ಶ್ರೀನಗರ: ರಂಜಾನ್ ಮಾಸದ ಸಮಯದಲ್ಲೇ ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಅರೆನಗ್ನ ಫ್ಯಾಷನ್ ಶೋ (Gulmarg fashion Show) ನಡೆದಿರೋದು ವಿವಾದಕ್ಕೆ ಕಾರಣವಾಗಿದೆ.
ಇದಕ್ಕೆ ಸಂಬಂಧಿಸಿ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸಾರ್ವಜನಿಕ ವಲಯದಿಂದಲೂ ಟೀಕೆ ವ್ಯಕ್ತವಾಗಿದೆ. ಇದನ್ನೂ ಓದಿ: ತಂಬಾಕು, ಮದ್ಯದ ಜಾಹೀರಾತು ನಿಯಂತ್ರಿಸಿ – ಬಿಸಿಸಿಐ ಅಧ್ಯಕ್ಷರಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ
ಪ್ರವಾಸೋದ್ಯಮದ ಹೆಸರಲ್ಲಿ ಇದೇನಿದು ಎಂದು ಸರ್ಕಾರವನ್ನು, ವಿಪಕ್ಷಗಳು ಪ್ರಶ್ನಿಸಿವೆ. ವಿಧಾನಸಭೆ ಅಧಿವೇಶನದಲ್ಲೂ ಈ ವಿಷುಯ ಪ್ರತಿಧ್ವನಿಸಿದ್ದು, ಭಾರೀ ಹೈಡ್ರಾಮಾ ನಡೆದಿದೆ. ಇದನ್ನೂ ಓದಿ: ಬಿಬಿಎಂಪಿ 2ಕ್ಕಿಂತ ಹೆಚ್ಚು ಹೋಳಾಗೋದು ಫಿಕ್ಸ್ – ಸದ್ಯದಲ್ಲೇ `ಗ್ರೇಟರ್ ಬೆಂಗಳೂರು’ ಆಡಳಿತ ಕಾಯ್ದೆ ಜಾರಿಗೆ ಸಿದ್ಧತೆ
ಇನ್ನೂ ಇದನ್ನ ಅರ್ಥ ಮಾಡಿಕೊಳ್ತೇನೆ ಎಂದಿರುವ ಸಿಎಂ ಓಮರ್ ಅಬ್ದುಲ್ಲಾ (Omar Abdullah), ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ. ಅತ್ತ, ಹೋಳಿ ಹಬ್ಬದ ವೇಳೆ ಮುಸ್ಲಿಮರೆಲ್ಲಾ ಬಾಗಿಲು ಹಾಕ್ಕೊಂಡು ಮನೆಲೇ ಇರಬೇಕು ಎಂದು ಬಿಹಾರದ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಕರೆ ನೀಡಿರೋದು ವಿವಾದಕ್ಕೆ ಕಾರಣವಾಗಿದೆ. ಯಾವುದೇ ಅಡ್ಡಿ ಆತಂಕ ಇಲ್ಲದೇ ಹಿಂದೂಗಳು ಅವರ ಹಬ್ಬ ಆಚರಿಸಲು ಅನುವು ಮಾಡಿಕೊಡಬೇಕು ಎಂದು ಸಲಹೆ ನೀಡಿದ್ದಾರೆ.