ಮುಂಬೈ: ವಿಶ್ವದ ಶ್ರೀಮಂತ ಟೂರ್ನಿ ಎಂದೇ ಗುರುತಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 17ನೇ ಆವೃತ್ತಿ ಇಂದಿನಿಂದ (ಮಾ.22) ಆರಂಭಗೊಳ್ಳುತ್ತಿದೆ.
Advertisement
ಐಪಿಎಲ್ ಟೂರ್ನಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವ ಆಟಗಾರರು ಉದಯೋನ್ಮುಖ ಪ್ರತಿಭೆಗಳಾಗಿ ಹೊರಹೊಮ್ಮುತ್ತಿದ್ದಾರೆ. ಅಲ್ಲದೇ ಐಪಿಎಲ್ನಲ್ಲಿ ತೋರಿದ ಅಸಾಧಾರಣ ಪ್ರತಿಭಾವಂತರು ರಾಷ್ಟ್ರೀಯ ತಂಡಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದಾರೆ. 2023ರ ಐಪಿಎಲ್ ಬಳಿಕ ಯಶಸ್ವಿ ಜೈಸ್ವಾಲ್ (Yashasvi Jaiswal), ಧ್ರುವ್ ಜುರೆಲ್, ಜಿತೇಶ್ ಶರ್ಮಾ, ರಿಂಕು ಸಿಂಗ್, ಶಿವಂ ದುಬೆ, ಸಾಯಿ ಸುದರ್ಶನ್, ಸರ್ಫರಾಜ್ ಖಾನ್ ಮೊದಲಾದ ಆಟಗಾರರು ಟೀಂ ಇಂಡಿಯಾಕ್ಕೆ ಎಂಟ್ರಿ ಕೊಟ್ಟಿರೋದು ಇದಕ್ಕೆ ತಾಜಾ ಉದಾಹರಣೆಯಾಗಿದೆ.
Advertisement
Advertisement
ಅಲ್ಲದೇ ಪ್ರತಿ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರನಿಗೆ ಆರೆಂಜ್ ಕ್ಯಾಪ್ (Orange Cap), ಅತ್ಯಧಿಕ ವಿಕೆಟ್ ಪಡೆದ ಬೌಲರ್ಗೆ ಪರ್ಪಲ್ ಕ್ಯಾಪ್ನೊಂದಿಗೆ (Purple Cap) ನಗದು ಬಹುಮಾನ ನೀಡಲಾಗುತ್ತದೆ. 2008ರ ಚೊಚ್ಚಲ ಆವೃತ್ತಿಯಲ್ಲಿ ಕಿಂಗ್ಸ್ ಪಂಜಾಬ್ ತಂಡದಲ್ಲಿದ್ದ ಶಾನ್ ಮಾರ್ಷ್ 616 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದರು. ಆ ನಂತರ ಸಚಿನ್ ತೆಂಡೂಲ್ಕರ್ ಅವರಿಂದ ಹಿಡಿದು ಶುಭಮನ್ ಗಿಲ್ ವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆರೆಂಜ್ ಕ್ಯಾಪ್ ಹಾಗೂ ಪರ್ಪಲ್ ಕ್ಯಾಪ್ ವಿಜೇತರ ಪೂರ್ಣ ಪಟ್ಟಿಯನ್ನು ಇಲ್ಲಿ ನೋಡಬಹುದು.
Advertisement
ಐಪಿಎಲ್ ಇತಿಹಾಸದಲ್ಲಿ ಆರೆಂಜ್ ಕ್ಯಾಪ್ ವಿನ್ನರ್ಸ್:
2023 – ಗುಜರಾತ್ ಟೈಟಾನ್ಸ್ – ಶುಭಮನ್ ಗಿಲ್ – 890 ರನ್
2022 – ರಾಜಸ್ಥಾನ್ ರಾಯಲ್ಸ್ – ಜೋಸ್ ಬಟ್ಲರ್ – 863 ರನ್
2021 – ಚೆನ್ನೈ ಸೂಪರ್ಕಿಂಗ್ಸ್ – ಋತುರಾಜ್ ಗಾಯಕ್ವಾಡ್ – 635 ರನ್
2020 – ಕಿಂಗ್ಸ್ ಪಂಜಾಬ್ – ಕೆ.ಎಲ್ ರಾಹುಲ್ – 670 ರನ್
2019 – ಸನ್ ರೈಸರ್ಸ್ ಹೈದರಾಬಾದ್ – ಡೇವಿಡ್ ವಾರ್ನರ್ – 692 ರನ್
2018 – ಸನ್ ರೈಸರ್ಸ್ ಹೈದರಾಬಾದ್ – ಕೇನ್ ವಿಲಿಯಮ್ಸನ್ – 735 ರನ್
2017 – ಸನ್ ರೈಸರ್ಸ್ ಹೈದರಾಬಾದ್ – ಡೇವಿಡ್ ವಾರ್ನರ್ – 641 ರನ್
2016 – ರಾಯಲ್ ಚಾಲೆಂಜರ್ಸ್ ಬೆಂಗಳೂರು – ವಿರಾಟ್ ಕೊಹ್ಲಿ – 973 ರನ್
2015 – ಸನ್ ರೈಸರ್ಸ್ ಹೈದರಾಬಾದ್ – ಡೇವಿಡ್ ವಾರ್ನರ್ – 562 ರನ್
2014 – ಕೋಲ್ಕತ್ತಾ ನೈಟ್ರೈಡರ್ಸ್ – ರಾಬಿನ್ ಉತ್ತಪ್ಪ – 660 ರನ್
2013 – ಚೆನ್ನೈ ಸೂಪರ್ ಕಿಂಗ್ಸ್ – ಮೈಕಲ್ ಹಸ್ಸಿ – 733 ರನ್
2012 – ಆರ್ಸಿಬಿ – ಕ್ರಿಸ್ ಗೇಲ್ – 733 ರನ್
2011 – ಆರ್ಸಿಬಿ – ಕ್ರಿಸ್ ಗೇಲ್ – 608 ರನ್
2010 – ಮುಂಬೈ ಇಂಡಿಯನ್ಸ್ – ಸಚಿನ್ ತೆಂಡೂಲ್ಕರ್ – 618 ರನ್
2009 – ಸಿಎಸ್ಕೆ – ಮ್ತಾಥ್ಯೂ ಹೇಡನ್ – 572 ರನ್
2008 – ಕಿಂಗ್ಸ್ ಪಂಜಾಬ್ – ಶಾನ್ ಮಾರ್ಷ್ – 616 ರನ್
ಪರ್ಪಲ್ ಕ್ಯಾಪ್ – ಯಾವ ವರ್ಷ ಯಾರ ಮುಡಿಗೆ?