– ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಆಗೇ ಆಗುತ್ತದೆ
ಬೆಂಗಳೂರು: ಬಿಜೆಪಿ (BJP) ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಮ್ಮ ಬಣದಿಂದ ಅಭ್ಯರ್ಥಿ ಹಾಕುವ ನಿರ್ಧಾರದಿಂದ ನಾವು ಹಿಂದೆ ಸರಿದಿಲ್ಲ. ಚುನಾವಣೆ ನಡೆದರೆ ನಾವು ಅಭ್ಯರ್ಥಿ ಹಾಕುತ್ತೇವೆ. ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಆಗೇ ಆಗುತ್ತದೆ ಎಂದು ಯತ್ನಾಳ್ ಟೀಂನ ಕುಮಾರ್ ಬಂಗಾರಪ್ಪ (Kumar Bangarappa) ಮತ್ತೆ ವಿಜಯೇಂದ್ರಗೆ (BY Vijayendra) ಸೆಡ್ಡು ಹೊಡೆದಿದ್ದಾರೆ.
Advertisement
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದ ವಿದ್ಯಮಾನಗಳ ಬಗ್ಗೆ ನಾವು ಹೈಕಮಾಂಡ್ ಮಾಹಿತಿ ಕೊಟ್ಡಿದ್ದೇವೆ. ನಮ್ಮ ನಿರ್ಧಾರದಿಂದ ನಾವು ಹಿಂದೆ ಸರಿಯಲ್ಲ. ರಾಜ್ಯಾಧ್ಯಕ್ಷರ ಚುನಾವಣೆಗೆ ನಾವು ಸ್ಪರ್ಧೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ಎಫ್‌ಬಿಐ ನಿರ್ದೇಶಕನಾದ ಭಾರತೀಯ – ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ಸ್ವೀಕರಿಸಿದ ಕಾಶ್ ಪಟೇಲ್
Advertisement
Advertisement
ಚುನಾವಣೆ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಾಣ್ ಬರೋ ದಿನ ಇನ್ನು ಅಂತಿಮ ಆಗಿಲ್ಲ. ಚುನಾವಣೆ ವೇಳಾಪಟ್ಟಿ ಸಿದ್ಧವಾಗಬೇಕು. ದೆಹಲಿ ಚುನಾವಣೆ ಆದ ಮೇಲೆ ವರಿಷ್ಠರು ನಮ್ಮ ಜೊತೆ ಮಾತಾಡೋದಾಗಿ ಹೇಳಿದ್ದಾರೆ. ಕರ್ನಾಟಕಕ್ಕೆ ನೂರಕ್ಕೆ ನೂರು ಬದಲಾವಣೆ ಆಗೇ ಆಗುತ್ತದೆ. ಚುನಾವಣೆ ನಡೆಯುವ ಸನ್ನಿವೇಶ ಬಂದರೆ ನಾಮಪತ್ರ ಸಲ್ಲಿಕೆ ಮಾಡೋ ಅವಶ್ಯಕತೆ ಬಂದರೆ ನಾವು ನಾಮಪತ್ರ ಸಲ್ಲಿಕೆ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ತುಮಕೂರು| 10ನೇ ತರಗತಿ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ
Advertisement
ಯತ್ನಾಳ್ ಬಣದಿಂದ ಸ್ಪರ್ಧೆ ಮಾಡಲ್ಲ ಅಂತ ಸುದ್ದಿ ಬಂದಿರೋದು ನಮಗೆ ಗೊತ್ತಿಲ್ಲ. ನಮ್ಮ ನಿರ್ಧಾರದಿಂದ ನಾವು ಹಿಂದೆ ಸರಿದಿಲ್ಲ. ಚುನಾವಣೆ ಅಂತ ವರಿಷ್ಠರು ನಿರ್ಧಾರ ಮಾಡಿದ್ರೆ ನಾವು ನಾಮಪತ್ರ ಹಾಕುತ್ತೇವೆ. ಯತ್ನಾಳ್‌ಗೆ ನೋಟಿಸ್ ರಾಜಕೀಯವಾಗಿ ಕೊಟ್ಟಿಲ್ಲ. ಯತ್ನಾಳ್ ನೋಟಿಸ್‌ಗೆ ಉತ್ತರ ಕೊಟ್ಟಿದ್ದಾರೆ. ನಾವು ಯತ್ನಾಳ್ ಜೊತೆ ಇದ್ದೇವೆ. ಹೈಕಮಾಂಡ್ ನೋಟಿಸ್‌ನಿಂದ ನಾವು ಯಾರೂ ವಿಚಲಿತ ಆಗಿಲ್ಲ. ಚುನಾವಣೆ ಆಗೋವರೆಗೂ ನಮ್ಮ ವಾದ ಇದ್ದೇ ಇರುತ್ತದೆ. ನಮ್ಮ ವಾದ ತಿಳಿಸೋಕೆ ಮಾತಾಡೋದು ನಮಗೆ ಇರೋ ಮಾರ್ಗ. ರಾಜ್ಯಾಧ್ಯಕ್ಷರ ಬದಲಾವಣೆ ಬೇಕು ಅಂತ 100 ಕ್ಕೆ 90% ಜನ ಇದ್ದಾರೆ. ಸಂಘ ಮತ್ತು ಹೈಕಮಾಂಡ್ ಸರಿಯಾದ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮುರಿದ ಸೀಟ್ ನೀಡಿ ಮೋಸ ಮಾಡಿದ್ದೀರಿ: ಏರ್ ಇಂಡಿಯಾ ವಿರುದ್ಧ ಶಿವರಾಜ್ ಸಿಂಗ್ ಚೌಹಾಣ್ ಕೆಂಡಾಮಂಡಲ