ಕಳೆದ ಸಲ ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಸಿನಿಮಾದ ‘ನಾಟು ನಾಟು’ ಹಾಡಿಗಾಗಿ ಆಸ್ಕರ್ (Oscar) ಪ್ರಶಸ್ತಿ ಬಂದಿತ್ತು. ಈ ಬಾರಿ ದಕ್ಷಿಣದ ಮತ್ತೊಂದು ಸಿನಿಮಾ ಈ ವರ್ಷದ ಆಸ್ಕರ್ ಪ್ರಶಸ್ತಿಗಾಗಿ ನಾಮಿನೇಟ್ (Nomination) ಆಗಿದೆ. ಮಲಯಾಳಂನ 2018 ಹೆಸರಿನ ಚಿತ್ರ ಈ ಬಾರಿ ಆಸ್ಕರ್ ಪ್ರಶಸ್ತಿಗಾಗಿ ಸೆಣಸಲಿದೆ. ಈ ವಿಷಯವನ್ನು ಆಸ್ಕರ್ ಆಯ್ಕೆ ಸಮಿತಿ ಅಧ್ಯಕ್ಷ, ಕನ್ನಡದವರೇ ಆಗಿರುವ ಗಿರೀಶ್ ಕಾಸರವಳ್ಳಿ ತಿಳಿಸಿದ್ದಾರೆ.
ಟೊವಿನೋ ಥಾಮಸ್ ನಟನೆಯ 2018 ಹೆಸರಿನ ಮಲಯಾಳಂ (Malayalam) ಸಿನಿಮಾ ವಿಶೇಷ ಕಥಾವಸ್ತುವನ್ನು ಹೊಂದಿದೆ. ಕೇರಳದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಅತಿವೃಷ್ಠಿ ಸೃಷ್ಟಿಸಿದ ಆವಾಂತರವನ್ನು ಆಧರಿಸಿದ ಚಿತ್ರಿಸಲಾಗಿದೆ. ಈ ಚಿತ್ರಕ್ಕೆ ಭಾರೀ ಪ್ರತಿಕ್ರಿಯೆ ಕೂಡ ಉತ್ತಮವಾಗಿತ್ತು. ಈ ಸಿನಿಮಾವನ್ನು ಕಾಸರವಳ್ಳಿ ಅಧ್ಯಕ್ಷತೆಯ ಕಮೀಟಿಯು ಆಸ್ಕರ್ ಪ್ರಶಸ್ತಿ ಸ್ಪರ್ಧೆಗಾಗಿ ಆಯ್ಕೆ ಮಾಡಲಾಗಿದೆ. ಈ ಆಯ್ಕೆಯು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಮೂಲಕ ನಡೆಯುತ್ತದೆ. ಇದು ಪ್ರತಿ ವರ್ಷವೂ ಒಂದು ಸಿನಿಮಾವನ್ನು ಆಯ್ಕೆ ಮಾಡಿ, ಸರಕಾರವೇ ಉಳಿದ ವೆಚ್ಚವನ್ನು ಭರಿಸಿ ಕಳುಹಿಸುತ್ತದೆ. ಖಾಸಗಿಯಾಗಿ ಯಾವ ಸಿನಿಮಾಗಳು ಬೇಕಾದರೂ ಸ್ಪರ್ಧಿಸಬಹುದಾಗಿದೆ.
ಬಲಗಮ್, ದಿ ಕೇರಳ ಸ್ಟೋರಿ, ಆಗಸ್ಟ್ 16 ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳನ್ನು ನೋಡಿರುವ ಸದಸ್ಯರು ಕೊನೆಗೆ 2018: ಎವರಿ ಒನ್ ಇಸ್ ಎ ಹೀರೋ ಚಿತ್ರವನ್ನು ಆಯ್ಕೆ ಮಾಡಿದ್ದಾರೆ. ಆಸ್ಕರ್ ನಾಮಿನೇಷನ್ ಯಾದಿಗೆ ಈ ಸಿನಿಮಾ ಸೇರ್ಪಡೆ ಆಗಬೇಕಾದರೆ, ಆಸ್ಕರ್ ಕಮೀಟಿ ಕೂಡ ಈ ಸಿನಿಮಾ ನೋಡಬೇಕು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]