ಪಾಟ್ನಾ: ಪೆರೋಲ್ ಮೇಲೆ ಜೈಲಿನಿಂದ ಹೊರಬಂದ ಮಾಜಿ ಶಾಸಕರೊಬ್ಬರು ಜೆಡಿಯು (JDU) ಅಭ್ಯರ್ಥಿ ಪರವಾಗಿ ಮೆಗಾ ರೋಡ್‌ಶೋನಲ್ಲಿ ಭಾಗಿಯಾಗಿ ಪ್ರಚಾರ ನಡೆಸಿದ್ದಾರೆ.
ಛೋಟೆ ಸರ್ಕಾರ್ ಖ್ಯಾತಿ ಗಳಿಸಿರುವ ಅನಂತ್ ಕುಮಾರ್ ಸಿಂಗ್, ಮೊಕಾಮಾದಿಂದ ಐದು ಬಾರಿ ಶಾಸಕರಾಗಿದ್ದರು. ಇಂದು ಬೆಳಗ್ಗೆ ಪಾಟ್ನಾದ ಬ್ಯೂರ್ ಸೆಂಟ್ರಲ್ ಜೈಲಿನಿಂದ 15 ದಿನ ಪೆರೋಲ್ ಮೇಲೆ ಹೊರಬಂದಿದ್ದಾರೆ. ಜೈಲಿಂದ ಹೊರಬಂದ ಕೆಲವೇ ಹೊತ್ತನಲ್ಲಿ ಮಾಜಿ ಶಾಸಕ ಬಿಹಾರದಲ್ಲಿ ನಿತೀಶ್ ಕುಮಾರ್ (Nitish Kumar) ಪಕ್ಷದಿಂದ ಕಣಕ್ಕಿಳಿದಿರುವ ಅಭ್ಯರ್ಥಿ ಪರ ರೋಡ್‌ಶೋನಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಬೆಂಕಿಯೊಂದಿಗೆ ಆಟವಾಡುತ್ತಿದೆ: ರಾಜನಾಥ್ ಸಿಂಗ್
ಅಪರಾಧಿ ಅನಂತ್ ಕುಮಾರ್ ಸಿಂಗ್‌ಗೆ ಜೈಲಿನ ಹೊರಗಡೆ ಜನರಿಂದ ಭವ್ಯ ಸ್ವಾಗತವೇ ಸಿಕ್ಕಿತು. ಅಪಾರ ಸಂಖ್ಯೆ ಜನ ಸೇರಿದ್ದರು. ಹೊರಬರುತ್ತಿದ್ದಂತೆ ಸಿಂಗ್ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು. ಬ್ಯಾಂಡ್‌ಸೆಟ್ ಬಾರಿಸಿ ಸ್ವಾಗತಿಸಲಾಯಿತು. ನಂತರ ಬಾರ್ಹ್ ವಿಧಾನಸಭಾ ಕ್ಷೇತ್ರದ ಸಬ್ನೀಮಾ ಗ್ರಾಮದಿಂದ ರೋಡ್‌ಶೋ ಆರಂಭಿಸಲಾಯಿತು. ಮುಂಗರ್‌ನ ಜೆಡಿಯು ಅಭ್ಯರ್ಥಿ ಲಾಲನ್ ಸಿಂಗ್‌ಗೆ ಬೆಂಬಲ ವ್ಯಕ್ತಪಡಿಸುವಂತೆ ಪ್ರಚಾರ ನಡೆಸಲಾಯಿತು.
2020 ರಲ್ಲಿ ಆರ್‌ಜೆಡಿ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದ ಅನಂತ್ ಸಿಂಗ್, ಶಸ್ತ್ರಾಸ್ತ್ರ ಪ್ರಕರಣದಲ್ಲಿ ದೋಷಿಯಾಗಿದ್ದರು. 10 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಇದನ್ನೂ ಓದಿ: ಹಿಂದೂ ಸಂಘಟನೆ ನಾಯಕನ ಹತ್ಯೆಗೆ ಸಂಚು – ಗುಜರಾತ್‌ನಲ್ಲಿ ಮುಸ್ಲಿಂ ಧರ್ಮಗುರು ಅರೆಸ್ಟ್