ಸವಿಯಿರಿ ತಣ್ಣನೆಯ ಆರೆಂಜ್ ಕ್ಯಾಂಡಿ

Public TV
1 Min Read
ORANGE CANDY

ಪ್ರಸ್ತುತ ಬಿಸಿಲಿನ ಝಳ ಹೆಚ್ಚಾಗಿದ್ದು, ಜನರು ತಂಪು ಪಾನೀಯಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಬರೀ ದ್ರವ ಪಾನೀಯಗಳು ಮಾತ್ರವಲ್ಲದೇ ಐಸ್‌ಕ್ಯಾಂಡಿ ಕೂಡಾ ಅತಿಹೆಚ್ಚು ವ್ಯಾಪಾರವಾಗುತ್ತದೆ. ಅಲ್ಲದೇ ಐಸ್‌ಕ್ಯಾಂಡಿ ಸಾಮಾನ್ಯವಾಗಿ ಎಲ್ಲಾ ಮಕ್ಕಳನ್ನು ತನ್ನತ್ತ ಸೆಳೆಯುತ್ತದೆ. ಇಂದು ಆರೆಂಜ್ ಐಸ್‌ಕ್ಯಾಂಡಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ. ಇದು ನ್ಯಾಚುರಲ್ ಆಗಿದ್ದು, ದೇಹಕ್ಕೆ ತಂಪನ್ನು ನೀಡುತ್ತದೆ. ಇದನ್ನೂ ಓದಿ: ಬಿಸಿಲ ದಾಹಕ್ಕೆ ಮ್ಯಾಂಗೋ ಚಿಲ್ಲಿ ಸೋಡಾ ಸವಿದು ಚಿಲ್ ಆಗಿ 

ORANGE CANDY 1

ಬೇಕಾಗುವ ಸಾಮಾಗ್ರಿಗಳು:
ಕ್ಯಾರೆಟ್-5
ಕಿತ್ತಳೆ ಹಣ್ಣು-3

ORANGE CANDY 2

ಮಾಡುವ ವಿಧಾನ:

  • ಮೊದಲಿಗೆ ಕ್ಯಾರೆಟ್ ಅನ್ನು ತಿರುಳು ಬಿಟ್ಟು ಸಣ್ಣಗೆ ತುರಿಯಬೇಕು. ಬಳಿಕ ಅದನ್ನು ಒಂದು ಬಟ್ಟೆಯ ಮೇಲೆ ಹಾಕಿಕೊಳ್ಳಬೇಕು.
  • ನಂತರ ಬಟ್ಟೆಯನ್ನು ಮುಚ್ಚಿ ಕ್ಯಾರೆಟ್ ರಸವನ್ನು ಒಂದು ಪಾತ್ರೆಗೆ ಹಿಂಡಿಕೊಳ್ಳಿ.
  • ಬಳಿಕ ಕಿತ್ತಳೆ ಹಣ್ಣನ್ನು ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ಬೇಕಿದ್ದರೆ ಸ್ವಲ್ಪ ತಣ್ಣನೆಯ ನೀರನ್ನೂ ಸೇರಿಸಿಕೊಳ್ಳಬಹುದು. ಹಾಗೆಯೇ ತೀರಾ ಹುಳಿ ಎನಿಸಿದರೆ ಸ್ವಲ್ಪ ಸಕ್ಕರೆಯನ್ನು ಹಾಕಿಕೊಂಡು ಬಳಿಕ ರುಬ್ಬಿ.
  • ನಂತರ ಕ್ಯಾರೆಟ್ ರಸಕ್ಕೆ ಕಿತ್ತಳೆ ಹಣ್ಣಿನ ರಸವನ್ನು ಸೇರಿಸಿಕೊಳ್ಳಿ.
  • ಬಳಿಕ ಇದನ್ನು ಕ್ಯಾಂಡಿ ಅಚ್ಚುಗಳಿಗೆ ವರ್ಗಾಯಿಸಿಕೊಂಡು ಫ್ರೀಜರ್‌ನಲ್ಲಿ ಒಂದು ರಾತ್ರಿ ಇಡಿ.
  • ಈಗ ಆರೆಂಜ್ ಕ್ಯಾಂಡಿ ಸವಿಯಲು ಸಿದ್ಧ. ಇದನ್ನು ಮಕ್ಕಳು ಮಾತ್ರವಲ್ಲದೆ ದೊಡ್ಡವರು ಸಹ ಇಷ್ಟಪಟ್ಟು ತಿನ್ನುತ್ತಾರೆ. ಇದನ್ನೂ ಓದಿ: ಟೇಸ್ಟಿ ಪುದಿನಾ ಆಲೂ ಫ್ರೈ ನಿಮಗಾಗಿ

Share This Article