ರಾಜರಾಜೇಶ್ವರಿ, ಜಯನಗರದಲ್ಲಿ ಗೆಲ್ಲುವುದೇ ನಮ್ಮ ಮೊದಲ ಆದ್ಯತೆ- ಎಚ್‍ಡಿಕೆ

Public TV
1 Min Read
HDK 3

ಬೆಂಗಳೂರು: ರಾಜರಾಜೇಶ್ವರಿ ನಗರ ಹಾಗೂ ಜಯನಗರದಲ್ಲಿ ಗೆಲ್ಲುವುದೇ ನಮ್ಮ ಮೊದಲ ಆದ್ಯತೆ ಹಾಗೂ ಅನಿವಾರ್ಯ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಪದ್ಮನಾಭ ನಗರದಲ್ಲಿರೋ ಮಾಜಿ ಪ್ರಧಾನಿ ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪ್ರಕ್ರಿಯೆಗಳು ಯಾವ ರೀತಿ ಹೋಗಬೇಕೆಂಬುದರ ಬಗ್ಗೆ ಚರ್ಚೆ ನಡೆಸಿದ್ದೇವೆ. ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಸಚಿವ ಸಂಪುಟದ ಬಗ್ಗೆ ಚರ್ಚೆಸಿದ ಬಳಿಕ ಅಂತಿಮವಾಗುತ್ತದೆ. ಯಾಕಂದ್ರೆ ಅವರು ನಮಗೆ ಮೇಜರ್ ಪಾರ್ಟನರ್ ಅಂತ ತಿಳಿಸಿದ್ರು.

kumaraswamy deve gowda

ರಾಜರಾಜೇಶ್ವರಿನಗರ ಹಾಗೂ ಜಯನಗರ ವಿಚಾರದಲ್ಲಿ ಈ ಕ್ಷಣದವರೆಗೂ ಯಾವುದೇ ಚರ್ಚೆಯಾಗಿಲ್ಲ. ಈ ಎರಡೂ ಕ್ಷೇತ್ರದ ಚುನಾವಣೆಯಲ್ಲಿಯೂ ನಾವು ಗೆಲ್ಲುವುದೇ ನಮ್ಮ ಮೊದಲ ಆದ್ಯತೆಯಾಗಿದೆ. ರಾಜರಾಜೇಶ್ವರಿನನಗರ ಕ್ಷೇತ್ರದಲ್ಲಿ ಜೆಡಿಎಸ್, ಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬುದು ಬೋಗಸ್ ನ್ಯೂಸ್. ಇದ್ಯಾವುದು ಸತ್ಯವಲ್ಲ. ಇವೆಲ್ಲ ಊಹಾಪೋಹದ ಸುದ್ದಿಗಳು. ಇದ್ಯಾವುದನ್ನು ಇನ್ನೂ ಚರ್ಚೆ ಮಾಡಿಲ್ಲ. ಈ ಎರಡೂ ಕ್ಷೇತ್ರಗಳನ್ನೂ ನಾವು ಗೆಲ್ಲಲೇಬೇಕು. ಅದು ಅನಿವಾರ್ಯ ಕೂಡ. ಆ ದೃಷ್ಟಿಯಿಂದ ಆಯಾ ಕ್ಷೇತ್ರದ ಮುಖಂಡರುಗಳು ಮತ್ತು ಕಾಂಗ್ರೆಸ್ ನ ಮುಖಂಡರುಗಳು ನಾವು ಸೇರಿ ಚರ್ಚೆ ಮಾಡಿ ಎರಡೂ ಕೇತ್ರದಲ್ಲಿ ಗೆಲ್ಲುವ ತೀರ್ಮಾನ ಮಾಡಬೇಕು. ಹೀಗಾಗಿ ಈ ಕ್ಷಣದವರೆಗೂ ನಾವೊಂದು ಕ್ಷೇತ್ರ, ಅವರೊಂದು ಕ್ಷೇತ್ರ ಅನ್ನೋ ತೀರ್ಮಾನಗಳಾಗಿಲ್ಲ. ಈ ಬಗ್ಗೆ ಯಾರೂ ಗೊಂದಲ ಮಾಡಿಕೊಳ್ಳುವುದು ಬೇಡ ಎಂದು ಅವರು ಸ್ಪಷ್ಟಪಡಿಸಿದ್ರು.

ಬಿಜೆಪಿಯವರು ಎಷ್ಟೇ ಕುದುರೆ ವ್ಯಾಪಾರ ಮಾಡಿ, ಕೆಲವು ಶಾಸಕರನ್ನು ಹೆದರಿಸಿ, ಇಡಿ, ಐಟಿ ಇಲಾಖೆಳ ಮೂಲಕ ತೊಂದರೆ ಕೊಟ್ಟು ಯಾವುದಾದ್ರೂ ಶಾಸಕರನ್ನು ಗೆಲ್ತೀವಿ ಅಂತ ತಿಳಿದುಕೊಂಡಿದ್ದರೆ ಅದು ಸಾಧ್ಯವಿಲ್ಲ. ಇಂದು ಎಲ್ಲಾ ಶಾಸಕರು ತಮ್ಮ ತಮ್ಮ ಕ್ಷೇತ್ರಕ್ಕೆ ತೆರಳಿ ಮತದಾರರಿಗೆ ಅಭಿನಂದನೆ ಸಲ್ಲಿಸುವುದು ಅನಿವಾರ್ಯವಾಗಿದೆ. ಆದ್ದರಿಂದ ಯಾರೆಲ್ಲ ಹೋಟೆಲಿನಲ್ಲಿ ಇದ್ದಾರೆ ಎನ್ನುವುದು ನನಗೆ ತಿಳಿದಿಲ್ಲ ಅಂದ್ರು.

Share This Article
Leave a Comment

Leave a Reply

Your email address will not be published. Required fields are marked *