– 78ನೇ ಸ್ವಾತಂತ್ರ್ಯೋತ್ಸವದಂದು ದೇಶದ ಜನರನ್ನುದ್ದೇಶಿಸಿ ಮೋದಿ ಭಾಷಣ
ನವದೆಹಲಿ: ಜನಜೀವನ ಪರಿವರ್ತಿಸಲು, ದೇಶವನ್ನು ಬಲಪಡಿಸಲು ದೊಡ್ಡ ಸುಧಾರಣೆಗಳಿಗೆ ಬದ್ಧ. ನಮಗೆ ರಾಷ್ಟ್ರ ಮೊದಲು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರತಿಜ್ಞೆ ಮಾಡಿದರು.
Advertisement
78ನೇ ಸ್ವಾತಂತ್ರ ದಿನಾಚರಣೆ (78th Independence Day) ಹಿನ್ನೆಲೆಯಲ್ಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ದೇಶವನ್ನುದ್ದೇಶಿ ಮಾತನಾಡಿದ ಮೋದಿ, ದೇಶದ ಸ್ವಾತಂತ್ರ್ಯಕ್ಕಾಗಿ ಜೀವನ ಸಮರ್ಪಣೆ ಮಾಡಿದ, ಸಂಘರ್ಷ ಮಾಡಿದ ಅಗಣಿತ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮಾಡುವ ಶುಭ ದಿನ ಎಂದು ಹೇಳಿದರು. ಇದನ್ನೂ ಓದಿ: Independence Day: ಕೆಂಪುಕೋಟೆಯಲ್ಲಿ ಸ್ವಾತಂತ್ರೋತ್ಸವದ ಸಂಭ್ರಮ – ಧ್ವಜಾರೋಹಣ ನೆರವೇರಿಸಿದ ಪ್ರಧಾನಿ
Advertisement
Advertisement
ಸುಧಾರಣೆಗಳಿಗೆ ನಮ್ಮ ಬದ್ಧತೆ ಗುಲಾಬಿ ಪತ್ರಿಕೆಯ ಸಂಪಾದಕೀಯಕ್ಕಾಗಿ ಅಲ್ಲ. ದೇಶವನ್ನು ಬಲಿಷ್ಠಗೊಳಿಸುವುದು ಎಂದು ನಾನು ದೇಶವಾಸಿಗಳಿಗೆ ಭರವಸೆ ನೀಡಲು ಬಯಸುತ್ತೇನೆ. ತಜ್ಞರು ಅಥವಾ ಬೌದ್ಧಿಕ ಚರ್ಚಾ ಕ್ಲಬ್‌ಗಳನ್ನು ತೃಪ್ತಿಪಡಿಸಲು ಸರ್ಕಾರವು ವ್ಯಾಪಕವಾದ ಸುಧಾರಣೆಗಳನ್ನು ಜಾರಿಗೆ ತಂದಿಲ್ಲ. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ‘ನೇಷನ್ ಫಸ್ಟ್’ ಪ್ರತಿಜ್ಞೆಯೇ ನಮ್ಮ ಆದ್ಯತೆ ಎಂದು ತಿಳಿಸಿದರು.
Advertisement
ದೇಶದ ರಕ್ಷಣೆ ಮತ್ತು ನಿರ್ಮಾಣಕ್ಕೆ ಪೂರ್ಣ ಮನಸ್ಸಿನಿಂದ, ಬದ್ಧತೆಯಿಂದ ರೈತರು ಮತ್ತು ಯುವಕರು ಕೆಲಸ ಮಾಡುತ್ತಿದ್ದಾರೆ. ನಾನು ಎಲ್ಲರಿಗೂ ಗೌರವ ಪೂರ್ವಕವಾಗಿ ನಮಸ್ಕರಿಸುತ್ತೇನೆ. ಅವಿತರ ಹೋರಾಟದಿಂದ ಸ್ವಾತಂತ್ರ್ಯ ಬಂದಿದೆ. ಅಂದು 40 ಕೋಟಿ ಜನರು ಒಂದು ಕನಸು, ಸಂಕಲ್ಪದೊಂದಿಗೆ ಹೋರಾಡಿದರು. ಅವರದೇ ರಕ್ತ ನಮ್ಮಲ್ಲಿ ಇದೆ ಎನ್ನುವ ಹೆಮ್ಮೆ ಇದೆ. 40 ಕೋಟಿ ಜನರು ವಿಶ್ವದ ಬಲಿಷ್ಠ ಸರ್ಕಾರವನ್ನು ಕಿತ್ತೊಗೆಯಿತು. 140 ಕೋಟಿ ಜನರು ಸಂಕಲ್ಪದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೊರಟರೇ ಏನೇ ಸವಾಲು ಬಂದರೂ, ಎಲ್ಲವನ್ನೂ ಮೀರಿ ನಾವು ಸಮೃದ್ಧ ಭಾರತ್, ವಿಸಕಿತ ಭಾರತ ಕನಸು ಪೂರ್ಣ ಮಾಡಬಹುದು ಎಂದು ಕರೆ ನೀಡಿದರು. ಇದನ್ನೂ ಓದಿ: Independence Day | ಇತಿಹಾಸ, ಮಹತ್ವ, ನೀವು ತಿಳಿದಿರಲೇಬೇಕಾದ ಸಂಗತಿಗಳಿವು
ಅಂದು ದೇಶಕ್ಕೆ ಸಾಯಲು ಜನರು ಪ್ರತಿಬದ್ಧವಾಗಿದ್ದರು. ನಾವು ಅಭಿವೃದ್ಧಿ ಭಾರತಕ್ಕೆ ಪ್ರತಿಬದ್ಧರವಾಗಿರಬೇಕು. ವಿಕಸಿತ ಭಾರತಕ್ಕಾಗಿ ದೇಶದ ಜನರು ಸಾಕಷ್ಟು ಸಲಹೆ ನೀಡಿದ್ದಾರೆ. ದೇಶದ ಪ್ರತಿಯೊಬ್ಬ ಜನರ ಕನಸು, ಸಂಕಲ್ಪ ಅದರೊಳಗಿದೆ. 2047 ಸ್ವಾತಂತ್ರ್ಯ ದಿನಾಚರಣೆ 100 ವರ್ಷಕ್ಕಾಗಿ ಸಾಕಷ್ಟು ಸಲಹೆ ನೀಡಿದ್ದಾರೆ. ಕೆಲವು ಜನರು ಉತ್ಪಾದನೆ ಹಬ್, ಸ್ಕಿಲ್ ಸಿಟಿ, ಆತ್ಮ ನಿರ್ಭರ್, ಸಿರಿ ಧಾನ್ಯಗಳನ್ನು ಜನಪ್ರಿಯ ಮಾಡಲು ಸೇರಿ ಅನೇಕ ಸಲಹೆ ನೀಡಿದ್ದಾರೆ. ನ್ಯಾಯ ವಿಳಂಬದ ಹಿನ್ನಲೆ ನ್ಯಾಯ ವಲಯದಲ್ಲಿ ವೇಗಬೇಕು. ಭಾರತದ ಸ್ಪೇಸ್ ಸ್ಟೇಷನ್ ನಿರ್ಮಾಣ, ಗ್ರೀನ್ ಸಿಟಿ ನಿರ್ಮಾಣ, ಪಾರಂಪರಿಕ ಔಷಧಿ ಅಭಿವೃದ್ಧಿ ಹೀಗೆ ಸಾಕಷ್ಟು ಸಲಹೆಗಳಿವೆ. ನನ್ನ ದೇಶದ ಸಾಮಾನ್ಯ ನಾಗರಿಕರು ಈ ಸಲಹೆ ನೀಡಿದ್ದಾರೆ. ದೇಶದ ಜನರಲ್ಲಿ ಇಷ್ಟು ದೊಡ್ಡ ಕನಸ್ಸುಗಳಿವೆ. ಇದರಿಂದ ನನ್ನ ಮನಸ್ಸಿನಲ್ಲಿ ಆತ್ಮ ವಿಶ್ವಾಸ ಇನ್ನಷ್ಟು ಹೆಚ್ಚುತ್ತದೆ ಎಂದರು.
ಕೊರೊನಾ ಸಂಕಷ್ಟ ಮರೆಯಲು ಸಾಧ್ಯವಿಲ್ಲ. ಕೋಟ್ಯಂತರ ಜನರಿಗೆ ಉಚಿತವಾಗಿ ಲಸಿಕೆ ನೀಡಲಾಯಿತು. ಭಯೋತ್ಪಾದಕರು ಬಂದು ದಾಳಿ ಮಾಡಿ ಹೋಗುತ್ತಿದ್ದರು. ಈಗ ನಮ್ಮ ಸೇನೆ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟೈಕ್ ಮಾಡುತ್ತದೆ. ಇದನ್ನು ನೋಡಿ ನಮ್ಮ ಸೇನೆಯ ಬಗ್ಗೆ ಹೆಮ್ಮೆಯಾಗುತ್ತದೆ ಎಂದು ಖುಷಿ ವ್ಯಕ್ತಪಡಿಸಿದರು. ಇದನ್ನೂ ಓದಿ: Independence Day | ರಾಜಸ್ಥಾನಿ ಲೆಹರಿಯಾ ಪೇಟ ಧರಿಸಿ ಗಮನ ಸೆಳೆದ ಮೋದಿ
ಏನಿದೆ ಅದರಲ್ಲಿ ಜೀವನ ಮಾಡಿ, ಏನು ಹೆಚ್ಚಿನದು ಆಗುವುದಿಲ್ಲ ಎನ್ನುವ ಮನಸ್ಥಿತಿ ಜನರಲ್ಲಿ ಇತ್ತು. ಈ ಮಾನಸಿಕತೆ ಬದಲಿಸಬೇಕಿತ್ತು. ಜನರಲ್ಲಿ ಬದಲಾಗುವ ಮನಸ್ಸಿದ್ದರೂ, ಅವರನ್ನು ಬದಲಾಗಲು ಬಿಡಲಿಲ್ಲ. ನಮಗೆ ಅವಕಾಶ ಸಿಕ್ಕಾಗ ನಾವು ಬದಲಾವಣೆ ಆರಂಭಿಸಿದೆವು. ದೇಶದ ಜನರಲ್ಲಿ ಬದಲಾವಣೆ ತರುವ ಸಂಕಲ್ಪ ಮಾಡಿದೆವು. ನಮ್ಮ ಬದ್ಧತೆ ನಾಲ್ಕು ದಿನದ್ದಲ್ಲ, ದೇಶಕ್ಕೆ ನಿರಂತರ ಶಕ್ತಿ ತುಂಬುವುದು ಎಂದು ತಿಳಿಸಿದರು.