– ಸೆಮಿಕಾನ್ ಇಂಡಿಯಾ ಕಾರ್ಯಕ್ರಮದಲ್ಲಿ ಪ್ರಧಾನಿ ಮಾತು
ಲಕ್ನೋ: ಜಗತ್ತಿನ ಪ್ರತಿಯೊಂದು ಸಾಧನಗಳಲ್ಲಿಯೂ ಭಾರತ ನಿರ್ಮಿತ ಚಿಪ್ ಇರಬೇಕೆನ್ನುವುದು ನಮ್ಮ ಕನಸು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ತಿಳಿಸಿದರು.
Advertisement
ಮೂರು ದಿನಗಳ ಕಾಲ ನಡೆಯಲಿರುವ ಉತ್ತರಪ್ರದೇಶದ (Uttarpradesh) ಗ್ರೇಟರ್ ನೋಯ್ಡಾದ (Greater Noida) ಇಂಡಿಯಾ ಎಕ್ಸ್ಪೋ ಮಾರ್ಟ್‌ನಲ್ಲಿ (India Expo Mart) ನಡೆದ 2024ರ ಸೆಮಿಕಾನ್ ಇಂಡಿಯಾ (Semicon India 2024) ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.ಇದನ್ನೂ ಓದಿ: ನಿರ್ದೇಶನದತ್ತ ‘ಬಿಗ್ ಬಾಸ್’ ಖ್ಯಾತಿಯ ಚಂದನ್ ಕುಮಾರ್
Advertisement
Advertisement
ಚಿಪ್‌ಗಳು ಕೇವಲ ತಂತ್ರಜ್ಞಾನದ ರೂಪವಾಗಿರಬಾರದು. ಅದು ಜನರ ಆಸೆಗಳನ್ನು ಈಡೇರಿಸುವ ಮಾಧ್ಯಮವಾಗಬೇಕು ಎಂದು ತಿಳಿಸಿದರು.
Advertisement
ಈ ಕಾರ್ಯಕ್ರಮ ಭಾರತದ ಸೆಮಿಕಂಡಕ್ಟರ್ (Semiconducter) ಸಾಮರ್ಥ್ಯ ಹಾಗೂ ಪ್ರದರ್ಶಿಸುವ ಗುರಿಯನ್ನು ಹೊಂದಿದೆ. ಸೆಮಿಕಂಡಕ್ಟರ್ ಉತ್ಪಾದನೆಗೆ ದೇಶವನ್ನು ಜಾಗತಿಕ ಕೇಂದ್ರವಾಗಿಸುವ ಉದ್ದೇಶವನ್ನು ಹೊಂದಿದೆ ಎಂದರು.
VIDEO | “India is world’s 8th country where such a huge event linked with global semiconductor industry is being held. I can say that this is the right time to be in India. You are at the right place at the right time. In the India of 21st century, the chips are never down.… pic.twitter.com/0LFvdnC8xo
— Press Trust of India (@PTI_News) September 11, 2024
ಇಂತಹ ದೊಡ್ಡಮಟ್ಟದ ಕಾರ್ಯಕ್ರಮ ನಿಯೋಜಿಸುವಲ್ಲಿ ಭಾರತ ವಿಶ್ವದಲ್ಲೇ 8ನೇ ಸ್ಥಾನದಲ್ಲಿದೆ. 2028ರ ವೇಳೆಗೆ ಸೆಮಿಕಂಡಕ್ಟರ್ ಮಾರುಕಟ್ಟೆಯು 8,030 ಕೋಟಿ ತಲುಪಲಿದ್ದು, 85,000 ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಇದಕ್ಕಾಗಿ 1.4 ಲಕ್ಷ ಕೋಟಿಗೂ ಅಧಿಕ ಹೂಡಿಕೆ ಮಾಡಲಾಗಿದ್ದು, ಹಲವು ಯೋಜನೆಗಳು ಪ್ರಗತಿಯಲ್ಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಜ್ಯಪಾಲರು
ಇದೇ ವೇಳೆ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಸೆಮಿಕಂಡಕ್ಟರ್ ವಿಶ್ವಕ್ಕೆ ಶೇ.20ರಷ್ಟು ಕೊಡುಗೆಯನ್ನು ನೀಡುತ್ತವೆ. ಈ ಕಾರಣದಿಂದ ಮುಂದಿನ 10 ವರ್ಷಗಳಲ್ಲಿ 85,000 ಇಂಜಿನಿಯರ್ ಹಾಗೂ ತಂತ್ರಜ್ಞರ ಮೂಲಕ ಅಭಿವೃದ್ಧಿಪಡಿಸಲು ಸರ್ಕಾರ ಸಿದ್ಧವಾಗಿದೆ ಎಂದರು.