ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಮುಖ ಎಸ್‍ಇಝಡ್(ವಿಶೇಷ ಆರ್ಥಿಕ ವಲಯ)ಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಇದ್ದೆ ಇರುತ್ತೆ. ಈ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರವಾಗಿ ಮುಖ್ಯ ರಸ್ತೆಯಿಂದ ಎಸ್‍ಇಝಡ್ ಹೋಗಲು ಫ್ಲೈಓವರ್ ಕಾಮಗಾರಿಯನ್ನ ಮಾಡುತ್ತಿದ್ದಾರೆ. ಅದರೆ ಈಗಿರುವ ರಸ್ತೆ ಸ್ಥಿತಿ ಮಾತ್ರ ತೀರ ಅಧ್ವಾನವಾಗಿದ್ದು, ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದೆ.
ಹೌದು. ಬೆಂಗಳೂರು ಮಾನ್ಯತಾ ಟೆಕ್ ಪಾರ್ಕ್ ಗೆ ಸಂಪರ್ಕ ಕಲ್ಪಸೋ ಔಟರ್ ರಿಂಗ್ ರೋಡ್ ಮತ್ತು ಸರ್ವಿಸ್ ರೋಡ್‍ನಲ್ಲಿ ಮ್ಯಾನ್ ಹೊಲ್‍ಗಳು ತುಂಬಿ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಒಂದು ಕಡೆ ಫ್ಲೈಓವರ್ ಕಾಮಗಾರಿಯಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದರೆ, ಇನ್ನೊಂದೆಡೆ ಒಳ ಚರಂಡಿಯ ನೀರು ರಸ್ತೆಯ ಮೇಲೆ ಬರುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.
Advertisement
Advertisement
ಕಳೆದ ಒಂದು ವಾರದಿಂದ ಇದೇ ರೀತಿಯ ಪರಿಸ್ಥಿತಿ ಇದ್ದರೂ ಜಲಮಂಡಳಿ ಅಧಿಕಾರಿಗಳಾಗಲಿ, ಸ್ಥಳೀಯ ಬಿಬಿಎಂಪಿ ಸದಸ್ಯರಾಗಲಿ ದುರಸ್ಥಿ ಕೆಲಸಕ್ಕೆ ಮುಂದಾಗಿಲ್ಲ. ದೇಶ ವಿದೇಶಗಳ ಅತಿಥಿಗಳು ಬಂದು ಹೋಗೋ ಮಾನ್ಯತಾ ಟೆಕ್ ಪಾರ್ಕ್ ರಸ್ತೆಯೇ ಹೀಗಾದರೆ ಹೇಗೆ? ರಸ್ತೆ ತುಂಬಾ ಚರಂಡಿ ನೀರು, ಜೊತೆಗೆ ಕೆಟ್ಟ ವಾಸನೆಯಿಂದ ಇಲ್ಲಿ ಸಂಚರಿಸೋದು ಹೇಗೆ ಎಂದು ವಾಹನ ಸವಾರರು ಪ್ರಶ್ನಿಸಿ ಕಿಡಿಕಾರುತ್ತಿದ್ದಾರೆ. ಹೀಗಿದ್ದರೂ ಕೂಡ ಸಮಸ್ಯೆ ಸರಿಪಡಿಸಲು ಯಾರು ಮುಂದಾಗಿಲ್ಲ.