ಇತ್ತೀಚೆಗಷ್ಟೇ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ (A.R. Rahman) ಅವರ ಕಾರ್ಯಕ್ರಮದಲ್ಲಿ ಸಾಕಷ್ಟು ಜನರಿಗೆ ತೊಂದರೆ ಆಯಿತು ಎನ್ನುವ ಕಾರಣಕ್ಕಾಗಿ ಆಕ್ರೋಶ ವ್ಯಕ್ತವಾಗಿತ್ತು. ಹತ್ತು ಸಾವಿರ ಜನರಷ್ಟೇ ಸೇರಬಹುದಾದ ಸ್ಥಳದಲ್ಲಿ 40 ಸಾವಿರಕ್ಕೂ ಹೆಚ್ಚು ಜನರಿಗೆ ಟಿಕೆಟ್ ನೀಡಿ ಸಂಘಟಿಕರು ಅವ್ಯವಸ್ಥೆಗೆ ಕಾರಣವಾಗಿದ್ದರು. ಇದರಿಂದಾಗಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ತೊಂದರೆಯಾಗಿತ್ತು ಎಂದು ದೂರಿದ್ದರು. ಈ ಕುರಿತು ರೆಹಮಾನ್ ಕ್ಷಮೆ ಕೂಡ ಕೇಳಿದ್ದರು.
Advertisement
ಈ ಕಾರ್ಯಕ್ರಮದಲ್ಲಿ ನನ್ನದು ಸಂಗೀತ ನೀಡುವ ಪಾತ್ರವಷ್ಟೇ. ಉಳಿದಂತೆ ಯಾವ ವಿಚಾರವೂ ನನಗೆ ಗೊತ್ತಿರಲಿಲ್ಲ. ಹೆಚ್ಚು ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ನೂಕು ನುಗ್ಗಲು ಉಂಟಾಗಿದೆ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ ಮತ್ತು ಈ ಕುರಿತಂತೆ ಯಾರನ್ನೂ ನಾನು ದೂರುವುದಿಲ್ಲ ಎಂದು ರೆಹಮಾನ್ ಟ್ವೀಟ್ ಮಾಡಿದ್ದರು. ಈ ಕಾರ್ಯಕ್ರಮದ ಕುರಿತಂತೆ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸ್ (Police) ಇಲಾಖೆ ತನಿಖೆಗೆ (Investigation) ಮುಂದಾಗಿದೆ. ಇದನ್ನೂ ಓದಿ:ಕಿಚ್ಚನ 50ನೇ ಚಿತ್ರಕ್ಕೆ ‘ಕಾಂತಾರ’ ಹೀರೋ ಆ್ಯಕ್ಷನ್ ಕಟ್
Advertisement
Advertisement
ರೆಹಮಾನ್ ಅವರ ಈ ಸಂಗೀತ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಕೂಡ ಆಗಿದೆ ಎಂದು ವರದಿಗಳು ಆಗಿವೆ. ಅಲ್ಲದೇ ಪೊಲೀಸ್ ಭದ್ರತೆ ಕೂಡ ಸೂಕ್ತವಾಗಿ ಇರಲಿಲ್ಲ ಎನ್ನುವ ದೂರುಗಳಿವೆ. ಇವೆಲ್ಲವನ್ನೂ ಪರಿಗಣಿಸಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಈಗಾಗಲೇ ಭದ್ರತೆಗೆ ನಿಯೋಜನೆಗೊಂಡಿದ್ದ ಅಧಿಕಾರಿಗೆ ವರ್ಗಾವಣೆ ಶಿಕ್ಷೆ ಕೂಡ ನೀಡಲಾಗಿದೆ.
Advertisement
ಈ ಕಾರ್ಯಕ್ರಮದಲ್ಲಿ ಒಟ್ಟು 36 ಸಾವಿರ ಟಿಕೆಟ್ ಮಾರಾಟವಾಗಿವೆಯಂತೆ. ಜೊತೆಗೆ ಟಿಕೆಟ್ ಇಲ್ಲದೇ ಅನೇಕರು ಒಳ ನುಗ್ಗಿದ್ದಾರೆ ಎಂದು ಹೇಳಲಾಗುತ್ತಿದೆ. ನಕಲಿ ಟಿಕೆಟ್ ಪಡೆದೂ ಜನರು ನುಗ್ಗಿದ್ದಾರೆ ಎನ್ನುವ ಮಾಹಿತಿ ಇದೆ. ಈ ಎಲ್ಲವನ್ನೂ ತನಿಖೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Web Stories