ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ 3 ವಾರಗಳಿಂದ ಮುಷರಫ್ ಅನಾರೋಗ್ಯದ ಹಿನ್ನೆಲೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರ ಆರೋಗ್ಯ ಹದಗೆಡುತ್ತಿದೆ ಹಾಗೂ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಮೂಲಗಳು ವರದಿ ಮಾಡಿವೆ. ಇದನ್ನೂ ಓದಿ: ಪ್ರವಾದಿ ವಿರುದ್ಧ ಅವಹೇಳನ – ಕ್ರಮಕ್ಕೆ ಆಗ್ರಹಿಸಿ ದೇಶಾದ್ಯಂತ ಮುಸ್ಲಿಮರ ಪ್ರತಿಭಟನೆ, ಬುರ್ಕಾ ಧರಿಸಿ ಬೀದಿಗಿಳಿದ ಮಹಿಳೆಯರು
Advertisement
Advertisement
ಕುಟುಂಬದವರು ಹೇಳೋದೇನು?
ಪರ್ವೇಜ್ ಮುಷರಫ್ ವೆಂಟಿಲೇಟರ್‌ನಲ್ಲಿ ಇಲ್ಲ. ಕಳೆದ 3 ವಾರಗಳಿಂದ ಅವರು ಅನಾರೋಗ್ಯದ ಹಿನ್ನೆಲೆ(ಅಮಿಲೋಡೋಸಿನ್) ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಚೇತರಿಕೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ ಹಾಗೂ ಚಿಕಿತ್ಸೆಗೂ ಸ್ಪಂದಿಸುತ್ತಿಲ್ಲ. ಅವರು ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸೋಣ ಎಂದು ಕುಟುಂಬದ ಮೂಲಗಳು ತಿಳಿಸಿವೆ ಎಂದು ಮುಷರಫ್ ಅಧಿಕೃತ ಟ್ವಿಟ್ಟರ್ ಖಾತೆ ಬರೆಯಲಾಗಿದೆ. ಇದನ್ನೂ ಓದಿ: ಕೆಸಿಆರ್‌ಗೆ ಅವಹೇಳನ – ತೆಲಂಗಾಣ ಬಿಜೆಪಿ ಮುಖಂಡನ ಬಂಧನ
Advertisement
Message from Family:
He is not on the ventilator. Has been hospitalized for the last 3 weeks due to a complication of his ailment (Amyloidosis). Going through a difficult stage where recovery is not possible and organs are malfunctioning. Pray for ease in his daily living. pic.twitter.com/xuFIdhFOnc
— Pervez Musharraf (@P_Musharraf) June 10, 2022
Advertisement
ಪರ್ವೇಜ್ ಮುಷರಫ್ 1999ರಲ್ಲಿ ಫೆಡರಲ್ ಮಿಲಿಟರಿ ಸ್ವಾಧೀನದ ಬಳಿಕ ಪಾಕಿಸ್ತಾನದ 10ನೇ ಅಧ್ಯಕ್ಷರಾದರು. 2001 ರಿಂದ 2008ರ ವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಬಳಿಕ ತಮ್ಮ ಮೇಲಿನ ದೋಷಾರೋಪಣೆಗಳನ್ನು ತಪ್ಪಿಸಲು ರಾಜೀನಾಮೆ ನೀಡಿದ್ದರು.