Connect with us

ವಿಡಿಯೋ: ಆ ಚಿತ್ರದ ಬದಲು ಬೇರೊಂದು ಚಿತ್ರಕ್ಕೆ ಪ್ರಶಸ್ತಿ- ಆಸ್ಕರ್‍ನಲ್ಲಿ ಎಡವಟ್ಟು

ವಿಡಿಯೋ: ಆ ಚಿತ್ರದ ಬದಲು ಬೇರೊಂದು ಚಿತ್ರಕ್ಕೆ ಪ್ರಶಸ್ತಿ- ಆಸ್ಕರ್‍ನಲ್ಲಿ ಎಡವಟ್ಟು

ಲಾಸ್ ಏಂಜಲೀಸ್: ಅಮೆರಿಕಾದ ಲಾಸ್ ಏಂಜಲೀಸ್‍ನಲ್ಲಿ ಸಿನಿಮಾ ರಂಗದಲ್ಲೇ ಬಹುದೊಡ್ಡ ಪ್ರಶಸ್ತಿಯಾದ ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಈ ವೇಳೆ ಅತ್ಯುತ್ತಮ ಚಿತ್ರದ ಹೆಸರು ಘೋಷಣೆ ಮಾಡುವಲ್ಲಿ ಗೊಂದಲವುಂಟಾಗಿದೆ.

89ನೇ ಆಸ್ಕರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಅತ್ಯುತ್ತಮ ಚಿತ್ರವೆಂದು `ಮೂನ್‍ಲೈಟ್’ ಬದಲು `ಲಾ ಲಾ ಲಾಂಡ್’ಗೆ ಪ್ರಶಸ್ತಿ ನೀಡಲಾಗಿದೆ. ತದನಂತರ ಮೂನ್‍ಲೈಟ್ ಚಿತ್ರ ಅತ್ಯುತ್ತಮವೆಂದು ಘೋಷಣೆ ಮಾಡಿದ್ದರು. ಈ ವೇಳೆ ಪ್ರಶಸ್ತಿ ಸ್ವೀಕರಿಸಿದ್ದ ಲಾ ಲಾ ಲಾಂಡ್ ಚಿತ್ರದ ನಿರ್ಮಾಪಕ ವೇದಿಕೆಯಲ್ಲೇ ಪ್ರಶಸ್ತಿಯನ್ನು ಹಿಂದಕ್ಕೆ ಕೊಡಬೇಕಾದ ಪ್ರಸಂಗ ಎದುರಾಯಿತು. ಬಳಿಕ ಮೂನ್‍ಲೈಟ್ ತಂಡಕ್ಕೆ ಆಸ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಾರೆನ್ ಬೆಟ್ಟಿ ಎಂಬವರು ಪ್ರಶಸ್ತಿ ನೀಡುವ ವೇಳೆ ಈ ಎಡವಟ್ಟು ಮಾಡಿದ್ದಾರೆ. ಇದು ಹಾಲಿವುಡ್ ಚಿತ್ರರಂಗದಲ್ಲೇ ಅತ್ಯಂತ ದೊಡ್ಡ ಕಾರ್ಯಕ್ರಮದಲ್ಲಿ ನಡೆದಿರುವುದು ವಿಷಾದನೀಯ ಸಂಗತಿಯಾಗಿದೆ.

ಪ್ರಶಸ್ತಿ ನೀಡುವಿಕೆಯಲ್ಲಿ ಗೊಂದಲ ಉಂಟಾಂದಂತೆಯೇ ಕರಣ್ ಜೋಹರ್, ರಿಷಿ ಕಪೂರ್ ಹಾಗೂ ಶಬಾನಾ ಆಜ್ಮಿ ಟ್ವೀಟ್ ಮಾಡಿದ್ದು, ಸಿನಿಮಾ ರಂಗದ ಬಹುದೊಡ್ಡ ಕಾರ್ಯಕ್ರಮದಲ್ಲೇ ಇಂತಹ ಎಡವಟ್ಟಾಗಿರುವುದು ನಾಚಿಗೇಡಿನ ಸಂಗತಿ ಅಂತಾ ಕಿಡಿಕಾರಿದ್ದಾರೆ.

Advertisement
Advertisement