ಗದಗ: ಬರಗಾಲದ ಸಂದರ್ಭದಲ್ಲಿ ರೈತನ (Farmer) ಮೇಲೆ ಬ್ಯಾಂಕ್ ಅಧಿಕಾರಿಗಳು ಸಾಲದ (Loan) ವಿಷಯಕ್ಕೆ ದರ್ಪ ತೋರಿದ್ದಾರೆ ಎಂಬ ಆರೋಪ ಜಿಲ್ಲೆಯ ಮುಂಡರಗಿ (Mundaragi) ಪಟ್ಟಣದಲ್ಲಿ ಕೇಳಿ ಬಂದಿದೆ.
ಮುಂಡರಗಿ ತಾಲೂಕಿನ ಕಕ್ಕೂರ ಗ್ರಾಮದ ಬಸವರಾಜ್ ನಿಟ್ಟಾಲಿ ಎಂಬ ರೈತನಿಗೆ ಬ್ಯಾಂಕ್ ಅಧಿಕಾರಿಗಳು ಸಾಲ ತೀರಿಸುವ ಕುರಿತು ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ರೈತ ಬಸವರಾಜ್ ನಿಟ್ಟಾಲಿ ಮುಂಡರಗಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ 1.70 ಲಕ್ಷ ರೂ. ಸಾಲ ಪಡೆದಿದ್ದರು. ಈಗ ಒಂದು ವರ್ಷದಲ್ಲಿ ಅಸಲು, ಬಡ್ಡಿ ಸೇರಿ 2 ಲಕ್ಷ 20 ಸಾವಿರ ರೂ.ಗೂ ಅಧಿಕವಾಗಿದೆ.
- Advertisement
ಬ್ಯಾಂಕ್‌ನವರು ಸಾಲ ತೀರಿಸುವಂತೆ ಪದೇ ಪದೇ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ. ತನ್ನನ್ನು ಎತ್ತಾಕಿಕೊಂಡು ಹೋಗಿ ಬ್ಯಾಂಕ್‌ನಲ್ಲಿ ಕಿರುಕುಳ ನೀಡಿದ್ದಾರೆ. ಹೆದರಿಸಿ ಸಾಲದ ಪತ್ರಕ್ಕೆ ಹೆಬ್ಬೆರಳು ಸಹಿ ಮಾಡಿಸಿಕೊಂಡಿದ್ದಾರೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಪವರ್ ಶೇರಿಂಗ್ ಬಗ್ಗೆ ಪಕ್ಷ ತೀರ್ಮಾನಿಸುತ್ತೆ: ಕೃಷ್ಣ ಭೈರೇಗೌಡ
- Advertisement
ಭೀಕರ ಬರಕ್ಕೆ ತತ್ತರಿಸಿದ ರೈತನ ಮೇಲೆ ಬ್ಯಾಂಕ್ ಅಧಿಕಾರಿಗಳು ದರ್ಪ ತೋರಿದ್ದಾರೆ. ಭೀಕರ ಬರಗಾಲದ ಸಂದರ್ಭದಲ್ಲಿ ಹೀಗೆ ರೈತನ ಮೇಲೆ ಬ್ಯಾಂಕ್ ಅಧಿಕಾರಿಗಳು ಗೂಂಡಾವರ್ತನೆ ತೋರಿದ್ದಾರೆ. ರಜೆ ಇದ್ದರೂ ಸಾಲ ಮರುಪಾವತಿ ಮಾಡುವಂತೆ ರೈತನನ್ನು ಬ್ಯಾಂಕಿಗೆ ಕರೆತಂದು ದಬ್ಬಾಳಿಕೆ ಮಾಡಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಡಿಸುತ್ತಿದ್ದಾರೆ.
ಬ್ಯಾಂಕ್ ಅಧಿಕಾರಿಗಳ ವಿರುದ್ಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಲಾಗಿದೆ. ಬ್ಯಾಂಕ್ ಅಧಿಕಾರಿಗಳ ಅಟ್ಟಹಾಸದಿಂದ ಅನೇಕ ಅನ್ನದಾತರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಬಿಜೆಪಿಯವರಿಗೆ ಬೇರೆಯವರ ಕೆರೆಯಲ್ಲಿ ಮೀನು ಹಿಡಿಯುವುದೇ ಕೆಲಸ: ವೀರಪ್ಪ ಮೊಯ್ಲಿ
Web Stories