ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೇನೋ ವೇದಿಕೆ ಸಜ್ಜಾಯ್ತು. ಆದರೆ ಎರಡು ಪಕ್ಷಗಳು ಕೊಟ್ಟ ಭರವಸೆಗಳನ್ನು ಹೇಗೆ ಈಡೇರಿಸುತ್ತವೆ ಅನ್ನೋದೇ ಇದೀಗ ಕುತೂಹಲ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕೆಲವು ನಿರ್ಧಾರಗಳಿಗೆ ಕುಮಾರಸ್ವಾಮಿ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಈಗಿನ ಜಂಟಿ ಸರ್ಕಾರದಲ್ಲಿ ಸಿಎಂ ಆಗಲಿರುವ ಕುಮಾರಸ್ವಾಮಿ, ಸಿದ್ದರಾಮಯ್ಯರ ಯೋಜನೆಗಳನ್ನ ಕೈ ಬಿಡ್ತಾರಾ ಅನ್ನೋದೇ ಪ್ರಶ್ನೆ. ಹಿಂದೆ ಸಿದ್ದರಾಮಯ್ಯ ಜಾರಿಗೆ ತಂದಿದ್ದ ಹಾಗೂ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದ ಪ್ರಮುಖ ಯೋಜನೆಗಳ ವಿವರ ಇಲ್ಲಿದೆ.
Advertisement
* ಲಿಂಗಾಯತ ಪ್ರತ್ಯೇಕ ಧರ್ಮದ ವಿವಾದ
ಸಿದ್ದರಾಮಯ್ಯ ಪ್ರತ್ಯೇಕ ಲಿಂಗಾಯತ ಧರ್ಮದ ಶಿಫಾರಸ್ಸು ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದರು. ಅದೇ ಕಾಂಗ್ರೆಸ್ ಪಕ್ಷಕ್ಕೂ ಮುಳುವಾಯಿತು ಕೂಡ. ಹಾಗಾದರೆ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಈ ವಿಷಯದಲ್ಲಿ ಯಾವ ನಿಲುವು ತಳೆಯುತ್ತಾರೆ. ಈ ಹಿಂದೆ ತಾವೇ ಹೇಳಿದಂತೆ ರಾಜಕೀಯಕ್ಕಾಗಿ ಧರ್ಮ ಒಡೆಯೋಕೆ ಮುಂದಾಗಬಾರದು ಎಂಬ ಹೇಳಿಕೆಗೆ ಕುಮಾರಸ್ವಾಮಿ ಮುಂದಾಗ್ತಾರಾ. ಇಲ್ಲಾ ಪ್ರತ್ಯೇಕ ಧರ್ಮದ ಶಿಫಾರಸ್ಸಿನ ಮುಂದಿನ ಕ್ರಮಕ್ಕೆ ಚಾಲನೆ ನೀಡ್ತಾರಾ ಎಂಬುದು ಪ್ರಶ್ನೆಯಾಗಿದೆ. ಇದನ್ನೂ ಓದಿ: ಬುಧವಾರ ಸಿಎಂ ಆಗಿ ಹೆಚ್‍ಡಿಕೆ ಪ್ರಮಾಣವಚನ- ಕಾಂಗ್ರೆಸ್‍ಗೆ 20, ಜೆಡಿಎಸ್ ಗೆ 12 ಸಚಿವ ಸ್ಥಾನ
Advertisement
* ಎಸಿಬಿನಾ…? ಲೋಕಾಯುಕ್ತಾನಾ….?
ಸಿದ್ದರಾಮಯ್ಯ ಎಸಿಬಿ ರಚಿಸಿದಾಗ ಕುಮಾರಸ್ವಾಮಿಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಲೋಕಾಯುಕ್ತವನ್ನು ಹಲ್ಲುಕಿತ್ತ ಹಾವು ಮಾಡಿ ಎಸಿಬಿ ರಚಿಸಿ ತಮ್ಮ ಸರ್ಕಾರದ ತಪ್ಪು ಮುಚ್ಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ, ಎಸಿಬಿ ರದ್ದುಗೊಳಿಸಿ ಲೋಕಾಯುಕ್ತಕ್ಕೆ ಶಕ್ತಿ ತುಂಬುತ್ತೇವೆ ಅಂತ ಹೇಳಿದ್ದರು. ಹಾಗಾದ್ರೆ ಕುಮಾರಸ್ವಾಮಿ ಈಗ ಎಸಿಬಿ ರದ್ದು ಮಾಡ್ತಾರಾ? ಲೋಕಾಯುಕ್ತ ಬಲ ಹೆಚ್ಚಿಸ್ತಾರಾ? ಇಲ್ಲಾ ಮೈತ್ರಿ ಧರ್ಮ ಪಾಲನೆಗಾಗಿ ಸೈಲೆಂಟ್ ಆಗ್ತಾರಾ ಎಂಬುದನ್ನು ಕಾದುನೋಡಬೇಕಾಗಿದೆ. ಇದನ್ನೂ ಓದಿ: ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ: ಅಧಿಕಾರ ಸೂತ್ರ ಹೇಗಿರಲಿದೆ? ಸವಾಲುಗಳು ಏನು?
Advertisement
* ವಿವಾದಿತ ಟಿಪ್ಪು ಜಯಂತಿ ಆಚರಣೆ ಮುಂದುವರಿಯುತ್ತಾ..? ರದ್ದಾಗುತ್ತಾ..?
ಟಿಪ್ಪು ಜಯಂತಿ ಆಚರಣೆ ಮೂಲಕ ಅಲ್ಪಸಂಖ್ಯಾತರ ಪಾಲಿನ ಹೀರೋ ಎನ್ನಿಸಿಕೊಂಡಿದ್ದ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂಬ ಅಪಖ್ಯಾತಿಯನ್ನು ಗಳಿಸಿದ್ರು. ಏನೇ ವಿವಾದ ಆದ್ರೂ ಪ್ರತೀವರ್ಷ ಟಿಪ್ಪು ಜಯಂತಿ ಆಚರಿಸುವ ಪಣ ತೊಟ್ಟಿದ್ರು. ಹಾಗಾದ್ರೆ ಕುಮಾರಸ್ವಾಮಿ ಸರ್ಕಾರದಲ್ಲಿ ವಿವಾಧಿತ ಟಿಪ್ಪು ಜಯಂತಿ ಆಚರಣೆ ಆಗುತ್ತಾ ರದ್ದಾಗುತ್ತಾ ಎಂಬುದನ್ನು ನೋಡಬೇಕು.
Advertisement
* ಮಹದಾಯಿ ಸಮಸ್ಯೆ ಪರಿಹಾರಕ್ಕೆ ಕುಮಾರಸ್ವಾಮಿ ಬಳಿ ಇರುವ ಅಸ್ತ್ರ ಏನು…?
ನಾವು ಅಧಿಕಾರಕ್ಕೆ ಬಂದ್ರೆ 6 ತಿಂಗಳ ಒಳಗೆ ಮಹದಾಯಿ ಸಮಸ್ಯೆ ಪರಿಹಾರವಾಗುತ್ತೆ. ರಾಷ್ಟ್ರೀಯ ಪಕ್ಷಗಳಿಗೆ ಇಚ್ಚಾ ಶಕ್ತಿಯ ಕೊರತೆ ಇದೆ ಎಂದಿದ್ದರು. ಮಹದಾಯಿ ಸಮಸ್ಯೆ ಪರಿಹಾರಕ್ಕೆ ಕುಮಾರಸ್ವಾಮಿ ಯಾವ ಅಸ್ತ್ರ ಬಳಸುತ್ತಾರೆ?. ಇದನ್ನೂ ಓದಿ: ಬಿಜೆಪಿ ಎಡವಿದ್ದು ಎಲ್ಲಿ? ಪಕ್ಷದ ಮುಂದಿನ ನಡೆ ಏನು?
* ಸಿದ್ದರಾಮಯ್ಯರ `ಭಾಗ್ಯ’ಗಳಿಗೆ ಎಚ್‍ಡಿಕೆ ಎಳ್ಳುನೀರು ಬಿಡ್ತಾರಾ..?
ಸಿದ್ದರಾಮಯ್ಯ ಅವರ ಭಾಗ್ಯಗಳ ಬಗ್ಗೆ ಕುಮಾರಸ್ವಾಮಿ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಧರ್ಮ ಹಾಗೂ ಜಾತಿ ಆಧಾರಿತ ಭಾಗ್ಯ ಯೋಜನೆಗಳಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಹಾಗಾದ್ರೆ ಹೆಚ್ ಡಿಕೆ ಅಂತಹ ಯೋಜನೆಗಳನ್ನ ಚಾಲನೆಯಲ್ಲಿಡ್ತಾರಾ ಎಂಬುದನ್ನು ಕೂಡ ಕಾದುನೋಡಬೇಕಾಗಿದೆ.