ಬಾಲಿವುಡ್ ಸೆಲೆಬ್ರಿಟಿಗಳ ಆತ್ಮೀಯ ಗೆಳೆಯನೆಂದು ಖ್ಯಾತಿ ಪಡೆದಿರುವ ಓರ್ರಿ ಅವತ್ರಮಣಿ (Orry Awatramani) ಇದೀಗ ಪ್ರೆಗ್ನೆಂಟ್ ದೀಪಿಕಾ ಪಡುಕೋಣೆ (Deepika Padukone) ಬೇಬಿ ಬಂಪ್ ಮುಟ್ಟಿ ಪೋಸ್ ನೀಡಿದ್ದಾರೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಂಬಾನಿ ಮನೆ ಮಗನ ಕಾರ್ಯಕ್ರಮದಲ್ಲಿ ರಣ್‌ವೀರ್ (Ranveer Singh) ಮತ್ತು ದೀಪಿಕಾ ಪಡುಕೋಣೆಯನ್ನು ಓರ್ರಿ ಮೀಟ್ ಮಾಡಿದ್ದಾರೆ. ಪತಿ ರಣ್‌ವೀರ್ ಮುಂದೆಯೇ ದೀಪಿಕಾ ಬೇಬಿ ಬಂಪ್ ಮುಟ್ಟಿ ಓರ್ರಿ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ತಪ್ಪಾಗಿದ್ರೆ ಶಿಕ್ಷೆಯಾಗುತ್ತದೆ, ಕಾನೂನಿಗಿಂತ ಯಾರು ದೊಡ್ಡವರಿಲ್ಲ: ಧನ್ವೀರ್ ಗೌಡ
View this post on Instagram
ಪತಿ ರಣವೀರ್ ಸಿಂಗ್ ನಡುವೆ ನಿಂತು ಪೋಸ್ ನೀಡಿದ್ದಾರೆ. ನಟಿ ದೀಪಿಕಾ ಪರ್ಪಲ್ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ಈ ಫೋಟೋದಲ್ಲಿ ದೀಪಿಕಾ ಪಡುಕೋಣೆಯ ಬೇಬಿ ಬಂಪ್ ಹೊಟ್ಟೆ ಹೈಲೆಟ್ ಆಗಿ ಕಾಣಿಸುತ್ತಿದೆ. ದೀಪಿಕಾ ಪಡುಕೋಣೆ ಗರ್ಭ ಧರಿಸಿರುವುದು ಸುಳ್ಳು, ಈಕೆಯ ಬೇಬಿ ಬಂಪ್ ನಕಲಿ ಎನ್ನುವವರಿಗೆ ಉತ್ತರವೆಂಬಂತೆ ಈ ಫೋಟೋ ಇದೆ. ರಣವೀರ್ ಸಿಂಗ್ ಖುಷಿಯಿಂದ ಓರ್ರಿ ಬೆನ್ನಿಗೆ ಕೈ ಹಾಕಿ ಪೋಸ್ ನೀಡಿದ್ದಾರೆ.
ಅಂದಹಾಗೆ, ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ (Radhika Merchant) ಮದುವೆ ಜುಲೈ 12ರಂದು ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಲಿದೆ.