ಜೈಪುರ: ಮುಸ್ಲಿಂ ಮತಾಂಧರಿಂದ ಹತ್ಯೆಗೀಡಾದ ರಾಜಸ್ಥಾನದ ಉದಯಪುರ ಮೂಲದ ಕನ್ಹಯ್ಯ ಲಾಲ್‌ಗೆ ಕಳೆದ ಕೆಲವು ದಿನಗಳಿಂದಲೇ ಬೆದರಿಕೆ ಕರೆಗಳು ಬರುತ್ತಿದ್ದವು. ಅದರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಅವರ ಪುತ್ರರು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾರನ್ನು ಬೆಂಬಲಿಸಿದ್ದಕ್ಕಾಗಿ ಉದಯಪುರದ ಟೈಲರ್ ಕನ್ಹಯ್ಯಾ ಲಾಲ್ ಅವರನ್ನು ಮಂಗಳವಾರ ಇಬ್ಬರು ಶಿರಚ್ಛೇದನ ಮಾಡಿ ಹತ್ಯೆ ನಡೆಸಿದ್ದರು. ಮಾತ್ರವಲ್ಲದೇ ಕೊಲೆಯ ವೀಡಿಯೋ ಮಾಡಿ, ಪ್ರಧಾನಿ ನರೇಂದ್ರ ಮೋದಿಯವರನ್ನೂ ಇದೇ ರೀತಿಯಲ್ಲಿ ಹತ್ಯೆ ಮಾಡುವುದಾಗಿ ಬೆರಿಕೆಯನ್ನೂ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದನ್ನೂ ಓದಿ: ಮದರಸಾಗಳಲ್ಲಿ ಮಕ್ಕಳಿಗೆ ರುಂಡ ಕತ್ತರಿಸುವ ಕಾನೂನನ್ನೇ ಬೋಧಿಸಲಾಗುತ್ತಿದೆ – ಆರಿಫ್ ಖಾನ್ ಕಿಡಿ
Advertisement
Advertisement
ಈ ಹೇಯ ಕೃತ್ಯಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ತಂದೆಯನ್ನು ಕೊಲೆ ಮಾಡಿರುವವರನ್ನು ಎನ್‌ಕೌಂಟರ್ ಮಾಡಬೇಕು ಎಂದು ಕನ್ನಯಾ ಪುತ್ರರಾದ ಯಶ್ ಹಾಗೂ ತರುಣ್ ಒತ್ತಾಯಿಸಿದ್ದಾರೆ.
Advertisement
ತಪ್ಪಾಗಿ ಆಕ್ಷೇಪಾರ್ಹ ಪೋಸ್ಟ್ ಪ್ರಕಟಿಸಿದ ತಪ್ಪಿಗೆ ಪೊಲೀಸರು ಈ ಹಿಂದೆ ಬಂಧಿಸಿದ್ದು, ನಂತರ ಜಾಮೀನು ಪಡೆದು ಹೊರ ಬಂದಿದ್ದರು. ಪೊಲೀಸ್ ಠಾಣೆಯಲ್ಲಿ ಕ್ಷಮೆಯನ್ನೂ ಯಾಚಿಸಿದ್ದರು. ಆದರೆ ಬಳಿಕ ಅವರಿಗೆ ಬೆದರಿಕೆ ಕರೆಗಳು ಬರಲಾರಂಭಿಸಿದವು. ತಂದೆ ಈ ವೇಳೆ ಪೊಲೀಸರನ್ನು ಸಂಪರ್ಕಿಸಿದ್ದರು. ಆದರೆ ಅವರು ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಉದಯಪುರ ಟೈಲರ್ ಹತ್ಯೆ ಖಂಡಿಸಿ ರಾಜ್ಯದಲ್ಲಿ ಶುರುವಾಯ್ತು ನನ್ನ ಕತ್ತು ಸೀಳಬೇಡಿ ಅಭಿಯಾನ
Advertisement
ತಮ್ಮ ತಂದೆಗೆ ಕೆಲಸದ ಜಾಗದಲ್ಲೇ ಒಬ್ಬ ಬೆದರಿಕೆ ಒಡ್ಡಿದ್ದ. ಈ ಹಿನ್ನೆಲೆ 5-6 ದಿನಗಳ ಕಾಲ ಅಂಗಡಿಯನ್ನೂ ಮುಚ್ಚಿದ್ದರು. ಪೊಲೀಸರು ಸರಿಯಾದ ಸಮಯದಲ್ಲಿ ಕ್ರಮ ಕೈಗೊಂಡಿದ್ದರೆ. ಇಂದು ನಮ್ಮ ತಂದೆ ಬದುಕಿರುತ್ತಿದ್ದರು. ನಾವಿಬ್ಬರೂ ವಿದ್ಯಾರ್ಥಿಗಳಾಗಿದ್ದು, ನಮ್ಮ ಮನೆಯಲ್ಲಿ ತಂದೆ ಮಾತ್ರವೇ ದುಡಿಯುತ್ತಿದ್ದರು ಎಂದು ಕಂಬನಿ ಮಿಡಿದಿದ್ದಾರೆ.