ಬೆಂಗಳೂರು: ಚುನಾವಣೆಯಲ್ಲಿ (Election) ಹೊರಗಿನವರು ಮೋಸ ಮಾಡ್ತಾರೆ, ನಮ್ಮವರೂ ಮಾಡ್ತಾರೆ. ನನಗೂ ಅದರ ಅನುಭವ ಆಗಿದೆ ಎಂದು ಗೃಹ ಸಚಿವ ಡಾ.ಜಿ. ಜಿ.ಪರಮೇಶ್ವರ್ (G Parameshwar) ಹೇಳಿದ್ದಾರೆ.
ಸದಾಶಿವನಗರದ ಸರ್ಕಾರಿ ನಿವಾಸದಲ್ಲಿ ಮಾತನಾಡಿದ ಅವರು, ದೇವೇಗೌಡರನ್ನು (HD Devegowda) ನಾನು ತುಮಕೂರಿಗೆ ಕರೆದುಕೊಂಡು ಹೋಗಿಲ್ಲ. ಅವರು ಐದು ಸೀಟ್ ಕೇಳಿದ್ರು. ಕಾಂಗ್ರೆಸ್ ವರಿಷ್ಠರು ಕೊಟ್ಟಿದ್ದರು. ಅವರೇ ತುಮಕೂರನ್ನು ಆರಿಸಿಕೊಂಡಿದ್ದು, ಅವರು ಬೇಕಿದ್ರೆ ಹೇಳಲಿ ಆರಿಸಿಕೊಂಡಿಲ್ಲ ಅಂತ ನಾನು ಗೆಲ್ಲಿಸಲು ಬಹಳ ಪ್ರಯತ್ನ ಮಾಡಿದ್ದೇನೆ. ನಮಗೆ ಅವರು ಗೆದ್ದಿದ್ರೆ ಬಹಳ ಖುಷಿ ಆಗ್ತಾ ಇತ್ತು. ದುರ್ದೈವ ಅವರು ಗೆಲ್ಲಲಿಲ್ಲ. ಅವರನ್ನು ಕರೆದುಕೊಂಡು ಹೋಗಿದ್ದು ತಪ್ಪೆನಿದೆ. ನಾನೇ ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದೆ. ಕೆಲವರು ಚುನಾವಣೆಯಲ್ಲಿ ಕೆಲಸ ಮಾಡುತ್ತಾರೆ. ನಮ್ಮಲ್ಲೇ ಇದ್ದುಕೊಂಡು ಮೋಸ ಮಾಡುತ್ತಾರೆ. ಕೆಲವರು ಹೊರಗಡೆಯಿಂದ ಮೋಸ ಮಾಡುತ್ತಾರೆ. ಸ್ವತಃ ನನಗೆ ಆ ಅನುಭವ ಆಗಿದೆ. ಬಿಜೆಪಿಯ ಅಧಿಕೃತ ಬಿ ಟೀಂ ಆಗಿ ಜೆಡಿಎಸ್ ಆಗಿದೆ ಎಂದಿದ್ದಾರೆ.
Advertisement
Advertisement
ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರದಲ್ಲಿ ಕಳೆದ ಬಾರಿ ಬಿಜೆಪಿ (BJP) ಯಾರ ಜೊತೆಗೂ ಮೈತಿ ಮಾಡಿಕೊಂಡಿರಲಿಲ್ಲ. ಗೆದ್ದು ಬಿಡ್ತೇವೆ ಅಂತ ಕಳೆದ ಬಾರಿ ಗೆದ್ರು. ಈಗ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಅಂದ್ರೆ ವೀಕ್ ಆಗಿದ್ದಾರೆ ಅಂತ ಅಲ್ವಾ. ಮೈತ್ರಿ ಮಾಡಿಕೊಂಡು ಕಾಂಗ್ರೆಸ್ (Congress) ಹೆದರಿಸಲು ಹೊರಟಿದ್ದಾರೆ. ಕಾಂಗ್ರೆಸ್ ಗಟ್ಟಿಯಾಗಿದೆ ಅಂತ ಅವರೇ ಹೇಳುತ್ತಿದ್ದಾರೆ. ನಾವು ರೆಡಿಯಾಗಿದ್ದೇವೆ. 138 ವರ್ಷದಿಂದ ಕಾಂಗ್ರೆಸ್ ಇಂತಹದ್ದು ನೋಡಿಕೊಂಡು ಬಂದಿದೆ. ಯಾವ ಶಕ್ತಿ ಬಂದರೂ ಕಾಂಗ್ರೆಸ್ ತಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ನಿರ್ನಾಮ ಮಾಡುತ್ತೇವೆ ಅನ್ನೋದು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅವೈಜ್ಞಾನಿಕ, ಅರೆಬೆಂದ ಶಕ್ತಿ ಯೋಜನೆಯಿಂದಾಗಿ ಖಾಸಗಿ ಸಂಚಾರ ವ್ಯವಸ್ಥೆ ಬುಡಮೇಲಾಗಿದೆ: ಹೆಚ್‌ಡಿಕೆ
Advertisement
Advertisement
ಬಿ.ಕೆ ಹರಿಪ್ರಸಾದ್ ಸಿಎಂ ವಿರುದ್ಧ ಮಾತನಾಡಿದ್ದು, ಅದು ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ನಾನು ಕಾಮೆಂಟ್ ಮಾಡೋದು ಏನಿದೆ. ನನ್ನ ಬಗ್ಗೆ ಹೇಳಿದ್ದಾರೆ. ಅವರಿಗೆ ಅಭಿನಂದನೆ. ಎಲ್ಲವೂ ವರಿಷ್ಠರ ಹಂತದಲ್ಲಿ ಚರ್ಚೆ ಆಗೋದು. ಹೈಕಮಾಂಡ್ ಕೂಡ ಹೇಳಿಕೆ ಗಮನಿಸಿದೆ ಎಂದಿದ್ದಾರೆ.
Web Stories