ಚಿತ್ರದುರ್ಗ: ಹೆಣ್ಣು ಮಕ್ಕಳನ್ನ ಕೆಟ್ಟ ದೃಷ್ಠಿಯಿಂದ ನೋಡೋ ವಿಕೃತ ಮನಸ್ಸಿನ ವ್ಯಕ್ತಿಗಳಿಗೆ ಇವರು ಮಾದರಿ. ಹುಟ್ಟುತ್ತಾ ಅನಾಥನಾದರೂ ನೂರಾರು ಹೆಣ್ಣು ಮಕ್ಕಳಿಗೆ ಅಣ್ಣ. ಇಂತಹ ಅಪರೂಪದ ಅಣ್ಣ ಜಿಲ್ಲೆಯಲ್ಲಿದ್ದಾರೆ.
ಪ್ರತಿ ವರ್ಷ ರಕ್ಷಾ ಬಂಧನ ಸಮಯದಲ್ಲಿ ನೂರಾರು ಹೆಂಗಳೆಯರು ರಾಖಿ ಕಟ್ಟಿ ಈ ಅಣ್ಣನ ಆರ್ಶೀವಾದ ಪಡಿಯುತ್ತಾರೆ. ಹಾಸ್ಯ ಕವಿ ಎಂದೇ ಗುರುತಿಸಿಕೊಂಡಿರುವ ಜಗನ್ನಾಥ್ ಅದೆಷ್ಟೋ ಸಹೋದರಿಯರಿಗೆ ಪ್ರೀತಿಯ ಅಣ್ಣನಾಗಿದ್ದಾರೆ.
Advertisement
ರಕ್ಷಾ ಬಂಧನದ ದಿನ ಇವರ ಕೈಗಳು ರಾಖಿಗಳಿಂದ ಕಂಗೊಳಿಸುತ್ತಿರುತ್ತವೆ. ರಾಖಿ ಕಟ್ಟಿದ ಸಹೋದರಿಯರಿಗೆ ನೆನಪಿನ ಕಾಣಿಕೆಯಾಗಿ ಉಡುಗೊರೆಯನ್ನೂ ಕೊಡುವ ವಾಡಿಕೆ ಇದೆ. ಹೀಗಾಗಿ ಹಲವಾರು ವರ್ಷಗಳಿಂದ ಈ ಪದ್ಧತಿ ನಡೆಸಿಕೊಂಡು ಬರುತ್ತಿರುವ ಜಗನ್ನಾಥ್ ಈ ಮೂಲಕ ತನಗಿಲ್ಲದ ಹೆತ್ತವರ ಪ್ರೀತಿಯನ್ನ ಕಂಡಿದ್ದಾರೆ.