ಈ ಬಾರಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಬಂದ ಬೆನ್ನಲ್ಲೇ ಅಭಿಮಾನದ ಮಹಾಪುರವೇ ಹರಿದು ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನಾಡಿನ ಬಹುತೇಕ ಗಣ್ಯರು ಎರಡೂ ಚಿತ್ರತಂಡಕ್ಕೆ ಮನಸಾರೆ ಪ್ರಂಶಸಿಸಿದ್ದಾರೆ. ಶುಭಾಶಯ ತಿಳಿಸಿದ್ದಾರೆ. ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ (MK Stalin) ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಆಸ್ಕರ್ ಪ್ರಶಸ್ತಿ ವಿಜೇತ ಡಾಕ್ಯುಮೆಂಟರಿಯ ಕಥಾ ನಾಯಕ ಮತ್ತು ನಾಯಕಿಗೆ ಭರ್ಜರಿ ಬಹುಮಾನ ಘೋಷಿಸಿದ್ದಾರೆ.
Advertisement
ಈ ಬಾರಿ ತೆಲುಗಿನ ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಮತ್ತು ತಮಿಳಿನ ‘ದಿ ಎಲಿಫೆಂಟ್ ವಿಸ್ಪರರ್ಸ್’ (The Elephant Whisperers) ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಬಂದಿರುವ ವಿಚಾರ ಗೊತ್ತೇ ಇದೆ. ದಿ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿಯ ನಿಜವಾದ ಹೀರೋ ಬೊಮ್ಮನ್ (Bomman) ಮತ್ತು ಹಿರೋಯಿನ್ ಬೆಳ್ಳಿ (Belli) ಎಂಬ ಮಾವುತ ದಂಪತಿಗಳು. ಈ ಡಾಕ್ಯುಮೆಂಟರಿ ಇವರ ಬದುಕನ್ನೇ ಕೇಂದ್ರಿಕರಿಸಿದ್ದು ಮಾಡಿದ್ದು. ಹಾಗಾಗಿ ಸ್ಟಾಲಿನ್ ಇವರಿಬ್ಬರನ್ನೂ ಸಿಎಂ ಕಚೇರಿಗೆ ಕರೆಯಿಸಿಕೊಂಡು ನೆನಪಿನ ಫಲಕ ಮತ್ತು ಎರಡು ಲಕ್ಷ ರೂಪಾಯಿ ಬಹುಮಾನ ನೀಡಿದ್ದಾರೆ. ಇದನ್ನೂ ಓದಿ: ‘ಟ್ವಿಂಕಲ್’ ಹಾಡು ಹೇಳುತ್ತಾ ಬಂದ ಶಿವಾಜಿ ಸುರತ್ಕಲ್ 2
Advertisement
Advertisement
ಕೇವಲ ಈ ಇಬ್ಬರಿಗೆ ಮಾತ್ರ ಬಹುಮಾನ ನೀಡಿಲ್ಲ. ಆನೆ ಶಿಬಿರದಲ್ಲಿ ಕೆಲಸ ಮಾಡುತ್ತಿರುವ 91 ಮಾವುತರಿಗೂ ತಲಾ ಒಂದೊಂದು ಲಕ್ಷ ರೂಪಾಯಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮಾವುತರಿಗೆ ಮನೆ ಕಟ್ಟಿಕೊಡಲು 9.1 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಘೋಷಿಸಿದ್ದಾರೆ. ದಂಪತಿಗೆ ಸನ್ಮಾನಿಸಿ ಚೆಕ್ ನೀಡಿರುವ ಫೋಟೋವನ್ನು ಸ್ಟಾಲಿನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಆ ರಾಜ್ಯದ ಅಧಿಕಾರಿಗಳು. ಸ್ಟಾಲಿನ್ ನಡೆಗೆ ಶ್ಲ್ಯಾಘಿಸಿದ್ದಾರೆ.