ಬೆಂಗಳೂರು: ರಾಜ್ಯಪಾಲರು (Thawarchand Gehlot) ಮಾಡಿರುವ ಕೆಲಸವನ್ನು ನಮ್ಮ ನಾಯಕರು ಹೇಳಿದ್ದಾರೆ. ಅದನ್ನು ರಾಜ್ಯಪಾಲರನ್ನು ಹೀಯಾಳಿಸಿದರು ಅನ್ನೋದು ಸರಿಯಲ್ಲ ಎಂದು ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ (Congress) ನಾಯಕರು ಆಡಿದ್ದ ಮಾತುಗಳನ್ನು ಸಿಎಂ ಸಿದ್ದರಾಮಯ್ಯ (Siddaramaiah) ಸಮರ್ಥನೆ ಮಾಡಿಕೊಂಡಿದ್ದಾರೆ.
ರಾಜ್ಯಪಾಲರನ್ನು ಕಾಂಗ್ರೆಸ್ ನಾಯಕರು ನಿಂದಿಸಿರುವ ಕುರಿತು ಬಿಜೆಪಿಯಿಂದ ಗುರುವಾರ ರಾಜ್ಯಾದ್ಯಂತ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯಪಾಲರು ಮಾಡಿರುವ ಕೆಲಸವನ್ನು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಇದನ್ನು ಹೇಳಿದರೆ ಹೀಯಾಳಿಸಿದ ರೀತೀನಾ? ಶಶಿಕಲಾ ಜೊಲ್ಲೆ ಕೇಸ್ ಇದೆ, ನಿರಾಣಿ ಕೇಸ್ ಇದೆ. ಕುಮಾರಸ್ವಾಮಿ ಕೇಸ್ ಇದೆ. ಜನಾರ್ದನ ರೆಡ್ಡಿ ಮೇಲೆ ಕೇಸ್ ಇದೆ. ಇವುಗಳಿಗೆ ಪರ್ಮಿಷನ್ ಕೊಟ್ಟಿಲ್ಲ. ಇದನ್ನು ಹೇಳಿದ್ರೆ ತಪ್ಪಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ವಿಧಾನ ಪರಿಷತ್‌ನಲ್ಲಿ ಬಹುಮತ ಬಂದ್ರೆ ಬಿಜೆಪಿ ತಂದಿದ್ದ ಭೂ ಕಂದಾಯ ಕಾಯ್ದೆ ರದ್ದು ಮಾಡ್ತೀನಿ: ಸಿದ್ದರಾಮಯ್ಯ
ರಾಜ್ಯಪಾಲರ ಹುದ್ದೆ ಸಂವಿಧಾನಿಕ ಹುದ್ದೆ. ಅದರ ಬಗ್ಗೆ ಗೌರವ ಇರಬೇಕು. ನಾವು ಹೇಳೋದು ರಾಜ್ಯಪಾಲರು ರಾಷ್ಟ್ರಪತಿಗಳ ಪ್ರತಿನಿಧಿಯಾಗಿ ಕೆಲಸ ಮಾಡಬೇಕು. ಕೇಂದ್ರ ಸರ್ಕಾರದ ಪ್ರತಿನಿಧಿ ಆಗಿ ಕೆಲಸ ಮಾಡೋದು ಬೇಡ ಎಂದು ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರು ಆಡಿದ ಮಾತನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಶತಮಾನ ಕಂಡ ಸರ್ಕಾರಿ ಶಾಲೆ ಕಿಡಿಗೇಡಿಗಳಿಂದ ಧ್ವಂಸ