– ನನ್ನ ಸ್ಪರ್ಧೆಗೆ ತೆರೆ ಬಿದ್ದಿದೆ
ಮಂಡ್ಯ: ಕುಮಾರಣ್ಣ ರಾಜ್ಯಕ್ಕೆ ಬೇಕು ಅಂತಾ ನಮ್ಮ ಶಾಸಕರು ಮತ್ತು ಮುಖಂಡರ ಕೂಗಾಗಿದೆ ಎಂದು ಜೆಡಿಎಸ್ (JDS) ಯುವನಾಯಕ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿಳಿಸಿದ್ದಾರೆ.
ಪಾಂಡವಪುರದಲ್ಲಿ (Pandavapura) ಸುದ್ದುಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ (Kumaraswamy) ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದರ ಬಗ್ಗೆ ಮಾತನಾಡಿದ್ದಾರೆ. ಕುಮಾರಣ್ಣ ಅವರಿಗೆ ಹಲವು ಲೋಕಸಭಾ ಕ್ಷೇತ್ರದಲ್ಲಿ ಒತ್ತಾಯ ಇದೆ. ಎಲ್ಲಿ ಅಂತಾ ಅವರು ಸ್ಪರ್ಧೆ ಮಾಡ್ತಾರೆ. ಕುಮಾರಣ್ಣ ನಮ್ಮ ರಾಜ್ಯಕ್ಕೆ ಬೇಕು. ಅವರು ಲೋಕಸಭಾ ಸ್ಪರ್ಧೆ ಮಾಡೋದು ಬಿಡೋದು ಮುಂದೆ ಗೊತ್ತಾಗುತ್ತೆ. ಅವರ ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ. ಅದು ಪಕ್ಷದ ವರಿಷ್ಠರ ತೀರ್ಮಾನ. ಅವರು ನಮ್ಮ ರಾಜ್ಯಕ್ಕೆ ಬೇಕು ಅಂತಾ ಶಾಸಕರು ಮುಖಂಡರ ಕೂಗಾಗಿದೆ ಎಂದು ಸುಳಿವು ನೀಡಿದ್ದಾರೆ. ಇದನ್ನೂ ಓದಿ: ಕುಟುಂಬ ಸಮೇತರಾಗಿ ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ದೆಹಲಿ ಸಿಎಂ
- Advertisement
- Advertisement
ಕೆಲವರು ಕುಮಾರಣ್ಣ ಕೇಂದ್ರಕ್ಕೆ ಹೋಗಲಿ ಅಂತಾರೆ. ಕೆಲವರು ರಾಜ್ಯದಲ್ಲಿ ಉಳಿದುಕೊಳ್ಳಲಿ ಅಂತಾರೆ. ಅಂತಿಮವಾಗಿ ಏನ್ ಆಗುತ್ತೆ ಎನ್ನೋದು ಕಾದು ನೋಡೋಣ. ನನ್ನ ಸ್ಪರ್ಧೆಗೆ ತೆರೆ ಬಿದ್ದಿದೆ. ಏನೇ ಕೇಳಿದ್ರು ಇದೇ ಉತ್ತರ. 2019ರ ಸೋಲಿನ ಬಗ್ಗೆ ಚಿಂತಿಸಿ ಫಲ ಏನು ಇಲ್ಲ. ಮುಂದೆ ಆಗುವುದರ ಬಗ್ಗೆ ಯೋಚನೆ ಮಾಡಬೇಕು ಅಷ್ಟೇ. ನಾನು ಪಾಸಿಟಿವ್ ಡೈರಕ್ಷನ್ ಅಲ್ಲಿ ಹೋಗಬೇಕೆಂಬ ಮನಸ್ಥಿತಿಯಲ್ಲಿ ಇದ್ದೀನಿ. ಕಳೆದು ಹೋಗಿರುವ ವಿಚಾರದ ಬಗ್ಗೆ ನಾನು ಪ್ರಾಮುಖ್ಯತೆ ಕೊಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಇಡಿ, ಸಿಬಿಐ ಮೂಲಕ ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ: ಡಿಕೆಶಿ
ಸುಮಲತಾ ಬಗ್ಗೆ ಮಾತನಾಡಿ, ಬಿಜೆಪಿ ಸುಮಲತಾ ಅವರ ಟಿಕೆಟ್ ಕೇಳಲು ಅಧಿಕಾರ ಇದೆ ಕೇಳ್ತಾರೆ. ಅಂತಿಮವಾಗಿ ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ. ಮೈತ್ರಿ ಬಗ್ಗೆ ಮಾತನಾಡುವವರ ಬಗ್ಗೆ ಅಮಿತ್ ಶಾ ಅವರು ಬಿಜೆಪಿ ನಾಯಕರಿಗೆ ಸಂದೇಶ ನೀಡಿದ್ದಾರೆ. ನಮ್ಮ ಪಕ್ಷದಲ್ಲಿ ಮೈತ್ರಿ ಬಗ್ಗೆ ಗೊಂದಲ ಇಲ್ಲ. ನಮ್ಮಲ್ಲಿ ಯಾರು ಅಪಸ್ವರದ ಮಾತನ್ನು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಗೃಹ ಇಲಾಖೆ ಕಾರ್ಯದರ್ಶಿಗೆ ನಿಂದನೆ- ದೆಹಲಿ ಪೊಲೀಸರಿಂದ ಆರೋಪಿ ಬಂಧನ
ಡಿ.ಸಿ.ತಮ್ಮಣ್ಣ, ಪುಟ್ಟರಾಜು, ಸುರೇಶ್‌ಗೌಡ ಎಲ್ಲರೂ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಲಿ, ಅರ್ಹರಿದ್ದಾರೆ. ಪಕ್ಷದ ವರಿಷ್ಠರು ಕೇಂದ್ರದ ನಾಯಕರು ತೀರ್ಮಾನ ಮಾಡ್ತಾರೆ. 28 ಕ್ಷೇತ್ರಗಳ ಪಟ್ಟಿ ಒಂದೇ ಬಾರಿ ಬಿಡುಗೆಯಾಗುತ್ತೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಪಘಾತದಿಂದ ಯುವಕನ ಸಾವಿಗೆ ನಾನೇ ಕಾರಣ ಎಂದು ಆತ್ಮಹತ್ಯೆಗೆ ಶರಣಾದ!