ನಮ್ಮದು ಹೆದರುವ ಬ್ಲಡ್ ಅಲ್ಲ, ತಂಟೆಗೆ ಬಂದವರಿಗೆ ಸೆಟ್ಲ್‌ಮೆಂಟ್ ಆಗುತ್ತಿದೆ: ಡಿಕೆಶಿ

Public TV
1 Min Read
DK Shivakumar 6

ಬೆಂಗಳೂರು: ನಮ್ಮದು ಹೆದರುವ ಬ್ಲಡ್ ಅಲ್ಲ. ನಮ್ಮ ತಂಟೆಗೆ ಬಂದವರಿಗೆಲ್ಲಾ ಒಂದೊಂದೆ ಸೆಟ್ಲ್‌ಮೆಂಟ್ ಆಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಡಿ.ಕೆ.ಸುರೇಶ್‌ಗೆ ಗುಂಡು ಹೊಡೆಯುವ ಬಗ್ಗೆ ಈಶ್ವರಪ್ಪ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಈ ಹಿಂದೆ ವಿಧಾನಸೌಧದಲ್ಲಿ ಅಸೆಂಬ್ಲಿಯಲ್ಲಿ ನಮ್ಮ ತಂದೆಯ ಬಗ್ಗೆ ಮಾತನಾಡಿದ್ದರು. ಈಗ ಎಲ್ಲಿದ್ದಾರೆ ಅವರು? ಈಶ್ವರಪ್ಪ ಅವರ ಒಂದು ರೌಂಡ್ ಸೆಟ್ಲ್‌ಮೆಂಟ್ ಆಗಿದೆ. ನಮ್ಮ ತಂಟೆಗೆ ಬಂದವರಿಗೆ ಎಲ್ಲರಿಗೂ ಒಂದೊಂದೆ ಸೆಟ್ಲ್‌ಮೆಂಟ್ ಆಗ್ತಿದೆ. ಡಿ.ಕೆ.ಸುರೇಶ್‌ದು ಹೆದರುವ ಬ್ಲಡ್ ಅಲ್ಲ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಕೆಂಗಲ್ ಹನುಮಂತಯ್ಯ ದಕ್ಷ ಆಡಳಿತಗಾರ: ಸಿದ್ದರಾಮಯ್ಯ

ಗುಂಡಿಟ್ಟು ಕೊಲ್ಲುತ್ತೇನೆ ಎನ್ನುತ್ತಾರೆ, ಕೊಲ್ಲಲಿ ಬಿಡಿ. ಡಿಕೆ ಸುರೇಶ್ ಅವರದ್ದು ಈ ಗುಂಡಿಗೆ ಹೆದರುವ ಬ್ಲಡ್ ಅಲ್ಲ. ನಮ್ಮದು ಕೆಂಪೇಗೌಡರ ಇತಿಹಾಸ ಗೊತ್ತಲ್ಲ. ರಾಜಕಾರಣ ಮಾಡಬೇಕಾದವರು. ಹಿಂದೆನೂ ಹೇಳಿದ್ದೇನೆ ನಾವು ಹುಲ್ಲು ಗಾಡಿನೂ ಹಿಡ್ಕೊಂಡು ಬರಲಿಲ್ಲ, ಕಿವಿ ಮೇಲೆ ಹೂ ಇಟ್ಕೊಂಡು ಬರಲಿಲ್ಲ, ನಡೀರಿ ಎಂದು ಹರಿಹಾಯ್ದರು. ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಮುನ್ನ ಸಿಎಎ ಜಾರಿ: ಅಮಿತ್‌ ಶಾ ಘೋಷಣೆ

Share This Article