ಆಸ್ಕರ್ ಸಿನಿಮಾದ ಮೂಲಕ ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದ ಆಸ್ಕರ್ ಕೃಷ್ಣ, ನಂತರ ‘ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡ್ಸಬಿಟ್ಟ’ ಚಿತ್ರದಿಂದ ನಾಯಕರೂ ಆದರು. ಇದೀಗ ಎರಡನೇ ಬಾರಿ ಕೃತ್ಯದ ಮೂಲಕ ಮತ್ತೆ ನಾಯಕರಾಗುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ ಅನ್ನು ಶ್ರೀಮುರಳಿ ಬಿಡುಗಡೆ ಮಾಡಿ, ಕೃತ್ಯದ ಕೆಲ ವಿಷಯಗಳನ್ನೂ ಹಂಚಿಕೊಂಡಿದ್ದಾರೆ.
’ಆಸ್ಕರ್’, ’ಮಿಸ್ ಮಲ್ಲಿಗೆ’ ’ಮೋನಿಕಾ ಈಸ್ ಮಿಸ್ಸಿಂಗ್’ ’ಮನಸಿನ ಮರೆಯಲಿ’ ಹಾಗೂ ಇತ್ತೀಚಿನ ’ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡ್ಸುಬಿಟ್ಟ’ ಚಿತ್ರಗಳ ಮೂಲಕ ಭರವಸೆ ಮೂಡಿಸಿರುವ ನಿರ್ದೇಶಕ ಆಸ್ಕರ್ ಕೃಷ್ಣ’ಕೃತ್ಯ’ ಸಿನಿಮಾಗೆ ನಿರ್ದೇಶನ ಮಾಡುವುದರ ಜತೆಗೆ ನಿರ್ಮಾಣ ಮತ್ತು ನಾಯಕನ ಸ್ಥಾನವನ್ನೂ ಅಲಂಕರಿಸಿರುವುದು ವಿಶೇಷ. ಗೌತಮ್ ರಾಮಚಂದ್ರ ಈ ಚಿತ್ರದ ಸಹ ನಿರ್ಮಾಪಕ. ಆಸ್ಕರ್ ಕೃಷ್ಣರೊಂದಿಗೆ ಹಲವು ವರ್ಷಗಳಿಂದ ಒಡನಾಟದಲ್ಲಿರುವ ಗೌತಮ್ ರಾಮಕೃಷ್ಣರವರು ಸಾಫ್ಟ್‌ವೇರ್ ಉದ್ಯೋಗಿ. ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಇವರ ಜೊತೆ ಸೇರಿಕೊಂಡು ಬಂಡವಾಳ ಹೂಡುತ್ತಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು
ಟೈಟಲ್ ಪೋಸ್ಟರ್ ಅನಾವರಣ ಸಂದರ್ಭದಲ್ಲಿ ಹಿರಿಯ ನಿರ್ಮಾಪಕರಾದ ಬಾ.ಮ.ಹರೀಶ್, ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ಬಣಕಾರ್, ಬಾ.ಮ.ಗಿರೀಶ್, ನರಸಿಂಹರಾಜು, ಡಾ.ಸುನಿಲ್‌ಕುಮಾರ್, ವಿಜಯ್‌ಕುಮಾರ್‌ಸಿಂಹ, ಟಿಪ್ಪುವರ್ಧನ್ ಮುಂತಾದವರು ಉಪಸ್ಥಿತರಿದ್ದರು. ನಾಯಕಿ, ತಾರಾಗಣ ಮತ್ತು ತಂತ್ರಜ್ಘರ ವಿವರಗಳನ್ನು ಮಹೂರ್ತ ದಿನದಂದು ತಿಳಿಸುವುದಾಗಿ ತಂಡವು ಹೇಳಿಕೊಂಡಿದೆ.