– ಹಿರೇಬೆಣಕಲ್ ಐತಿಹಾಸಿಕ ಸ್ಮಾರಕಗಳಿಗೆ ಧಕ್ಕೆಯಾಗುತ್ತೆ; ಎಚ್.ಆರ್.ಶ್ರೀನಾಥ
ಕೊಪ್ಪಳ: ಜಿಲ್ಲೆಯಲ್ಲಿ ಅಣು ವಿದ್ಯುತ್‌ಸ್ಥಾವರ ಸ್ಥಾಪನೆ ಮಾಡಲು ಆಯ್ಕೆ ಮಾಡಿದ್ದ ಜಾಗಕ್ಕೆ ಇದೀಗ ವಿರೋಧ ವ್ಯಕ್ತವಾಗಿದೆ.
Advertisement
ಹೌದು, ಕೊಪ್ಪಳದ (Koppal) ಗಂಗಾವತಿ (Gangavathi) ತಾಲೂಕಿನ ಹಿರೇಬೆಣಕಲ್‌ನ (Hirebenkal) ಮೋರೆರ ಬೆಟ್ಟದಲ್ಲಿ ಐತಿಹಾಸಿಕ ಸ್ಮಾರಕಗಳಿದ್ದು, ಅದರ ಸಮೀಪ ಅಣು ವಿದ್ಯುತ್ ಸ್ಥಾವರ (Nuclear Plant) ಘಟಕ ಸ್ಥಾಪನೆ ಸರಿಯಲ್ಲ ಎಂದು ವಿರೋಧ ವ್ಯಕ್ತವಾಗಿದೆ. ಒಂದು ವೇಳೆ ಸ್ಥಾಪನೆ ಮಾಡಿದರೆ ರೈತರ ನೇತೃತ್ವದಲ್ಲಿ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ ಹೇಳಿದರು.ಇದನ್ನೂ ಓದಿ: ರೋಟಿ ಹಂಚಲು ತಡಮಾಡಿದ್ದಕ್ಕೆ ಬೇರೆ ಯುವತಿಯನ್ನು ಮದುವೆಯಾದ ವರ
Advertisement
Advertisement
ಗಂಗಾವತಿ ನಗರದ ಗ್ರಾಮಸ್ಥರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ವಿಶ್ವದ 7 ಅದ್ಭುತಗಳಲ್ಲಿ ಹಿರೇಬೆಣಕಲ್ ಮೋರೆರ ಬೆಟ್ಟದ ಸ್ಮಾರಕಗಳು ಕೂಡ ಒಂದಾಗಿವೆ. ಹಿರೇಬೆಣಕಲ್ ಸಮೀಪದಲ್ಲಿಯೇ ಗಂಡುಗಲಿ ಕುಮಾರರಾಮನ ಕುಮ್ಮಟದುರ್ಗ, ಹೇಮಗುಡ್ಡ ಸೇರಿದಂತೆ ಐತಿಹಾಸಿಕ ಪ್ರದೇಶಗಳು ಇವೆ. ಇಂತಹ ಸ್ಥಳದಲ್ಲಿ ಅಣು ವಿದ್ಯುತ್ ಸ್ಥಾವರ ಘಟಕ ಸ್ಥಾಪನೆ ಮಾಡುವುದರಿಂದ ಇತಿಹಾಸ ಇರುವ ಸ್ಮಾರಕಗಳಿಗೆ ಧಕ್ಕೆ ಉಂಟಾಗುತ್ತದೆ.
Advertisement
ಈಗಾಗಲೇ ಮೋರೆರ ಸ್ಮಾರಕಗಳು ಯುನೆಸ್ಕೋ ಪಟ್ಟಿಯಲ್ಲಿ ಸೇರ್ಪಡೆಗೆ ಶಿಫಾರಸು ಮಾಡಲಾಗಿದೆ. ಅಣುಸ್ಥಾವರ ವಿದ್ಯುತ್ ಘಟಕದಿಂದ ಪ್ರವಾಸಿಗರಿಗೆ ತೊಂದರೆಯಾಗುತ್ತದೆ. ಅಣುಸ್ಥಾವರ ಸ್ಥಾಪನೆಯ ಜಾಗದಿಂದ ಸುಮಾರು 7 ಗ್ರಾಮಗಳು ಒಳಪಡುತ್ತವೆ. ಇದರಿಂದ ಜನರಿಗೆ, ರೈತರಿಗೆ, ವೃದ್ಧರಿಗೆ ಯುವ ಪೀಳಿಗೆಗೆ, ಮಕ್ಕಳಿಗೆ ತೊಂದರೆಯಾಗುತ್ತದೆ. ಘಟಕದಿಂದ ಹೊರಸೂಸುವ ತರಂಗಗಳಿAದ ಕ್ಯಾನ್ಸರ್, ಕಿಡ್ನಿ ವೈಫಲ್ಯಗಳ ಸಾಧ್ಯತೆಗಳು ಸಾಕಷ್ಟು ಇವೆ. ಹಿರೇಬೆಣಕಲ್ ಗ್ರಾಮದ ಸಮೀಪದಲ್ಲಿ ಘಟಕ ಸ್ಥಾಪನೆಗೆ ಸರ್ವೇ ನಡೆಸಿರುವುದನ್ನು ಕೂಡಲೇ ಕೈಬಿಡಬೇಕು. ಜಿಲ್ಲಾಡಳಿತ ರಾತ್ರೋರಾತ್ರಿ ಸರ್ವೇಯನ್ನು ನಡೆಸಿ, ಗೌಪ್ಯವಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಖಂಡನೀಯ. ಕೂಡಲೇ ಜಿಲ್ಲಾಧಿಕಾರಿಗಳು ಘಟಕಕ್ಕೆ ಭೂಮಿ ಗುರುತಿಸಿರುವುದನ್ನು ರದ್ದು ಮಾಡಬೇಕು. ಇಲ್ಲದಿದ್ದರೆ ಜಿಲ್ಲಾಡಳಿತದ ವಿರುದ್ಧ ಉಗ್ರ ಹೋರಾಟ ನಡೆಸಲಾಗುತ್ತದೆ ಎಚ್ಚರಿಕೆ ನೀಡಿದರು.ಇದನ್ನೂ ಓದಿ: Mandya | ಠಾಣೆಯಲ್ಲೇ ಪೊಲೀಸ್ ಪೇದೆ ಮೇಲೆ ವ್ಯಕ್ತಿಯಿಂದ ಹಲ್ಲೆ