ಬೆಂಗಳೂರು: ತಮಿಳುನಾಡು (Tamil Nadu) ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ (Udhayanidhi Stalin) ಸನಾತನ ಧರ್ಮದ (Sanatan Dharma) ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇವರ ಈ ಹೇಳಿಕೆಗೆ ಎಲ್ಲೆಡೆ ತೀವ್ರ ಖಂಡನೆ ವ್ಯಕ್ತವಾಗಿದ್ದು, ಹಿಂದೂಪರ ಸಂಘಟನೆಗಳು ಉದಯನಿಧಿ ಸ್ಟಾಲಿನ್ ವಿರುದ್ಧ ಆನ್‌ಲೈನ್‌ನಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ.
ಈಗಾಗಲೇ ದೆಹಲಿಯಲ್ಲಿ (Delhi) ಉದಯನಿಧಿ ಸ್ಟಾಲಿನ್ ವಿರುದ್ಧ ದೂರು ದಾಖಲಾಗಿದ್ದು, ರಾಜ್ಯದಲ್ಲೂ ದೂರು ದಾಖಲು ಮಾಡುವ ನಿರ್ಧಾರ ಕೈಗೊಳ್ಳುವಂತೆ ಸಂಘಟನೆಗಳು ಒತ್ತಾಯಿಸಿವೆ. ರಾಷ್ಟ್ರವ್ಯಾಪಿ ಸ್ಟಾಲಿನ್ ವಿರುದ್ಧ ದೂರು ದಾಖಲು ಮಾಡಲು ನಿರ್ಧಾರ ಮಾಡಿದ್ದು, ಉದಯನಿಧಿ ಹೇಳಿಕೆ ವಿರುದ್ಧ ಆಂದೋಲನ ಹಾಗೂ ಪ್ರತಿಭಟನೆಗೆ ಹಿಂದೂಪರ ಸಂಘಟನೆಗಳು (Hindu organizations) ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ: ಗೃಹ ಆರೋಗ್ಯ ಜಾರಿಗೆ ಇಲಾಖೆ ಚಿಂತನೆ- ಏನಿದು ಯೋಜನೆ..?
Advertisement
Advertisement
ದ್ವೇಷ ಭಾಷಣ ಮಾಡಿದರೆ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡುವ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಆದೇಶ ಇರುವ ಹಿನ್ನೆಲೆ ಎಫ್‌ಐಆರ್ ದಾಖಲು ಮಾಡಿಕೊಳ್ಳುವಂತೆ ರಾಜ್ಯಪಾಲರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಇದನ್ನೂ ಓದಿ: ಯಾವ್ದೇ ಕೇಸ್ ಹಾಕಿದ್ರೂ ಫೇಸ್ ಮಾಡೋಕೆ ನಾನ್ ರೆಡಿ – ಬಿಜೆಪಿಗೆ ಎಂ.ಕೆ ಸ್ಟಾಲಿನ್ ಪುತ್ರ ಸವಾಲ್
Advertisement
Advertisement
ದೆಹಲಿಯಲ್ಲಿ ಉದಯನಿಧಿ ಸ್ಟಾಲಿನ್ ವಿರುದ್ಧ ದೂರು ದಾಖಲಾಗಿದೆ. ಸನಾತನ ಧರ್ಮದ ಧಾರ್ಮಿಕ ಭಾವನೆಗಳಿಗೆ ದಕ್ಕೆ ಎಂದು ದೂರು ನೀಡಿದ್ದು, ಕೂಡಲೇ ಉದಯನಿಧಿ ಸ್ಟಾಲಿನ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಲಾಗಿದೆ. ಅಲ್ಲದೇ ಆನ್‌ಲೈನ್ ಮೂಲಕ ದೂರು ದಾಖಲು ಮಾಡುವ ಆಂದೋಲನ ಕೈಗೊಳ್ಳಲಾಗಿದೆ. ಇದನ್ನೂ ಓದಿ: KSOU ಕರ್ಮಕಾಂಡ: 500 ಸಿಬ್ಬಂದಿ ಜಾಗಕ್ಕೆ 1,300 ಸಿಬ್ಬಂದಿ ನೇಮಕ; ಆದಾಯ 86 ಕೋಟಿ, ಖರ್ಚು 263 ಕೋಟಿ
Web Stories