– ಆರೋಪಿ ಸುಳಿವು ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ
ಪುಣೆ: ಮಹಾರಾಷ್ಟ್ರ (Maharashtra) ರಾಜ್ಯ ರಸ್ತೆ ಸಾರಿಗೆ ಬಸ್‌ನೊಳಗೆ 26 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಲಾಗಿದ್ದು, ಆರೋಪಿ ಪರಾರಿಯಾಗಿದ್ದಾನೆ. ಸದ್ಯ ಆರೋಪಿಯನ್ನ ಬಂಧಿಸಲು ತ್ವರಿತ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸ್ ಇಲಾಖೆ (Pune Police Department) ಶ್ವಾನದಳದೊಂದಿಗೆ 13 ತಂಡಗಳನ್ನು ನಿಯೋಜಿಸಿದೆ. ಹೆಚ್ಚುವರಿಯಾಗಿ, ಆರೋಪಿ ಬಗ್ಗೆ ಮಾಹಿತಿ ನೀಡುವವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೊಷಿಸಿದೆ.
Advertisement
ಬೇರೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಕಾಮುಕ:
ಮಂಗಳವಾರ ಬೆಳಗ್ಗೆ ಪುಣೆ ಸ್ವರ್ಗೇಟ್ ಡಿಪೋದಲ್ಲಿ ಬಸ್‌ನಲ್ಲೇ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕನನ್ನು 36 ವರ್ಷದ ದತ್ತಾತ್ರೆಯ ರಾಮದಾಸ್ ಗಾಡೆ ಎಂದು ಗುರುತಿಸಲಾಗಿದೆ. ಈತ ಬೇರೆ ಪ್ರಕರಣಗಲ್ಲಿ ಜಾಮೀನಿನ ಮೇಲೆ ಹೊರಗಿದ್ದ ಎಂದು ತಿಳಿದುಬಂದಿದೆ. ಈತನ ವಿರುದ್ಧ ಶಿರೂರು ಶಿಕ್ರಾಪುರ, ಸ್ವರ್ಗೇಟ್ ಪೊಲೀಸ್ ಠಾಣೆಗಳಲ್ಲಿ ಹಲವು ಕೇಸ್‌ಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement
ಘಟನೆ ಬಗ್ಗೆ ಮಾಹಿತಿ ಪಡೆದಿರುವ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್, ಡಿಸಿಎಂ ಅಜಿತ್ ಪವಾರ್ ಆದಷ್ಟು ಬೇಗ ಆರೋಪಿಯನ್ನು ಬಂಧಿಸುವಂತೆ ಪುಣೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಏಕತೆಯ ಮಹಾ ಯಜ್ಞ ಪೂರ್ಣಗೊಂಡಿತು: ಐತಿಹಾಸಿಕ ಕುಂಭಮೇಳದ ಬಗ್ಗೆ ಮೋದಿ ಬಣ್ಣನೆ
Advertisement
Advertisement
ಈ ಅತ್ಯಾಚಾರ ಘಟನೆಯು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವ ಕೆಲಸ, ಅತ್ಯಂತ ನೋವಿನ ಹಾಗೂ ನಾಚಿಗೇಡಿನ ಸಂಗತಿಯೂ ಹೌದು. ಆರೋಪಿಗೆ ಮರಣ ದಂಡನೆಯೇ ಸೂಕ್ತವಾದ ಶಿಕ್ಷೆ ಎಂದು ಪವಾರ್ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಶಿವಗಂಗಾ ಬಸವರಾಜ್‍ಗೆ ಸಚಿವ ಸ್ಥಾನ ಸಿಗಲಿ – ಮಹಾ ಕುಂಭಮೇಳದಲ್ಲಿ ಅಭಿಮಾನಿಗಳಿಂದ ಪ್ರಾರ್ಥನೆ
ಠಾಣೆ ಸಮೀಪದಲ್ಲೇ ಅತ್ಯಾಚಾರ:
ಯುವತಿ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣದಲ್ಲಿ ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ. ಪುಣೆಯ ಜನನಿಬಿಡ ಪ್ರದೇಶ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆಯಲ್ಲದೇ, ಬಸ್ ಪೊಲೀಸ್ ಠಾಣೆಯ 100 ಮೀ. ವ್ಯಾಪ್ತಿಯಲ್ಲೇ ನಿಂತಿತ್ತು ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಠಾಣೆಯಿಂದ 100 ಮೀಟರ್ ದೂರದಲ್ಲಿ ಖಾಲಿ ಬಸ್ ನಿಂತಿತ್ತು. ಬೇರೆಡೆ ನಿಂತಿದ್ದ ಬಸ್ ಒಳಗೆ ಸುಳ್ಳು ಹೇಳಿ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ವರದಿಗಳು ತಿಳಿಸಿವೆ.