ಚಾಮರಾಜನಗರ: ತಮ್ಮ ಮಗನ ಸಾವಿನ ನೋವಿನಲ್ಲೂ ಚಾಮರಾಜನಗರ ಜಿಲ್ಲೆಯ ಕುಟುಂಬವೊಂದು ಸಾರ್ಥಕತೆ ಮೆರೆದಿದೆ.
ಮೃತನ ಹೆಸರು ರಾಘವಾ(34). ಈತ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಚಿಲಕವಾಡಿ ಗ್ರಾಮದವರು. ಇವರು ತಂದೆ, ತಾಯಿ, ಪತ್ನಿ ಮತ್ತು 2 ವರ್ಷದ ಮಗಳ ಜೊತೆ ಸುಖ ಸಂಸಾರ ನಡೆಸುತ್ತಿದ್ದರು. ಆದರೆ ರಾಘವಾ ಕಳೆದ ಜುಲೈ 29 ರಂದು ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ರು. ಇದನ್ನೂ ಓದಿ: ಸುಖವಾಗಿರಬಹುದೆಂದು ಪತಿ ಜೊತೆಗೆ ವಿದೇಶಕ್ಕೆ ಹೋದ್ಲು – ಕಿರುಕುಳ ತಡೆಯದೆ ಮಸಣ ಸೇರಿದ್ಲು
Advertisement
Advertisement
ಕೂಡಲೇ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ರಾಘವ ಬದುಕುವುದು ಅಸಾಧ್ಯ ಎಂದು ವೈದ್ಯರು ತಿಳಿಸಿದ್ರು. ಇದರಿಂದ ಅಘಾತಗೊಂಡ ರಾಘವನ ಕುಟುಂಬದವರು ಅವರ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ರು. ಈ ನಿರ್ಧಾರದಿಂದ ಐವರಿಗೆ ಪುನರ್ಜನ್ಮ ದೊರೆತಿದೆ.
Advertisement
Advertisement
ರಾಘವಾನ ಅಂಗಾಂಗ ದಾನ ಮಾಡಲು ಅವರ ಕುಟುಂಬದವರು ಮೈಸೂರಿನ ಸ್ವಯಂ ಸೇವಾಸಂಸ್ಥೆಯನ್ನು ಸಂಪರ್ಕಿಸಿ ತಮ್ಮ ನಿರ್ಧಾರ ತಿಳಿಸಿದ್ರು. ನಂತರ ಕುಟುಂಬ ಸದಸ್ಯರ ಒಪ್ಪಿಗೆ ಪಡೆದು ರಾಘವಾ ಅವರ ಎರಡು ಮೂತ್ರಪಿಂಡ, ಒಂದು ಯಕೃತ್ತು, ಹೃದಯ ಕವಾಟುಗಳು ಮತ್ತು ಕಾರ್ನಿಯಾವನ್ನು ಬೇರ್ಪಡಿಸಲಾಯಿತು. ಅವರ ಅಂಗಾಂಗಗಳನ್ನು ಮೈಸೂರು ಮತ್ತು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಅಗತ್ಯ ಇರುವ ಐವರಿಗೆ ಅಂಗಾಂಗಳನ್ನು ಕಸಿ ಮಾಡಲಾಗಿದೆ. ಇದನ್ನೂ ಓದಿ: 3 ಆ್ಯಪ್‍ಗಳನ್ನು ರಚಿಸಿ ಗಿನ್ನಿಸ್ ದಾಖಲೆ ಮಾಡಿದ 12 ವರ್ಷದ ಪೋರ
ರಾಘವಾ ಅವರ ಎರಡು ವರ್ಷದ ಏನೂ ಅರಿಯದ ಮಗು ನೋಡಿದರೆ ಎಂತಹವರಿಗು ಕರುಳು ಚುರುಕ್ ಎನ್ನುತ್ತದೆ. ಒಟ್ಟಾರೆ ಈ ಕುಟುಂಬ ಮಗನ ಸಾವಿನ ದುಃಖದ ನಡುವೆಯು ಆತನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದು ಇತರರಿಗೆ ಮಾದರಿಯಾಗಿದೆ.