ಕನ್ನಡತಿ ದೀಪಿಕಾ ಪಡುಕೋಣೆ (Deepika Padukone) ಸದಾ ಒಂದಲ್ಲಾ ಒಂದು ಸುದ್ದಿಯ ಮೂಲಕ ಸೌಂಡ್ ಮಾಡ್ತಿದ್ದಾರೆ. ಇತ್ತೀಚಿಗೆ ಆಸ್ಕರ್ ವೇದಿಕೆಯಲ್ಲಿ ದೀಪಿಕಾ ನಿರೂಪಣೆ ಮಾಡಿದ ಮೇಲೆ ದೇಶದ ಎಲ್ಲೆಡೆ ಅವರು ಗಮನ ಸೆಳೆದಿದ್ದಾರೆ. ಈಗ ಆಸ್ಕರ್ (Oscars 2023) ಪಾರ್ಟಿಯಲ್ಲಿ ನಟಿ ಧರಿಸಿದ್ದ ಬಟ್ಟೆ ಬಗ್ಗೆ ಸಖತ್ ಚರ್ಚೆಯಾಗುತ್ತಿದೆ. ಬಟ್ಟೆಯ ಅಸಲಿ ಬೆಲೆ ಕೇಳಿದ್ರೆ ನೀವು ಶಾಕ್ ಆಗುತ್ತೀರಾ.
ಬಾಲಿವುಡ್ (Bollywood) ನಟಿ ದೀಪಿಕಾ ಪಡುಕೋಣೆ ನಟನೆ, ಡ್ಯಾನ್ಸ್, ಫಿಟ್‌ನೆಸ್‌ಗಷ್ಟೇ ಅಲ್ಲ, ಫ್ಯಾಷನ್‌ಗೂ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಇತ್ತೀಚಿನ ಆಸ್ಕರ್ ಇವೆಂಟ್‌ನಲ್ಲಿ ಚೆಂದದ ಡ್ರೆಸ್ ತೊಟ್ಟು ನಿರೂಪಣೆ ಮಾಡಿದ್ದ ನಟಿಗೆ ಇಡೀ ದೇಶವೇ ಹಾಡಿ ಹೊಗಳುತ್ತಿದೆ. ಇದನ್ನೂ ಓದಿ: ‘ಟ್ವಿಂಕಲ್’ ಹಾಡು ಹೇಳುತ್ತಾ ಬಂದ ಶಿವಾಜಿ ಸುರತ್ಕಲ್ 2
ಈ ಕಾರ್ಯಕ್ರಮದ ಬಳಿಕ ಪಿಂಕ್ ಡ್ರೆಸ್‌ನಲ್ಲಿ (Pink Dress) ನಟಿ ಕಂಗೊಳಿಸಿದ್ದಾರೆ. ಇವೆಂಟ್‌ನಲ್ಲಿ ದೀಪಿಕಾ ಧರಿಸಿದ್ದ ದುಬಾರಿ ಡ್ರೆಸ್ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಈ ಡ್ರೆಸ್ ನ್ಯೂಯಾರ್ಕ್ ಸಿಟಿ ಮೂಲದ ವಿನ್ಯಾಸಗಾರ ನಯೀಮ್ ಖಾನ್ ಅವರ ಕಲೆಕ್ಷನ್‌ನಲ್ಲಿದೆ. ಈ ಡ್ರೆಸ್ ನಯೀಮ್ ಖಾನ್ ಅವರ 2022ರ ಕಲೆಕ್ಷನ್‌ಗೆ ಸೇರಿದ್ದು, ಇದರ ಬೆಲೆ 819,775 ರೂ. ಮೊತ್ತದಾಗಿದೆ.
ನೆಟ್ಟಿಗರು ಮಾತ್ರ ಆ ಡ್ರೆಸ್ ಬೆಲೆಗೆ ಸುಂದವಾದ ಒಂದು ಕಾರು ಖರೀದಿಸ್ಬೋದಿತ್ತಲ್ಲ ಅಂತಿದ್ದಾರೆ. ದೀಪಿಕಾ ಅವರ ದುಬಾರಿ ಬಟ್ಟೆ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.