ನವದೆಹಲಿ: ಒಬ್ಬ ವ್ಯಕ್ತಿಯ ಅಂಗಾಂಗ ದಾನದಿಂದ (Organ Donation) 8ರಿಂದ 9 ಮಂದಿಗೆ ಜೀವದಾನ ಮಾಡಬಹುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಜನತೆಗೆ ಅಂಗಾಂಗ ದಾನದ ಮಹತ್ವವನ್ನು ತಿಳಿಸಿದ್ದಾರೆ. ಅಂಗಾಂಗ ದಾನ ಮಾಡುವಂತೆ ನಾಗರಿಕರಿಗೆ ಕರೆ ನೀಡಿದ್ದಾರೆ.
ಮನ್ ಕಿ ಬಾತ್ (Mann Ki Baat) ಮಾಸಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತರರಿಗೆ ಹೊಸ ಜೀವನ ನೀಡುವ ನಿಟ್ಟಿನಲ್ಲಿ ಜನರನ್ನು ಉತ್ತೇಜಿಸಲು ಸರ್ಕಾರವು ಹಲವಾರು ನಿಯಮಗಳನ್ನು ಸಡಿಲಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅನರ್ಹಗೊಂಡ ಸಂಸದ – ಅಧಿಕೃತ ಟ್ವಿಟ್ಟರ್ ಖಾತೆಯ ಬಯೋದಲ್ಲಿ ಬರೆದುಕೊಂಡ ರಾಹುಲ್ ಗಾಂಧಿ
ಇಂದು ನಾವು ಆಜಾದಿ ಕಾ ಅಮೃತಕಲ್ ಅನ್ನು ಆಚರಿಸುತ್ತಿದ್ದೇವೆ. ಜೊತೆಗೆ ಹೊಸ ನಿರ್ಣಯಗಳೊಂದಿಗೆ ಮುಂದುವರಿಯುತ್ತಿದ್ದೇವೆ. ಈಗ ‘ಮನ್ ಕಿ ಬಾತ್’ 99ನೇ ಸಂಚಿಕೆ ಮುಗಿಸಿದ್ದು, 100ನೇ ಸಂಚಿಕೆಗೆ ನಿಮ್ಮೆಲ್ಲರ ಸಲಹೆಗಳನ್ನು ಪಡೆಯಲು ನಾನು ತುಂಬಾ ಉತ್ಸುಕನಾಗಿದ್ದೇನೆ. ನಿಮ್ಮ ಸಲಹೆಗಳು 100 ನೇ ಸಂಚಿಕೆಯನ್ನು ಇನ್ನಷ್ಟು ಸ್ಮರಣೀಯವಾಗಿಸುತ್ತದೆ ಎಂದು ಹೇಳಿದ್ದಾರೆ.
ಅಂಗಾಂಗ ದಾನ ಮಹತ್ವ ಕುರಿತು ಮಾತನಾಡಿದ ಮೋದಿ, ಒಬ್ಬ ವ್ಯಕ್ತಿಯು ಮರಣದ ನಂತರ ತನ್ನ ಅಂಗಗಳನ್ನು ದಾನ ಮಾಡಿದಾಗ, ಅದು 8ರಿಂದ 9 ಜನರಿಗೆ ಹೊಸ ಜೀವನ ನೀಡಲು ಸಾಧ್ಯವಾಗುತ್ತದೆ. ಅಂಗಾಂಗ ದಾನವನ್ನು ಉತ್ತೇಜಿಸಲು, ಇಡೀ ದೇಶದಲ್ಲಿ ಇದೇ ರೀತಿಯ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವುದು ನನಗೆ ತುಂಬಾ ತೃಪ್ತಿ ತಂದಿದೆ ಎಂದಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿ ಸ್ಟ್ರೆಚರ್ ಇಲ್ಲದೆ ಬಟ್ಟೆಯಲ್ಲಿಯೇ ವೃದ್ಧ ರೋಗಿಯನ್ನು ಎಳೆದೊಯ್ದರು!
ಅಂಗಾಂಗ ದಾನಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರ ಅದಕ್ಕೆ ಸಂಬಂಧಿಸಿದ ಕನಿಷ್ಠ ವಯೋಮಿತಿ ಮತ್ತು ವಾಸಸ್ಥಳ ನಿಯಮವನ್ನು ತೆಗೆದುಹಾಕಿದೆ ಎಂದು ತಿಳಿಸಿದ್ದಾರೆ.
ವ್ಯಕ್ತಿಯು ಯಾವುದೇ ರಾಜ್ಯಕ್ಕೆ ಹೋಗಿ ಅಂಗಾಂಗ ದಾನಕ್ಕಾಗಿ ನೋಂದಾಯಿಸಿಕೊಳ್ಳಬಹುದು. ಅಂಗಾಂಗ ದಾನಕ್ಕೆ ಕನಿಷ್ಠ ವಯಸ್ಸು 65 ವರ್ಷ ಎಂಬ ನಿರ್ಬಂಧವನ್ನೂ ಸರ್ಕಾರ ತೆಗೆದುಹಾಕಿದೆ. ದೇಶವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕೆಂದು ನಾನು ಕೋರುತ್ತೇನೆ. ನಿಮ್ಮ ಒಂದು ನಿರ್ಧಾರವು ಅನೇಕ ಜೀವಗಳನ್ನು ಉಳಿಸಬಹುದು. ಅನೇಕ ಜೀವಗಳಿಗೆ ಜೀವದಾನ ಮಾಡಬಹುದು ಎಂದು ಕರೆ ನೀಡಿದ್ದಾರೆ.