ಬೆಂಗಳೂರು: ಜನರನ್ನ ಲೂಟಿ ಮಾಡುವ ಈ ಸರ್ಕಾರದ (Congress) ವಿರುದ್ಧ ನಮ್ಮ ಹೋರಾಟ ನಿರಂತರ. ಜನರ ಸಮಸ್ಯೆಗಳಿಗೆ ಸರ್ಕಾರದ ಕಿವಿ ಕಿವುಡಾಗಿದೆ. ಸರ್ಕಾರದ ಕಿವುಡುತನ ತೆಗೆಯುವ ಕೆಲಸ ಡಾಕ್ಟರ್ ಆಗಿ ನಾವು ಮಾಡುತ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದ್ದಾರೆ.
ಮನ್ ಕಿ ಬಾತ್‌ನಲ್ಲಿ ಕ್ಷಯಮುಕ್ತ ದೇಶ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಪ್ರಧಾನಿ ಮೋದಿ ಕರೆ ಹಿನ್ನೆಲೆ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಶಾಸಕ ಗೋಪಾಲಯ್ಯರಿಂದ ಟಿ.ಬಿ ಸೋಂಕಿತರಿಗೆ ನ್ಯೂಟ್ರಿಷನಲ್ ಕಿಟ್‌ಗಳ ಹಂಚಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಶೋಭಾ ಕರಂದ್ಲಾಜೆ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಏನಿದು ಘಿಬ್ಲಿ? ದಿಢೀರ್ ಫೇಮಸ್ ಆಗಿದ್ದು ಹೇಗೆ? ಮೂಲ ಮಾಲೀಕನ ಸಂಪತ್ತು ಎಷ್ಟಿದೆ?
ದರ ಏರಿಕೆ ಮುಂದುವರಿಸಿದ್ದಾರೆ. ಹಾಲಿನ ದರ, ವಿದ್ಯುತ್ ದರ, ನೋಂದಣಿ ಶುಲ್ಕ ಹೆಚ್ಚಳ ಮಾಡಿದ್ದಾರೆ. ಸರ್ಕಾರದಲ್ಲಿ ಹಣ ಇಲ್ಲ, ಇರುವ ಹಣ ಗ್ಯಾರಂಟಿಗಳಿಗೆ ಕೊಡುತ್ತಿದ್ದಾರೆ. ರಾಜ್ಯ ಆರ್ಥಿಕ ಕುಸಿತ ಕಾಣುತ್ತಿದೆ. ಭ್ರಷ್ಟಾಚಾರ ಮಿತಿ ಮೀರಿದೆ. ಸಚಿವರು ಜಿಲ್ಲೆಗಳಿಗೆ ಹೋಗಿ ಸಭೆ ಮಾಡುತ್ತಿಲ್ಲ ಎಂದು ಶೋಭಾ ಕಿಡಿಕಾರಿದರು. ಇದನ್ನೂ ಓದಿ: ರಾಯಚೂರಿನಲ್ಲಿ ಬೀದಿನಾಯಿ ದಾಳಿಗೆ ಬಾಲಕ ಸಾವು – ಬಾಲಕಿ ಸ್ಥಿತಿ ಗಂಭೀರ
ನಾಗಪುರ ಆರ್‌ಎಸ್‌ಎಸ್ (RSS) ಕಚೇರಿಗೆ ಪ್ರಧಾನಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಇದರಲ್ಲೇನೂ ಕುತೂಹಲ ಇಲ್ಲ. ಅಲ್ಲಿ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮೋದಿಯವರು (Narendra Modi) ಹೋಗಿದ್ದಾರೆ. ಅದೂ ಅಲ್ಲದೇ ಯುಗಾದಿ ಬೇರೆ ಇದೆ. ಆರ್‌ಎಸ್‌ಎಸ್‌ಗೆ ಯುಗಾದಿ ವಿಶೇಷ ಪರ್ವ. ಯುಗಾದಿಯಲ್ಲಿ ಹಾಗೂ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೋದಿ ಹೋಗಿದ್ದಾರೆ. ಮೋದಿಯವರು ಮೂಲತಃ ಆರ್‌ಎಸ್‌ಎಸ್‌ನವರು. ಪ್ರಚಾರಕರಾಗಿ ಬಿಜೆಪಿ ಜವಾಬ್ದಾರಿ ತೆಗೆದುಕೊಂಡ ಅವರು ಇಂದು ದೇಶದ ಪ್ರಧಾನಿ ಆಗಿದ್ದಾರೆ. ಸಂಘದ ಸಾಮಾನ್ಯ ಕಾರ್ಯಕರ್ತರಾಗಿ ಅವರು ಆರ್‌ಎಸ್‌ಎಸ್ ಕಚೇರಿಗೆ ಹೋಗಿದ್ದಾರೆ. ಈ ಭೇಟಿ ನಮಗೆಲ್ಲ ಆನಂದ ತಂದಿದೆ ಎಂದರು. ಇದನ್ನೂ ಓದಿ: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು-ಗುವಾಹಟಿ ಕಾಮಾಕ್ಯ ಎಕ್ಸ್‌ಪ್ರೆಸ್