ಲಾಸ್ ಏಂಜಲಿಸ್: ಗಿಲ್ಲೆರ್ವೊ ಡೆಲ್ ಟೋರೊ ನಿರ್ದೇಶನದ `ದ ಶೇಪ್ ಆಫ್ ವಾಟರ್’ ಚಿತ್ರವೂ 2018 ನೇ ಸಾಲಿನ ಅತ್ಯುತ್ತಮ ಚಿತ್ರಕ್ಕಾಗಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಚಿತ್ರವೂ 13 ವಿಭಾಗಗಳಲ್ಲಿ ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಿರ್ದೇಶಕ ಗಿಲ್ಲೆರ್ವೊ ಡೆಲ್ ಟೋರೊಗೆ ಸಿಕ್ಕಿದೆ.
ಅತ್ಯುತ್ತಮ ನಟಿಯಾಗಿ `ಥ್ರೀ ಬಿಲ್‍ಬೋರ್ಡ್ಸ್ ಔಟ್‍ಸೈಡ್ ಎಬ್ಬಿಂಗ್’ ಚಿತ್ರದ ನಟಿ ಫ್ರಾನ್ಸಿಸ್ ಮೆಕ್ಡೋರ್ಮಂಡ್ ಅವರಿಗೆ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ನಟನಾಗಿ `ಡಾರ್ಕೆಸ್ಟ್ ಅವರ್’ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡ ಗ್ಯಾರಿ ಓಲ್ಡ್ ಮ್ಯಾನ್ ಅವರಿಗೆ ಲಭಿಸಿದೆ.
Advertisement
ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಮೂರು ಕುದುರೆಗಳ ಓಟ ಎಂಬಂತೆ ಫ್ರಾನ್ಸಿಸ್ `ಥ್ರೀ ಬಿಲ್‍ಬೋರ್ಡ್ಸ್ ಓಟ್‍ಸೈಡ್ ಎಬ್ಬಿಂಗ್ ಚಿತ್ರಕ್ಕೆ, `ಮಿಸ್ಸೌರಿ’ ಚಿತ್ರದ ನಟ ಸ್ಯಾಮ್ ರೋಕ್‍ವೆಲ್, `ದ ಫ್ಲೋರಿಡಾ ಪ್ರೋಜೆಕ್ಟ್ಸ್’ ಚಿತ್ರಕ್ಕೆ ವಿಲ್ಲೆಮ್ ಡಾಫೂ ಮತ್ತು `ಆಲ್ ದ ಮನಿ ಇನ್ ದ ವರ್ಲ್ದ್’ ಚಿತ್ರದ ನಟ ಕ್ರಿಸ್ಟೊಫರ್ ಪ್ಲಂಮ್ಮರ್ ನಡುವೆ `ಮಿಸ್ಸೌರಿ’ ಚಿತ್ರದ ನಟ ಸ್ಯಾಮ್ ರೋಕ್‍ವೆಲ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇವರ ಜೊತೆ ಅದೇ ಚಿತ್ರದ ನಟ ವುಡ್ಡಿ ಹಾರೆಲ್ ಸನ್ ಅವರಿಗೂ ಪ್ರಶಸ್ತಿ ಲಭಿಸಿದೆ.
Advertisement
Advertisement
ಕ್ರಿಸ್ಟೊಫರ್ ನೋಲಾನ್ ಅವರ `ಡಂಕಿರ್ಕ್’ ಚಿತ್ರವೂ ಅತ್ಯುತ್ತಮ ಸೌಂಡ್ ಮತ್ತು ಫಿಲ್ಮ್ ಎಡಿಟಿಂಗ್ ಗೆ ಮೂರು ಆಸ್ಕರ್ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. `ಡಾರ್ಕೆಸ್ಟ್ ಅವರ್’ ಚಿತ್ರ ತಂಡವೂ ಗ್ಯಾರಿ ಓಲ್ಡ್ ಮ್ಯಾನ್ ಅವರನ್ನ ವಿನ್ಸೆಂಟ್ ಚರ್ಚಿಲ್ ಆಗಿ ಅದ್ಭುತವಾಗಿ ರೂಪಾಂತರ ಮಾಡಿರುವುದಕ್ಕೆ ಅತ್ಯುತ್ತಮ ಮೇಕಪ್‍ಗೆ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಪಾತ್ರಕ್ಕಾಗಿ ಗ್ಯಾರಿ ಓಲ್ಡ್ ಮ್ಯಾನ್ ಅವರಿಗೆ ಸತತ ನಾಲ್ಕು ಗಂಟೆಗಳ ಕಾಲ ಮೇಕಪ್ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.
Advertisement
`ಕಾಲ್ ಮಿ ಬೈ ಯುವರ್ ನೇಮ್’, `ಫ್ಯಾಂಟಮ್ ತ್ರೆಡ್’ ಮತ್ತು `ಗೆಟ್ ಔಟ್’ ಚಿತ್ರದ ಆಫ್ರಿಕ್-ಅಮೇರಿಕನ್ ನಿರ್ದೇಶಕ ಮತ್ತು ಬರಹಗಾರ ಜೊರ್ಡ್‍ನ್ ಪೀಲೆ ತನ್ನ ಅತ್ಯುತ್ತಮ ಮೂಲ ಚಿತ್ರಕಥೆಗೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಜಿಮ್ಮಿ ಕಿಮ್ಮೆಲ್ ಸತತ ಎರಡನೇ ಬಾರಿ ಕಾರ್ಯಕ್ರಮದ ನಿರೂಪಕರಾಗಿದ್ದು, ಕಳೆದ ಬಾರಿ ಅತ್ಯುತ್ತಮ ಪ್ರಶಸ್ತಿಯನ್ನು ಪ್ರಸ್ತುತಪಡಿಸಿದ್ದ ವಾರೆನ್ ಬಿಯಟ್ಟಿ ಮತ್ತು ಫಾಯೆ ಡನವೇ ಈ ಸಲದ ಪ್ರಶಸ್ತಿಯನ್ನ ಪ್ರಸ್ತುತಪಡಿಸಿದರು.
ಅತ್ಯುತ್ತಮ ಚಿತ್ರ: ದ ಶೇಪ್ ಆಫ್ ವಾಟರ್
ಅತ್ಯುತ್ತಮ ನಿರ್ದೇಶಕ: ಗಿಲ್ಲೆರ್ವೊ ಡೆಲ್ ಟೋರೊ
ಅತ್ಯುತ್ತಮ ನಟಿ: ಫ್ರಾನ್ಸಿಸ್ ಮೆಕ್ಡೋರ್ಮಂಡ್, `ಥ್ರೀ ಬಿಲ್‍ಬೋರ್ಡ್ಸ್ ಔಟ್‍ಸೈಡ್ ಎಬ್ಬಿಂಗ್’
ಅತ್ಯುತ್ತಮ ನಟ: ಗ್ಯಾರಿ ಓಲ್ಡ್ ಮ್ಯಾನ್, `ಡಾರ್ಕೆಸ್ಟ್ ಅವರ್’
ಅತ್ಯುತ್ತಮ ಪೋಷಕ ನಟ: ಸ್ಯಾಮ್ ರೋಕ್‍ವೆಲ್, `ಮಿಸ್ಸೌರಿ’
ಅತ್ಯುತ್ತಮ ಪೋಷಕ ನಟಿ: ಆಲಿಸನ್ ಜೆನ್ನಿ ಐ, ತೋನ್ಯ
ಅತ್ಯುತ್ತಮ ಮೂಲ ಚಿತ್ರಕಥೆ: ಗೆಟ್ ಔಟ್
ಅತ್ಯುತ್ತಮ ವಿದೇಶಿ ಭಾಷಾ ಚಿತ್ರ: ಎ ಫೆಂಟ್ಯಾಸ್ಟಿಕ್ ವುಮೆನ್
ಅತ್ಯುತ್ತಮ ಮೂಲ ಸ್ಕೋರ್: ದ ಶೇಪ್ ಆಫ್ ವಾಟರ್
ಅತ್ಯುತ್ತಮ ಮೂಲ ಗೀತೆ: ರಿಮೆಂಬರ್ ಮೀ, ಕೊಕೊ
ಅತ್ಯುತ್ತಮ ಡಾಕ್ಯುಮೆಂಟರಿ ಚಿತ್ರ: ಇಕರಸ್