ಮೈಸೂರು: ಕಾನೂನು ಹೋರಾಟದ ವಿಚಾರವನ್ನು ನಮ್ಮ ಕಾನೂನಿನ ಟೀಂ ನೋಡಿಕೊಳ್ಳುತ್ತದೆ. ನಾನು ಅವರ ಬಳಿ ಯಾವ ಚರ್ಚೆಗಳನ್ನು ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಸಿಎಂ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ (FIR) ದಾಖಲಾಗಿರುವ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಹೋರಾಟದ ಬಗ್ಗೆ ಸಿಎಂ ಜೊತೆ ಕಾನೂನು ಸಲಹೆಗಾರ ಪೊನ್ನಣ್ಣ, ಸಚಿವ ಭೈರತಿ ಸುರೇಶ್ ಅವರೊಂದಿಗೆ ಚರ್ಚೆ ನಡೆಯಿತು.ಇದನ್ನೂ ಓದಿ: PL 2025 | ಮೆಗಾ ಹರಾಜಿಗೂ ಮುನ್ನವೇ IPL ಆಟಗಾರರಿಗೆ ಬಿಸಿಸಿಐ ಭರ್ಜರಿ ಗಿಫ್ಟ್
ಜಿಲ್ಲೆಯ ತಮ್ಮ ನಿವಾಸದಲ್ಲಿ ಚರ್ಚೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಹೋರಾಟದ ವಿಚಾರವನ್ನ ನಮ್ಮ ಕಾನೂನಿನ ಟೀಂ ನೋಡಿಕೊಳ್ಳುತ್ತದೆ. ಕಾನೂನು ಸಲಹೆಗಾರ ಪೊನಣ್ಣ ನನ್ನನ್ನು ಭೇಟಿಯಾಗಿದ್ದಾರೆ ಅಷ್ಟೇ. ನಾನು ಅವರ ಬಳಿ ಯಾವ ಚರ್ಚೆಗಳನ್ನು ಮಾಡಿಲ್ಲ. ಅವರು ತಮ್ಮ ಕ್ಷೇತ್ರಕ್ಕೆ ಹೋಗುತ್ತಿದ್ದರು. ಹೀಗಾಗಿ ಸೌಜನ್ಯವಾಗಿ ಬಂದಿದ್ದಾರೆ. ಇವತ್ತು ಮಾಧ್ಯಮಗಳಿಗೆ ಹೇಳುವುದಕ್ಕೆ ನನ್ನ ಬಳಿ ಏನು ಇಲ್ಲ. ನೀವೇ ಏನಾದರೂ ಇದ್ದರೆ ಹೇಳಿ ಎಂದರು.
ಇದೇ ವೇಳೆ ಕುಮಾರಸ್ವಾಮಿ ಆರೋಪಗಳ ಕುರಿತು ಮಾತನಾಡಿದ ಅವರು, ಕುಮಾರಸ್ವಾಮಿಯ (HD Kumaraswamy) ಈ ಆರೋಪಗಳಿಗೆ ನಾನು ಉತ್ತರ ಕೊಡುವುದಿಲ್ಲ. ಉತ್ತರ ಕೊಡಬೇಕು ಅಂತ ಎಲ್ಲಿಯೂ ಇಲ್ಲ. ಉತ್ತರ ಕೊಡಲ್ಲ ಎಂದ ಮೇಲೆ ನಾನು ಕೊಡುವುದಿಲ್ಲ. ಮತ್ತೆ ಮತ್ತೆ ಅದನ್ನೇ ನನ್ನ ಬಳಿ ಕೇಳಬೇಡಿ. 8 ಗಂಟೆ ಅವಧಿಯ ಔಟ್ ಪುಟ್ ಏನು ಎಂದು ಕೇಳಿದರೆ? ಅದಕ್ಕೆ ಏನು ಉತ್ತರ ಕೊಡಬೇಕು. ಮಾಧ್ಯಮಗಳಿಗೆ ನಿನ್ನೆಯೇ ಎಲ್ಲಾ ವಿವರಗಳನ್ನು ಕೊಟ್ಟಿದ್ದೇನೆ ಎಂದು ಖಡಕ್ಕಾಗಿ ಉತ್ತರಿಸಿದ್ದಾರೆ.ಇದನ್ನೂ ಓದಿ:ಇದನ್ನೂ ಓದಿ: BBK 11: ದೊಡ್ಮ,ನೆ ಎಂಟ್ರಿ ಕೊಡಲಿದ್ದಾರೆ ಮೋಕ್ಷಿತಾ ಪೈ