ಲಕ್ನೋ: ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಮಾರ್ಚ್ 29 ರಿಂದ ನಿರಂತರ ವಿಚಾರಣೆ ನಡೆಸಲಾಗುವುದು ಎಂದು ಅಲಹಾಬಾದ್ ಹೈಕೋರ್ಟ್ ತಿಳಿಸಿದೆ.
ವಾರಣಾಸಿ ಜಿಲ್ಲಾ ನ್ಯಾಯಾಲಯದ ವಿಚಾರಣೆಗೆ ತಡೆ ಕೋರಿ ವಾರಣಾಸಿಯ ಅಂಜುಮನ್ ಇಂತಾಝಾಮಿಯಾ ಮಸಾಜಿದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪ್ರಕಾಶ್ ಪಾಡಿಯಾ ಅವರ ಪೀಠ ನಿರಂತರ ವಿಚಾರಣೆ ನಡೆಸುವುದಾಗಿ ಹೇಳಿದೆ. ಇದನ್ನೂ ಓದಿ: ಸತತ 3ನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ
Advertisement
Advertisement
ಜ್ಞಾನವಾಪಿ-ಕಾಶಿ ಭೂ ವಿವಾದ ಪ್ರಕರಣದಲ್ಲಿ ವಾರಣಾಸಿ ಕೆಳ ನ್ಯಾಯಾಲಯದ ಆದೇಶ ಸೇರಿದಂತೆ ಮೊಕದ್ದಮೆಗೆ ನ್ಯಾಯಾಲಯವು ಈಗಾಗಲೇ ತಡೆ ನೀಡಿದೆ. ಇದರಲ್ಲಿ ಮಸೀದಿ ಸಂಕೀರ್ಣದ ಸಮೀಕ್ಷೆಯನ್ನು ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‍ಐ) ನಿರ್ದೇಶನ ನೀಡಿತ್ತು. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ತಾಯಿ, ಮಗ ಆತ್ಮಹತ್ಯೆ
Advertisement
ಸ್ವಯಂ ಭೂ ಭಗವಂತ ವಿಶ್ವೇಶ್ವರನು ವಿವಾದಿತ ರಚನೆಯಲ್ಲಿ ನೆಲೆಸಿದ್ದಾನೆ. ಆದ್ದರಿಂದ ವಿವಾದಿತ ಭೂಮಿ ಸ್ವತಃ ವಿಶ್ವೇಶ್ವರನ ಅವಿಭಾಜ್ಯ ಅಂಗವಾಗಿದೆ ಎಂದು ಸಲ್ಲಿಕೆಯಾಗಿತ್ತು. ಇದಕ್ಕೆ ಪ್ರತಿವಾದ ಮಂಡಿಸಿದ ಮಜಿದ್ ಸಮಿತಿಯು ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ, 1991 ರ ನಿಬಂಧನೆಗಳ ಪ್ರಕಾರ ಅನ್ವಯವಾಗುವುದಿಲ್ಲ. ಹೀಗಾಗಿ ಅರ್ಜಿ ವಜಾ ಮಾಡುವಂತೆ ಮನವಿ ಮಾಡಿತ್ತು.