ದಾವಣಗೆರೆ: ಡಿಕೆ ಶಿವಕುಮಾರ್ (DK Shivakumar) ಅವರು ಈ ಅವಧಿಯಲ್ಲಿ ಮುಖ್ಯಮಂತ್ರಿಯಾಗುವುದು (Chief Minister) ನಿಶ್ಚಿತ. ನಮ್ಮ ನಾಯಕ ಡಿಕೆಶಿ ಪರ 70 ಮಂದಿ ಶಾಸಕರ ಬೆಂಬಲವಿದೆ ಎಂದು ಚೆನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ (Shivaganga Basavaraj) ಬಾಂಬ್ ಸಿಡಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಅದು ಒಂದು ವರ್ಷದಲ್ಲಿ ಆಗಬಹುದು ಅಥವಾ ಎರಡು ವರ್ಷದ ಒಳಗೆ ಆಗಬಹುದು. ಒಟ್ಟಿನಲ್ಲಿ ಶಿವಕುಮಾರ್ ಅವರು ಸಿಎಂ ಆಗೇ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾನು ಡಿಕೆಶಿ ಪರವಾಗಿ ಯಾವಾಗಲು ನಿಲ್ಲುತ್ತೇನೆ. ನನ್ನಂತೆ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ 70 ಮಂದಿಯೂ ಅವರ ಪರವಾಗಿ ಇದ್ದೇವೆ. ನಾವೆಲ್ಲ ಗೆಲ್ಲಲು ಅವರ ಸಂಘಟನೆ ಕಾರಣವಾಗಿದೆ. ಈ ಕಾರಣಕ್ಕೆ ಯಾವ ಸಂದರ್ಭದಲ್ಲೂ ಕೂಡ ಅವರ ಪರವಾಗಿ ನಾವು ಇದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತವನ್ನು ಕಟ್ಟಲು ಯುವಜನರು ವಾರಕ್ಕೆ 70 ಗಂಟೆ ದುಡಿಯಬೇಕು: ನಾರಾಯಣ ಮೂರ್ತಿ
ವಯಸ್ಸಿನಲ್ಲಿ ಶಾಸಕರ ಮಧ್ಯೆ ಏರುಪೇರು ಇರಬಹುದು. ಆದರೆ ಪ್ರಥಮ ಬಾರಿಗೆ ಆಯ್ಕೆಯಾದವರೆಲ್ಲ ಅವರ ಪರವಾಗಿದ್ದೇವೆ. ನೂರಕ್ಕೆ ನೂರರಷ್ಟು ನಾವು ಡಿಕೆಶಿಯವರ ಪರವಾಗಿ ಇದ್ದೇವೆ. ನಾಳೆ ಅವರು ಏನು ಹೇಳುತ್ತಾರೋ ಅ ನಿರ್ಧಾರಕ್ಕೆ ನಾವು ಇದ್ದೇವೆ ಎಂದರು.
ಕೆಲವರು ಅವರವರ ಅಭಿಪ್ರಾಯ ಹೇಳುತ್ತಾರೆ. ಆದರೆ ಕೊನೆಯದಾಗಿ ಹೈಕಮಾಂಡ್ ಅಂತಿಮ ತೀರ್ಮಾನ ಮಾಡುತ್ತದೆ. ಶಿವಕುಮಾರ್ ಅವರಿಗೆ ಜಾತಿ ಅಧಾರದ ಮೇಲೆ ಹುದ್ದೆ ನೀಡಿಲ್ಲ. ಅವರ ಸಂಘಟನೆ, ಪರಿಶ್ರಮ ನೋಡಿ ಅವರಿಗೆ ಡಿಸಿಎಂ ಹುದ್ದೆ ಕೊಟ್ಟಿದ್ದಾರೆ. ಜಾತಿಗೆ ಒಂದು ಡಿಸಿಎಂ ಸ್ಥಾನ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎರಡು ವರ್ಷದ ನಂತರ ಹೊಸಬರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ಸರಿ ಇದೆ. ಆದವರೇ ಸಚಿವರಾದರೆ ಉಳಿದವರು ಏನ್ ಆಗಬೇಕು. ಅದ್ದರಿಂದ ಎರಡೂವರೆ ವರ್ಷಕ್ಕೆ ಸಚಿವ ಸ್ಥಾನ ಬದಲಾವಣೆ ಮಾಡುವುದು ಉತ್ತಮ. ನಾನು ಕೂಡ ಸನ್ಯಾಸಿ ಅಲ್ಲ ಸಚಿವ ಸ್ಥಾನ ನೀಡಿದರೆ ನಿಭಾಯಿಸುತ್ತೇನೆ ಎಂದರು.
ಮೊದಲ ಬಾರಿ ಶಾಸಕನಾಗಿ ಆಯ್ಕೆಯಾದ ಶಿವಗಂಗಾ ಬಸವರಾಜ್ ಅವರು ಶಿವಕುಮಾರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಸುದ್ದಿಯಾಗಿದ್ದರು. ಹಸಿರು ಶಾಲು ಧರಿಸಿ ಬಂದಿದ್ದ ಅವರು ಭಗವಂತ ಮತ್ತು ನನ್ನ ಆರಾಧ್ಯ ದೈವ ಡಿಕೆ ಶಿವಕುಮಾರ್ ಸಾಹೇಬರ ಮೇಲೆ ಪ್ರಮಾಣ ಮಾಡುತ್ತೇನೆ ಎಂದು ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]