ಪ್ಯಾರಾಸೈಟ್ ಸಿನಿಮಾದ ಮೂಲಕ ಸಾಕಷ್ಟು ಫೇಮಸ್ ಆಗಿದ್ದ ಹಾಲಿವುಡ್ ನಟ ಲೀ ಸನ್ ಕ್ಯುನ್ (Lee Sun-kyun) ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದಕ್ಷಿಣ ಕೊರಿಯಾದ (South Korea) ಸೆಂಟ್ರಿಲ್ ಸಿಯೋಲ್ ನ ಕಾರ್ ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರಿನಲ್ಲೇ ನಟನ ಶವ ಪತ್ತೆಯಾಗಿದೆ. ವ್ಯಕ್ತಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿತ್ತು. ಸ್ಥಳಕ್ಕೆ ಬಂದ ಪೊಲೀಸರು ವ್ಯಕ್ತಿಯನ್ನು ಪತ್ತೆ ಮಾಡಿ, ಅದು ಲೀ ಸನ್ ಕ್ಯೂನ್ ಎಂದು ದೃಢಪಡಿಸಿದ್ದಾರೆ.
Advertisement
ಲೀ ಸನ್ ಕ್ಯೂನ್ ಆತ್ಮಹತ್ಯೆ (suicide)ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಅವರನ್ನು ವಿಚಾರಣೆ ಮಾಡಲಾಗಿತ್ತು. ವಿಚಾರಣೆಗೆ ಒಳಗಾದ ಮರುದಿನವೇ ಅವರು ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 48ರ ವಯಸ್ಸಿನ ನಟನ ಸುದ್ದಿಯು ದಕ್ಷಿಣ ಕೊರಿಯಾಗೆ ಆಘಾತವನ್ನೇ ಮೂಡಿಸಿದೆ.
Advertisement
Advertisement
ಅಲ್ಲದೇ ಮನೆಯಲ್ಲಿ ಆತ್ಮಹತ್ಯೆಯ ಪತ್ರವನ್ನು ಬರೆದಿಟ್ಟು, ತಮ್ಮ ಪತಿ ಹೋಗಿರುವುದಾಗಿ ಲೀ ಸನ್ ಕ್ಯೂನ್ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಾಗುತ್ತಿದೆ. ಕಾರಿನಲ್ಲಿ ಶವದ ಜೊತೆ ಸುಟ್ಟ ಇದ್ದಿಲು ಬ್ರಿಕೆಟ್ ಕಂಡು ಬಂದಿದ್ದು, ಆತ್ಮಹತ್ಯೆಗೆ ಮುನ್ನ ಅವರು ಡ್ರಗ್ ಸೇವನೆ ಮಾಡಿರಬಹುದು ಎಂದು ಶಂಕಿಸಲಾಗಿದೆ.