ಮೈಸೂರು: ವಿಶ್ವದಲ್ಲೇ ಜನರ ಖಾತೆಗಳಿಗೆ ಹಣ ಹಾಕುತ್ತಿರುವ ಏಕೈಕ ಸರ್ಕಾರ ನಮ್ಮದು ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ (Dr.Yathindra Siddaramaiah) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ (MUDA) ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗೆ ಮಾತ್ರ ಮುಡಾ ಹಣ ಬಳಕೆಯಾಗಿದೆ. ಅದರಲ್ಲಿ ತಪ್ಪೇನಿದೆ? ಜನರ ಒಳತಿಗೆ ಬಳಸುವುದಕ್ಕಾಗಿಯೇ ಆ ಹಣವಿದೆ. ಬಳಕೆ ಮಾಡುವುದರಲ್ಲಿ ಯಾವ ತಪ್ಪುಗಳು ಆಗಿಲ್ಲ. ವಿಪಕ್ಷಗಳು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಅಷ್ಟೇ. ವಿಶ್ವದಲ್ಲೇ ಜನರ ಖಾತೆಗಳಿಗೆ ಹಣ ಹಾಕುತ್ತಿರುವ ಏಕೈಕ ಸರ್ಕಾರ ನಮ್ಮದು. ಇಂತಹ ಯೋಜನೆಗಳನ್ನ ಸಹಿಸಕೊಳ್ಳಲು ಆಗದೇ ವಿನಾಕರಣ ಆರೋಪಗಳನ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ರಾಜ್ಯೋತ್ಸವ ಪ್ರಶಸ್ತಿಗೆ ಫುಲ್ ಡಿಮ್ಯಾಂಡ್ – 69 ಪ್ರಶಸ್ತಿಗೆ 2,000ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ
ಸರ್ಕಾರದ ಮೇಲೆ ಮಾತನಾಡಲು ಯಾರಿಗೂ ಯಾವ ವಿಚಾರಗಳು ಸಿಗುತ್ತಿಲ್ಲ. ನಮ್ಮ ತಂದೆಯ ಮೇಲೆ ಮಾಡುತ್ತಿರುವ ಎಲ್ಲಾ ಆರೋಪಗಳು ಬೋಗಸ್. ಎಲ್ಲವುದಕ್ಕೂ ಸುಖಾಸುಮ್ಮನೆ ಆರೋಪಮಾಡುತ್ತಾ ಹೋದರೆ ಹೇಗೆ? ನಮ್ಮ ತಂದೆಯ ರಾಜೀನಾಮೆಯನ್ನ ಸುಖಾ ಸುಮ್ಮನೆ ಕೇಳುತ್ತಿದ್ದಾರೆ. ಅವರು ಯಾಕೆ ರಾಜೀನಾಮೆ ಕೊಡಬೇಕು? ಹೀಗೆ ಸಿಕ್ಕ ಸಿಕ್ಕ ಆರೋಪಗಳಿಗೆಲ್ಲಾ ರಾಜೀನಾಮೆ ಕೊಡುತ್ತಾ ಹೋದರೆ ಅದರಲ್ಲಿ ಅರ್ಥ ಇರುತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಮುನಿರತ್ನ ಪ್ರಕರಣದ (Munirathna Case) ಬಗ್ಗೆ ಮಾತನಾಡಿ, ನನಗೆ ಆ ಪ್ರಕರಣದ ಕುರಿತು ಅಷ್ಟಾಗಿ ಗೊತ್ತಿಲ್ಲ ಎಂದಿದ್ದಾರೆ.ಇದನ್ನೂ ಓದಿ: 70 ವರ್ಷದ ಹೆರಿಗೆ ಆಸ್ಪತ್ರೆಗೆ ಬೀಗ: 3 ವರ್ಷಗಳಿಂದ ದುರಸ್ತಿ ಹೆಸರಿನಲ್ಲಿ ಕಾಮಗಾರಿ ವಿಳಂಬ!