ಸಾವಿನಲ್ಲೂ ಹಲವರಿಗೆ ಜೀವ ಕೊಟ್ಟ ಬಾಲಕ

Public TV
1 Min Read
Organ donation bidar boy

ಬೀದರ್: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕನ ಮೆದುಳು ನಿಷ್ಕ್ರಿಯವಾದ ಹಿನ್ನೆಲೆಯಲ್ಲಿ ಆತನ ಪಾಲಕರು ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕಮಲನಗರ ಪಟ್ಟಣದ ಮಾಜಿ ತಾ.ಪಂ. ಅಧ್ಯಕ್ಷ ಶ್ರೀರಂಗ ಪರಿಹಾರ ಅವರ ಏಕೈಕ ಪುತ್ರ ಆದಿತ್ಯ ಸೈಕಲ್ ಸವಾರಿ ಮಾಡುತ್ತಿದ್ದ ಸಂದರ್ಭದಲ್ಲಿ ಬೈಕ್ ಒಂದು ಡಿಕ್ಕಿ ಹೊಡೆದಿತ್ತು. ಬಾಲಕನ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದರಿಂದ ಆತನನ್ನು ಮಹಾರಾಷ್ಟ್ರದ ಲಾತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕನ ಮೆದುಳು ನಿಷ್ಕ್ರಿಯಗೊಂಡಿದೆ. ಇದನ್ನೂ ಓದಿ: ಹಾವು ತಪ್ಪಿಸಲು ಹೋಗಿ ತುಂಗಾ ನಾಲೆಗೆ ಬಿದ್ದ ಕಾರು – ಮಹಿಳೆ ಸಾವು

Organ donation bidar boy 1

ಪುತ್ರನ ಸಾವಿನ ಶೋಕದ ನಡುವೆ ಪೋಷಕರು ಮಗನ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ಬಾಲಕನ ದೇಹವನ್ನು ಲಾತೂರಿನಿಂದ ಸೊಲ್ಲಾಪುರಕ್ಕೆ ಜೀರೋ ಟ್ರಾಫಿಕ್‌ನಲ್ಲಿ ಸಾಗಿಸಲಾಗಿದೆ. ಆಂಬುಲೆನ್ಸ್‌ನಲ್ಲಿ ೧೫೦ ಕಿಮೀ ಗಳನ್ನು ೭೦ ನಿಮಿಷಗಳಲ್ಲಿ ಕ್ರಮಿಸಿ ೧೪ರ ಆದಿತ್ಯ ಹಲವರಿಗೆ ಮರುಜೀವ ಕೊಟ್ಟಿದ್ದಾನೆ. ಬಾಲಕನ ಕಣ್ಣು, ಕಿಡ್ನಿ, ಹೃದಯ ಹಾಗೂ ಲಿವರ್‌ಅನ್ನು ದಾನ ಮಾಡಲಾಗಿದೆ. ಇದನ್ನೂ ಓದಿ: ಐಷಾರಾಮಿ ಕಾರು ಬಾಡಿಗೆ ಪಡೆದು ಅಡವಿಡುತ್ತಿದ್ದ ಖದೀಮರು ಅರೆಸ್ಟ್

Share This Article
Leave a Comment

Leave a Reply

Your email address will not be published. Required fields are marked *