಕಂತಲೇ ಯುವಕರೊಂದಿಗೆ ಕಿರಿಕ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ನಾಲ್ವರ ಮೇಲೆ ಹಲ್ಲೆಗೈದು ಅವರ ಬಳಿ ಇದ್ದ ಹಣ, ಚಿನ್ನಾಭರಣವನ್ನು ಕಸಿದು ಎಸ್ಕೇಪ್ ಆಗಿದ್ದಾರೆ.
ಸ್ಥಳಕ್ಕೆ ಯಲಹಂಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.