ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಕರಡು ಬಿಲ್ (Draft Bill) ಅಂತಿಮ ಮಾಡಿದ ಕೂಡಲೇ ಸುಗ್ರಿವಾಜ್ಞೆ ಜಾರಿ ಆಗಲಿದೆ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ತಿಳಿಸಿದ್ದಾರೆ.
ಮೈಕ್ರೋ ಫೈನಾನ್ಸ್ (Micro Finance) ಕಿರುಕುಳ ತಡೆಗೆ ಸುಗ್ರಿವಾಜ್ಞೆ ಜಾರಿ ಮಾಡೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸುಗ್ರಿವಾಜ್ಞೆ ಇವತ್ತು ಆಗಬಹುದು ಅನಿಸುತ್ತದೆ. ಸಿಎಂಗೆ ಆರೋಗ್ಯ ತೊಂದರೆ ಇದೆ. ಕರಡು ಬಿಲ್ ಸಿಎಂ ನೋಡಬೇಕು. ಅವರು ನೋಡಿ ಸಹಿ ಹಾಕಬೇಕು. ಅವರು ಸಹಿ ಮಾಡಿ ಡ್ರಾಫ್ಟ್ ಕಳುಹಿಸುತ್ತಾರೆ. ಅದಾದ ಮೇಲೆ ಸುಗ್ರಿವಾಜ್ಞೆ ಜಾರಿ ಆಗುತ್ತದೆ ಎಂದರು. ಇದನ್ನೂ ಓದಿ: ʻಕೇಂದ್ರದಿಂದ ರಾಜ್ಯಕ್ಕೆ ಮತ್ತೆ ಚೊಂಬು, ಚಿಪ್ಪು.. ಗೋವಿಂದ ಗೋವಿಂದ..ʼ – ಎಂ. ಲಕ್ಷ್ಮಣ್ ಲೇವಡಿ
ಈಗ ಇರೋ ಕಾನೂನಿಗೆ ಕೆಲವು ಕಾನೂನುಗಳನ್ನು ಸೇರಿಸೋ ಬಗ್ಗೆ ಚರ್ಚೆ ಆಗಿದೆ. ಹೊಸ ಕಾನೂನುಗಳನ್ನು ಸೇರ್ಪಡೆ ಮಾಡಿದ್ದೇವೆ. ಕರಡು ಪ್ರತಿ ನಾನು ನೋಡಿಲ್ಲ. ಸಿಎಂ ಸಹಿ ಆದ ಕೂಡಲೇ ಸುಗ್ರಿವಾಜ್ಞೆ ಫೈನಲ್ ಆಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ವಿಜಯೇಂದ್ರನ ಕರ್ಮಕಾಂಡದ ಬಗ್ಗೆ ವಿವರಿಸಲು ದೆಹಲಿಗೆ ಹೊರಟಿದ್ದೇವೆ – ಯತ್ನಾಳ್ ಲೇವಡಿ